ಸಿಂಧಗಿ

ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾಕ್ಕೆ ಭವ್ಯ ಸ್ವಾಗತ

ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾಕ್ಕೆ ಭವ್ಯ ಸ್ವಾಗತ
ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾಕ್ಕೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳೊ

ಸಿಂದಗಿ07: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2020-23ರ ಜನೇವರಿ 6, 7 ಮತ್ತು 8 ರಂದು ಹಾವೇರಿಯಲ್ಲಿ ನಡೆಯಲಿರುವ ಸಮ್ಮೇಳನದ ಸಿಂದಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾಕ್ಕೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡಾಂಭೆ ವೃತ್ತದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಅಳ್ಳೋಳ್ಳೊಮಠದ ಶ್ರೀಗಳು, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹಾಗೂ ಮಾಜಿ ಶಾಸಕ ಅಶೋಕ ಶಾಬಾದಿ ಮೇವರಣಿಗೆಗೆ ಭವ್ಯ ಸ್ವಾಗತಿಸಿ ಚಾಲನೆ ನೀಡಿದರು. 

          ನಂತರ ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ ಹೊರಟ ಕನ್ನಡಡರಥದ ಮೇರವಣಿಗೆಯು ವಿವಿಧ ಕಲಾ ತಂಡಗಳು, ಪಟ್ಟಣದ ವಿವಿದ ಶಾಲೆಗಳ ಮಕ್ಕಳು ಪಾಲ್ಗೊಂಡು ಎಚ್.ಜಿ.ಕಾಲೇಜವರೆಗೆ ಸಾಗಿಬಂತು. 

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ,  ಗುತ್ತಿಗೆದಾರ ಮುತ್ತು ಮುಂಡೆವಾಡಗಿ, ಕಸಾಪ ಪದಾಧಿಕಾರಿಗಳಾದ ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ರಮೇಶ ಪೂಜಾರಿ, ಶಾರದಾ ಮಂಗಳೂರ, ಪಂಡಿತ ಯಂಪೂರೆ, ಖಾದರ ವಾಲಿಕಾರ, ಶಿವು ಬಡಾನವರ, ಶೈಲಜಾ ಸ್ಥಾವರಮಠ, ಎನ್.ಎಂ.ಚಪ್ಪರಬಂದ, ಶಾಂತೂ ರಾಣಾಗೋಳ, ಬೀಮಣ್ಣ ಹೆರೂರ, ಅಶೋಕ ಸುಲ್ಪಿ ಸೇರಿದಂತೆ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾಪ್ರೌಡಶಾಲೆ, ಚೆನ್ನವೀರ ಸ್ವಾಮಿಜಿ ಪ್ರೌಡಶಾಲೆ, ಜ್ಞಾನಭಾರತಿ ವಿಧ್ಯಾಮಂದಿರ, ಎಚ್.ಜಿ. ಬಾಲಕರ ಪ್ರೌಡಶಾಲೆ  ವಿವಿಧ ಶಾಲೆಗಳ ಮಕ್ಕಳು ಪಾಲ್ಗೋಂಡಿದ್ದರು. 


ಸುದ್ದಿ ಓದಿ