ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ನಡೆದ ಭವ್ಯ ಆರೋಗ್ಯ ಶಿಬಿರ ಯಶಸ್ವಿಯಾಗಿ ಸಂಪನ್ನ; ಸಾವಿರಾರು ಜನರಿಗೆ ಲಾಭ..!!
ಕಾಗವಾಡ 01: ಮಾಜಿ ಸಚಿವ ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಜ.31 ರಂದು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಆರೋಗ್ಯ ಶಿಬಿರದಲ್ಲಿ ಈಗಾಗಲೇ ಸಾವಿರಾರು ಜನರು ಲಾಭ ಪಡೆದುಕೊಂಡಿದ್ದು, ಇಂದೂ ಕೂಡಾ ಶಿಬಿರವನ್ನು ಮುಂದುವರೆಸಲಾಗಿದೆ ಎಂದು ಶ್ರೀಮಂತ ಪಾಟೀಲ ಫೌಂಡೇಶನ್ ಸಂಘಟಕ ಸಚೀನ ದೇಸಾಯಿ ಮತ್ತು ಅಬ್ದುಲ ಗಡ್ಡೇಕರ ತಿಳಿಸಿದ್ದಾರೆ. ಅವರು ರವಿವಾರ ದಿ. 01 ರಂದು ಭವ್ಯ ಆರೋಗ್ಯ ಶಿಬಿರದ ಮುಕ್ತಾಯದ ನಂತರ ಮಾತನಾಡುತ್ತಿದ್ದರು. ಕಣ್ಣು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ತಪಾಸಣೆ ಮಾಡಿಕೊಂಡ ನೂರಾರು ಜನರಿಗೆ ಉಚಿತವಾಗಿ ಚಸ್ಮಾ ವಿತರಿಸಲಾಗಿದೆ.
ಅದರಲ್ಲಿ 50 ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗಿದ್ದು, ಇಂದು ಅವರನ್ನು ಸಾಂಗಲಿಯ ನಂದಾದೀಪ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದ್ದೆ. ಮಿರಜನ ಸೇವಾಸದನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಜನರು ಪಾಲ್ಗೊಂಡು, ಲಾಭ ಪಡೆದುಕೊಂಡರು. ಈ ಪೈಕಿ 700 ಕ್ಕೂ ಹೆಚ್ಚು ಹೃದಯ ಸಂಬಂಧಿತ ಇಸಿಜಿ, ಎಂಜೋಗ್ರಾಫಿ, ಎಂಜೋಪ್ಲಾಸ್ಟಿ, ಬೈಪಾಸ್ ಸರ್ಜರಿ ಸೇರಿದಂತೆ, ಚಿಕ್ಕಮಕ್ಕಳ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು. ರಕ್ತದಾನ ಶಿಬಿರದಲ್ಲಿ ನೂರಾರು ಜನ ಜೊತೆಗೆ 5 ಸಕ್ಕರೆ ಕಾರ್ಖಾನೆಗಳಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಸುಮಾರು ಜನರು ಸ್ವಯಂ ಪ್ರೇರಣೆಯಿಂದ ರಕ್ತ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಅನೇಕ ಶಿಬಿರದಲ್ಲಿ ಪಾಲ್ಗೊಂಡ ಅನೇಕ ಫಲಾನುಭವಿಗಳು ಮಾತನಾಡಿ, ಶ್ರೀಮಂತ ಪಾಟೀಲ ಅವರ ಕಾರ್ಯವನ್ನು ಕೊಂಡಾಡಿದರು. ಶ್ರೀಮಂತ ಪಾಟೀಲ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಪಾಟೀಲ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಭವ್ಯ ಆರೋಗ್ಯ ಶಿಬಿರವನ್ನು ಶ್ರೀಮಂತ ಪಾಟೀಲ್ ಫೌಂಡೇಶನ್ ಸಂಘಟಕರಾದ ಸಚಿನ್ ದೇಸಾಯಿ, ಸಂಜಯಕುಮಾರ ಕಾಯಪುರೆ, ಅಬ್ದುಲ್ ಗಡ್ಡೆಕರ್, ವಸಂತ ಪಾಟೀಲ, ಭರತ ಪಾಟೀಲ, ಶೇಖರ್ ಕಿನಂಗೆ, ಅಭಿಜಿತ್ ಕಿತ್ತೂರೆ, ತಮ್ಮನ್ನಾ ಚೌಗುಲೆ, ವಿನಾಯಕ ಶಿಂಧೆ, ರಾಜು ಮಾನೆ, ರಮೇಶ ಘೋಡಸೆ, ರಾಜು ಡೊಳ್ಳಿ, ದೀಪಕ ಕಾಂಬಳೆ, ಕೃಷ್ಣಾ ಪಾಟೀಲ, ಮಂಜುನಾಥ ಮಗದುಮ್ ಸೇರಿದಂತೆ ಅನೇಕರು ಶಿಬಿರದ ಯಶಸ್ವಿಗೆ ಸಹಕಾರ ನೀಡಿದ್ದಾರೆಂದು ತಿಳಿಸಿದರು. ಪಂಚ್ ನ್ಯೂಜ್ಗಾಗಿ ಕೆಂಪವಾಡದಿಂದ ಬಸವರಾಜ ತಾರದಾಳೆ