ಅಂತರಾಷ್ಟ್ರೀಯ ಮಟ್ಟದ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 16: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರದ ಪ್ರತಿಯೊಬ್ಬ ಮಕ್ಕಳಿಗೂ ಸರ್ವ ಶಿಕ್ಷಣ ಅಭಿಯಾನ ಅಥವಾ ಪ್ರಧಾನಮಂತ್ರಿಯ ಶಿಕ್ಷಣ ಅಭಿಯಾನ ಯೋಜನೆಯಡಿ ಅಂತರಾಷ್ಟ್ರೀಯ ಮಟ್ಟದ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಬೇಕು ಅಂದಾಗ ಯುವಕರ ಶಕ್ತಿ ದೇಶದ ಆಸ್ತಿ ಎಂಬ ಘೋಷಣೆಗೆ ನಿಜವಾದ ಶಕ್ತಿ ಬರುತ್ತದೆ ಆವಾಗ ಯುವಕರು ದೇಶದ ಆಸ್ತಿಯಾಗಲು ಸಾಧ್ಯ ಎಂದು ಪಟ್ಟಣದ ಆಜಾದ್ ನಗರದ ಇಂಡಿಯನ್ ರೈಸಿಂಗ್ ಸ್ಟಾರ್ ಫೌಂಡೇಶನ್ವತಿಯಿಂದ ಜರುಗಿದ ಸಂಭ್ರಮದ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ ಮಣ್ಣಣ್ಣವರ ಪ್ರಧಾನಿಯವರಿಗೆ ಉಚಿತ ಶಿಕ್ಷಣ ಯೋಜನೆ ಜಾರಿಗೆ ಮನವಿ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸುಲೇಮಾನ್ ಖಾಜೇ ಖಾನಾವರ್ ಮಾಜಿ ಪುರಸಭಾ ಅಧ್ಯಕ್ಷ ಕರೀಂ ಸಾಬ್ ಮೊಗಲಲ್ಲಿ ಸ್ವಾತಂತ್ರ್ಯಕ್ಕಾಗಿ ಹಲವಾರು ಹಿರಿಯರು ತಮ್ಮ ಜೀವ ಬಲಿದಾನ ಕೊಟ್ಟಿದ್ದು ಅವರ ಸ್ಮರಣೆಯ ಜೊತೆಗೆ ನಾವೆಲ್ಲರೂ ಭಾರತೀಯರಾಗಿ ಬದುಕಬೇಕು ಎಂದು ಹೇಳಿದರು ಮಾಜಿ ಪುರಸಭಾ ಸದಸ್ಯ ಬಶೀರ್ಖಾನ್ ಎಳ್ಳೂರು, ರೈಸಿಂಗ್ ಸ್ಟಾರ್ ಫೌಂಡೇಶನ್ ಅಧ್ಯಕ್ಷ ನಿಸಾರ್ ಅಹ್ಮದ್ ತೋಕಲ್ಲಿ, ನಿಸಾರ್ ಸವಣೂರು, ಸೈಯದ್ ಬೊಮ್ಮಿಗಟ್ಟಿ, ಇನ್ನು ಹಲವಾರು ಜನರು ಉಪಸ್ಥಿತರಿದ್ದು ಸ್ವಾತಂತ್ರೋತ್ಸವದ ಧ್ವಜಾರೋಹಣ ನೇರವೇರಿಸಿ ಸಿಹಿ ಹಂಚಿ ಭಾರತ್ ಮಾತಾ ಕೀ ಜಯ್ ವಂದೇ ಮಾತರಂ ಎಂದು ಘೋಷಿಸುವ ಮೂಲಕ ಸಂಭ್ರಮಿಸಿದರು