ಮಲಕಸಮುದ್ರ ಗ್ರಾಮದ 15 ವರ್ಷದ ಬಾಲಕ ನಾಪತ್ತೆ
ಲೋಕದರ್ಶನ ವರದಿ
ಯಲಬುರ್ಗಾ 28: ತಾಲೂಕಿನ ಮಲಕಸಮುದ್ರ ಗ್ರಾಮದ ನಿವಾಸಿಯಾದ 15 ವರ್ಷ ವಯಸ್ಸಿನ ಶಿವುಕುಮಾರ್ ತಂದೆ ಗವಿಸಿದ್ದಪ್ಪ ಹಿರೇಕುರುಬರ ಎಂಬ ಬಾಲಕ ಅ. 17ರಂದು ಬೆಳಗ್ಗೆ 07:00 ಘಂಟೆ ಸುಮಾರಿಗೆ ಮಲಕಸಮುದ್ರಾ ಸೀಮಾದ ನಮ್ಮ ಹೊಲದಲ್ಲಿದ್ದ ಕುರಿ ಹಟ್ಟಿಯಿಂದ ಹೋದವನು ಕಾಣೆಯಾಗಿರುವ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಪತ್ತೆಗಾಗಿ ಯಲಬುರ್ಗಾ ಠಾಣೆಯ ಪಿಎಸ್ಐ ವಿಜಯ ಪ್ರತಾಪ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾದ ಬಾಲಕ 4 ಫೂಟ್ 8 ಅಡಿ ಎತ್ತರ, ಕನ್ನಡ ಭಾಷೆ ಬಲ್ಲವನ್ನಾಗಿದ್ದು, ಸಾದ ಕೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟ, ದುಂಡು ಮುಖವನ್ನು ಹೊಂದಿದ್ದಾರೆ.ಈ ಚಹರೆ ಪಟ್ಟಿಯುಳ್ಳ ಬಾಲಕನ ಕುರಿತು ಮಾಹಿತಿ ದೊರೆತಲ್ಲಿ ಸಾರ್ವಜನಿಕರು, ತಾಲೂಕು ಪೋಲಿಸ್ ಠಾಣಾ ಕಚೇರಿ 85342-20133 ವೃತ್ತ ದೂ: 94808-03749ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ