ಸಿರುಗುಪ್ಪ

ಕೆ ಬೆಳಗಲ್: ತುಂಗಭದ್ರಾ ಕಾಲುವೆ ದಾಟುವಾಗ 98 ಕುರಿಗಳ ಸಾವು

ಕೆ ಬೆಳಗಲ್: ತುಂಗಭದ್ರಾ ಕಾಲುವೆ ದಾಟುವಾಗ 98 ಕುರಿಗಳ ಸಾವು

ಸಿರುಗುಪ್ಪ 28: ತಾಲೂಕು ಕೆ ಬೆಳಗಲ್ ಸಮೀಪ ನೆಹರು ನಗರ್ ಕ್ಯಾಂಪ್ ತುಂಗಭದ್ರ ಕಾಲುವೆ ದಾಟುತ್ತಿದ್ದ ಕುರಿಗಳ ಹಿಂಡು ಒಂದರ ಮೇಲೆ ಒಂದು ಕುರಿಗಳು ಬಿದ್ದು ಒಟ್ಟು 98 ಕುರಿಗಳು ಸಾವನ್ನಪ್ಪಿದ ಘಟನೆ ಮಂಗಳವಾರದಂದು ನಡೆದಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕು ವಲಸೆ ಕುರಿಗಾಯಿಗಳಾದ  ಸಿದ್ದಪ್ಪನ 19, ಮಂಜುನಾಥನ 26, ಸತ್ಯಪ್ಪನ 53 ಕುರಿಗಳು ಸಾವಿಗೀಡಾದವು. ಕುರಿಗಳು ಬೆಳಗಾವಿ ಜಿಲ್ಲೆಯಿಂದ ಕುರಿಗಳನ್ನು ಮೇಯಿಸುತ್ತ ಸಿರುಗುಪ್ಪ ತಾಲೂಕಿನ ಕೆ ಬೆಳಗಲ್ ಹತ್ತಿರದ ತುಂಗಭದ್ರ ಕಾಲುವೆಯ ಮೂಲಕ ಕುರಿಗಳನ್ನು ದಾಟಿಸುವ ಸಂದರ್ಭದಲ್ಲಿ ಕುರಿಗಳು ಒಂದರ ಮೇಲೊಂದು ಬಿದ್ದು ಸತಿವೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರು ಭೇಟಿ ನೀಡಿ ಮಾಹಿತಿ ಪಡೆದು ಪತ್ರಕರ್ತರಿಗೆ ಈ ಘಟನೆಯ ವಿಷಯ ನೀಡಿದರು. ಪರಿಹಾರಕ್ಕಾಗಿ ದೂರು ದಾಖಲಿಸುವಂತೆ ತಿಳಿಸಿದರು. ತಾಲೂಕು ಪಶು ಸಂಗೋಪನ ಸಹಾಯಕ ನಿರ್ದೇಶಕ ಡಾ ಗಂಗಾಧರ ಭೇಟಿ ನೀಡಿ ಪರಿಶೀಲಿಸಿದರು 

ಸುದ್ದಿ ಓದಿ