63ನೇ ಕನರ್ಾಟಕ ರಾಜ್ಯೋತ್ಸವ ದಿನ ಆಚರಣೆ ಕನರ್ಾಟಕ ಹಿತ ಎತ್ತಿಹಿಡಿಯಲು, ಅಭಿವೃದ್ಧಿಗೆ ಶ್ರಮಿಸಲು ಡಿಸಿ ಕರೆ

63ನೇ ಕನರ್ಾಟಕ ರಾಜ್ಯೋತ್ಸವ ದಿನ ಆಚರಣೆ  ಕನರ್ಾಟಕ ಹಿತ ಎತ್ತಿಹಿಡಿಯಲು, ಅಭಿವೃದ್ಧಿಗೆ ಶ್ರಮಿಸಲು ಡಿಸಿ ಕರೆ

ಬಳ್ಳಾರಿ01: ಸಾಂಸ್ಕೃತಿಕವಾಗಿ,ಧಾಮರ್ಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಕನರ್ಾಟಕದಲ್ಲಿ ಹುಟ್ಟುವುದು ಅತ್ಯಂತ ಹೆಮ್ಮೆಯ ವಿಷಯ. ಇಂತ ರಾಜ್ಯದ ಹಿತವನ್ನು ಸದಾ ಎತ್ತಿಹಿಡಿಯಲು ಎಲ್ಲರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

        63ನೇ ಕನರ್ಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. 

      ಕನರ್ಾಟಕವೆಂಬುದು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಅಪಾರ ಸಂಪತ್ತು, ಐತಿಹಾಸಿಕ ಚರಿತ್ರೆ ಮತ್ತು ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡ ನಾಡು ಕನರ್ಾಟಕ ಎಂದು ತಮ್ಮ ಮಾತುಗಳಲ್ಲಿ ಬಣ್ಣಿಸಿದ ಡಿಸಿ ರಾಮ್ ಪ್ರಸಾತ್ ವಿವಿಧತೆಯಲ್ಲಿ ಏಕತೆಯುಳ್ಳ ಕನರ್ಾಟಕದಲ್ಲಿ ಹುಟ್ಟದಿದ್ದರೂ ನಾನು ಇಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.

ಎಲ್ಲರು ಸೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ, ರಾಜ್ಯದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆ ಅನೇಕ ರೀತಿಯ ಭಾಷಾ ಒತ್ತಡಗಳ ಮಧ್ಯೆಯೂ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯ ಎಂದರು.

 ಇತ್ತೀಚಿನ ದಿನಗಳಲ್ಲಿ ನಾವು ಇತಿಹಾಸವನ್ನು ಮರೆತುಹೋಗುತ್ತಿದ್ದೇವೆ; ಈ ರೀತಿಯ ಆಚರಣೆಗಳ ಮೂಲಕ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಭವ್ಯ ಕನರ್ಾಟಕ ನಿಮರ್ಾಣಕ್ಕೆ ಎಲ್ಲರು ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಎನ್ಇಕೆಎಸ್ಆರ್ಟಿಸಿ ಡಿಟಿಒ ಸೈಯದ್ ಅವರನ್ನು ಸನ್ಮಾನಿಸಲಾಯಿತು.

   ಇದೇ ಸಂದರ್ಭದಲ್ಲಿ ಎಸ್ಪಿ ಅರುಣ ರಂಗರಾಜನ್, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಹೈಕ ಹೋರಾಟ ಸಮಿತಿ ಮುಖಂಡ ಪೊನ್ನರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಶಾಲಾ-ಕಾಲೇಜುಗಳ ವಿದ್ಯಾಥರ್ಿಗಳು ಇದ್ದರು.

    ಪಂ.ದೊಡ್ಡಬಸವ ಗವಾಯಿಗಳ ಕನ್ನಡಪರ ಗೀತೆಗಳ ಗಾಯನ ಗಮನಸೆಳೆಯಿತು.

ಸುದ್ದಿ ಓದಿ