ನ.29 ರಂದು ಮುಧೋಳದಲ್ಲಿ 2ಎ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ,
ಲೋಕದರ್ಶನ ವರದಿ
ಯಲಬುರ್ಗಿ ನ.15 : ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ ಹಾಗೂ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ 244ನೇ ಜಯಂತೋತ್ಸವವ ಮತ್ತು 199ನೇ ವಿಜಯೋತ್ಸವ ಹಾಗೂ ಕುಕನೂರ-ಯಲಬುರ್ಗಾ ತಾಲೂಕು ಮಟ್ಟದ 10ನೇ&12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ತಾಲೂಕಿನ ಮುಧೋಳ್ ಗ್ರಾಮದ ಸ್ಫೂರ್ತಿ ಶಾಲಾ ಆವರಣದಲ್ಲಿ ನ.29 ರಂದು ಬೆಳಗ್ಗೆ 10-30 ಗಂಟೆಗೆ ಹಮ್ಮಿಕೊಂಡಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೀರಶೈವ ಪಂಚಮಸಾಲಿ ಸಮುದಾಯ ಸಂಘಟನೆಯ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಬಸಲಿಂಗಪ್ಪ ಭೂತೆ ಕೋರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಮುಧೋಳ್ ಗ್ರಾಮದ ಹಿರೇಮ್ಯಾಗೇರಿ ರಸ್ತೆಯಲ್ಲಿ ಇರುವ ಸ್ಫೂರ್ತಿ ಶಾಲಾ ಆವರಣದ ನಡೆಯುವ ಸಮಾವೇಶದ ನೇತೃತ್ವವನ್ನು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಜಯಮೃತ್ಯಂಜಯ ಸ್ವಾಮೀಜಿ ವಹಿಸಲ್ಲಿದ್ದು, ಮೆರವಣಿಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಸಮಾಜದ ಸಚಿವರು, ಸಂಸದರು, ಎಂಎಲ್ಸಿ ಸೇರಿ ಅನೇಕ ನಾಯಕರು ಭಾಗವಹಿಸಲಿದ್ದು, ಈ ಸಮಾವೇಶಕ್ಕೆ ಸಮಾರು ಇಪತ್ತು ಸಾವಿರಕ್ಕೂ ಅಧಿಕ ಜನಕ್ಕೆ ಭವ್ಯವಾದ ವೇದಿಕೆ ಸಿದ್ದಗೊಳ್ಳಲಿದೆ ಎಂದರು.
ಹೀಗಾಗಿ, ಜಿಲ್ಲೆಯ ಎಲ್ಲಾ ಹಳ್ಳಿಗಳಿಂದಲೂ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಸುಮಾರು 3 ದಶಕದಿಂದಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸುತ್ತಿದ್ದು, ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಇದೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದಿಂದ ಕೊಪ್ಪಳ, ಬಳ್ಳಾರಿ, ಸೇರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕುಲಶಾಸ್ತ್ರ ಅಧ್ಯಯನವನ್ನು ನಡೆಸುತ್ತಿದೆ. ಈ ಕುಲಶಾಸ್ತ್ರ ಅಧ್ಯಯನದ ಆಧಾರದಲ್ಲಿ ಕಾನೂನು ತೊಡಕಾಗದಂತೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುವ ವಿಶ್ವಾಸ ಹೆಚ್ಚಾಗಿದೆ.ಎಂದು ಬಾವಿಬೆಟ್ಟಪ್ಪ ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದಲ್ಲಿರುವ 32ಕ್ಕೂ ಅಧಿಕ ಒಳ ಪಂಗಡಗಳಿಗೂ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದ್ದು, ಪಂಚಮಸಾಲಿ ಲಿಂಗಾಯತ ಸಮುದಾಯವು ಹಿರಿಯಣ್ಣನ ಸ್ಥಾನದಲ್ಲಿ ನಿಂತು ಹಕ್ಕೊತ್ತಾಯದ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ ಮಾತನಾಡಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಡಾ.ಶರಣಪ್ಪ ಕೊಪ್ಪಳ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ರಾಂಪೂರು, ರಾಜಶೇಖರ ನಿಂಗೋಜಿ, ಸುರೇಶಗೌಡ ಶಿವನಗೌಡ್ರ, ಸಿದ್ದಪ್ಪ ಹಕ್ಕಿಗೂಣಿ , ಎಂ.ಜಿ.ಪಾಟೀಲ್ , ಚಂದ್ರು, ಸ.ಶರಣಪ್ಪ ಪಾಟೀಲ್, ಸೇರಿ ಸಮಾಜದ ಪದಾಧಿಕಾರಿಗಳು ಇದ್ದರು