ಮಹಲಿಂಗಪುರ

ಗಿರಿಮಲ್ಲೇಶ್ವರ ಆಶ್ರಮದಲ್ಲಿ ಮಾಧವಾನಂದರ 109 ನೇ ಜಯಂತಿ ; ಶ್ರೀಮಂತ ಮಹಾರಾಜ

ಗಿರಿಮಲ್ಲೇಶ್ವರ ಆಶ್ರಮದಲ್ಲಿ ಮಾಧವಾನಂದರ 109 ನೇ ಜಯಂತಿ ; ಶ್ರೀಮಂತ ಮಹಾರಾಜ

ಗಿರಿಮಲ್ಲೇಶ್ವರ ಆಶ್ರಮದಲ್ಲಿ ಮಾಧವಾನಂದರ 109 ನೇ ಜಯಂತಿ ; ಶ್ರೀಮಂತ ಮಹಾರಾಜ

ಮಹಾಲಿಂಗಪುರ 03 : ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಅಪಾರ ಅಂತ ಮಹಾತ್ಮರ ತತ್ವಾದರ್ಶವನ್ನು ಎಲ್ಲರೂ ಪಾಲೀಸಬೇಕು ಎಂದು ಮಾರಾಪುರದ ಶ್ರೀಮಂತ ಮಹಾರಾಜರು ಹೇಳಿದರು. 

 ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ನಡೆದ ಮಾಧವಾನಂದರ 109 ನೇ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಮತ್ತು ದಾಸಭೋಧ ಪಠಣ ಮಾಡುವ ಮೂಲಕ ಉದ್ಘಾಟಸಿ ಮಾತನಾಡಿ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿಮಠದ ಮಾಧವಾನಂದ ಪ್ರಭೂಜಿ  ಸ್ವಾತಂತ್ಯ್ರ ಹೋರಾಟಗಾರ,ಅಧ್ಯಾತ್ಮಿಕ ಚೇತನ, ಸಾಮಾಜಿಕ ಚಿಂತಕ,ಕ್ರಾಂತಿಯೋಗಿ ಶ್ರೀ ಸಮರ್ಥ ಮಾಧವಾನಂದ ಪ್ರಭೂಜಿಯವರು ಸಮಾಜದಲ್ಲಿ ಸಮಾನತೆ ತರಲು ಸಾಕಷ್ಟು ಹೋರಾಟ ಮಾಡಿ ಸುಮಾರು 26000 ಸಾವಿರಕ್ಕೂ ಹೆಚ್ಚು ಅಂತರ ಜಾತಿ ವಿವಾಹ ನೆರವೇರಿಸಿ ಪ್ರಭುದತೆ ಮೆರೆದರು ಎಂದು ಹೇಳಿದರು. 

ಪ್ರಾಸ್ತವಿಕವಾಗಿ ಮಾತನಾಡಿದ ಸ್ಥಳೀಯ ಗಿರಿಮಲ್ಲೇಶ್ವರ ಟ್ರಸ್ಟ್‌ ಅಧ್ಯಕ್ಷರಾದ ಶ್ರೀ ಡಾ ಸಂಗಮೇಶ ಹಿಡಕಲ್ ಮಾಧವಾನಂದ ಪ್ರಭೂಜಿಯವರು ನಾಡು ಕಂಡ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು, ಹೋರಾಟಗಾರರು, ದಾರ್ಶನಿಕರು. ಸಂತರು ಅಗಿದರು. ಆದರ್ಶಗಳು ಇಂದಿನ ಯುವಕರಿಗೆ ಸ್ಫೂರ್ತಿ ಆಗಿವೆ .ಕರ್ನಾಟಕ ಮಹಾರಾಷ್ಟ್ರದ ಇಂಚಗೇರಿಮಠದ ವಿವಿಧ ಶಾಖಾ ಮಠ, ಆಶ್ರಮ, ಭಜನಾ ಮಂದಿರಗಳಲ್ಲಿ ಅವರ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ ಎಂದರು. 

ನಂತರ ಮಾತನಾಡಿದ ಬನಹಟ್ಟಿಯ ಯಲ್ಲಪ್ಪ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠವು ಅಧ್ಯಾತ್ಮ ಸಾಂಪ್ರದಾಯಕ್ಕೆ ಸಾಮಾಜಿಕ ತಿರುವು ಕೊಟ್ಟ ಕೀರ್ತಿ ಶ್ರೀ ಮಾಧವಾನಂದ ಪ್ರಭೂಜಿಯವರಿಗೆ ಸಲ್ಲುತ್ತದೆ. ಗೋವಾ ವಿಮೋಚನಾ ಹೋರಾಟಗಾರ ಬಹುಮುಖ ವ್ಯಕ್ತಿತ್ವ ಮಾಧವಾನಂದ ಪ್ರಭೂಜಿ ಅಧ್ಯಾತ್ಮಿಕ ಚೇತನ ಮಾನವೀಯತೆ ಮಹಾಪೋಷಕತ್ವ, ಸಾಮಾಜಿಕ ಚಿಂತಕ, ಸ್ವಾತಂತ್ರ ಯೋಧ, ಕರ್ನಾಟಕ ಎಕೀಕರಣದ ರೂವಾರಿ, ಗೋವಾ ವಿಮೋಚನಾ ಹೋರಾಟಗಾರ, ಪರಿಸರವಾದಿ, ಕೃಷಿಕ, ಆತ್ಮಜ್ಞಾನಿ ಮತ್ತು ದಾರ್ಶನಿಕ  ಎಲ್ಲ ಒಟ್ಟಿಗೆ ಆಗಿದ್ದವರು ಎಂದರು. 

 ನಂತರ ಮಾತನಾಡಿದ ಯುವ ಅಧ್ಯಾತ್ಮ ಚಿಂತಕ ಮಹೇಶ ಇಟಕನ್ನವರ ಸ್ವಾತಂತ್ರ ಸಂಗ್ರಾಮದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಗಳಲ್ಲದೇ ಮಹಾರಾಷ್ಟ್ರದ ಗಡಿಗುಂಟ ಮಹಾದೇವರು ಮುರಗೋಡ ಮಿಂಚಿನಂತೆ  ಸಂಚರಿಸಿ ಬ್ರಿಟಿಷರ ಸಾಮ್ರಾಜ್ಯ ಶಾಹಿಯ ಆಡಳಿತ ಯಂತ್ರವನ್ನೇ ಕಂಗೆಡೆಸಿದರೂ. 1942 ರಲ್ಲಿ ಧಾರವಾಡ ಜಿಲ್ಲೆಯ ಹುಲಕೋಟಿ, ಸಾವಳಗಿ ಪೊಲೀಸ ಠಾಣೆ, ತೇಗೂರ ಪ್ರವಾಸಿ ಮಂದಿರ, ಸಂಪಗಾವ ಚಾವಡಿ ನಿಷ್ಕ್ರೀಯಗೋಳಿಸಿದರು ಎಂದರು.ನಂತರ ಮಾತನಾಡಿದ ಬನಹಟ್ಟಿಯ ಪ್ರಭು ಕೋಪರ್ಡೇ ಮಹಾರಾಜರು ಮಾಧವಾನಂದರು ಸ್ವಾತಂತ್ರ ಸಂಗ್ರಾಮವಷ್ಟೇ ಅಲ್ಲದೇ ಕರ್ನಾಟಕ ಏಕೀಕರಣ ಚಳವಳಿ, ಗೋವಾ ವಿಮೋಚನೆ ಹೋರಾಟ, ಜತ್ತ ಸಂಸ್ಥಾನ ವೀಲೀನಗಳಲ್ಲಿ ತಮ್ಮ ಸಾಮರ್ಥವನ್ನು ಪ್ರದರ್ಶಿಸಿದರು. ದೇಶಕ್ಕೆ ಸ್ವಾತಂತ್ರ  ಸಿಕ್ಕ ನಂತರ ಭೂದಾನ ಚಳವಳಿ, ಅಸ್ಪ್ರಶತೆ ನಿವಾರಣೆ, ಗೋರಕ್ಷಣೆ, ಭೂಸಂರಕ್ಷಣೆ ವಿಧಾಯಕ ಕಾರ್ಯಕ್ರಮಗಳಲ್ಲಿ ತಮ್ಮೆಲ್ಲ ಅನುಯಾಯಿಗಳನ್ನು ತೊಡಗಿಸುವ ಮೂಲಕ  ಸಾಮಾಜಿಕ ಕಾರ್ಯ ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.  

 ಶ್ರೀಮಠದ ಈ ಸದ್ಯದ ಗುರುಗಳಾದ ಶ್ರೀಸ.ಸ. ರೇವಣಸಿದ್ದೇಶ್ವರ ಮಹಾರಾಜರು ಮಹಾಪೋಷಕತ್ವದಲ್ಲಿ ಸಂಪ್ರದಾಯದ ನಿತ್ಯನಿಯಮ -ಉಪಾಸನೆ, ಧ್ಯಾನ, ಭಜನೆ,  ಅಧ್ಯಾತ್ಮ-ಚಿಂತನ-ಮಂಥನ  ಕಾರ್ಯಕ್ರಮ, ಸರ್ವಧರ್ಮ ಕಾರ್ಯಕ್ರಮ ಸರ್ವೋದಯ  ಪಾದಯಾತ್ರೆ ಹಾಗೂ ಸಪ್ತಾಹದ ಜತೆಗೆ ಸಾಮೂಹಿಕ ಕೃಷಿ, ಭೋಜನ, ಸಾಮೂಹಿಕ ಶ್ರಮದಾನ ಸೇರಿದಂತೆ ಮುಂತಾದ ವಿಧಾಯಕ ಕಾರ್ಯಕ್ರಮಗಳು ನಡೆಯುತ್ತಲಿವೆ.ಎಂದರು. 

ಮೆರವಣಿಗೆ : ಮಾಧವಾನಂದರ ಭವ್ಯ ಫೋಟೋ ಹಾಗೂ ದಾನಿಗಳಾದ ಶ್ರೀಶೈಲಪ್ಪ ರೊಡ್ಡನ್ನವರ ಅವರು ನೀಡಿದ 2 ಕೆಜಿ ಬೆಳ್ಳಿಯ ಚಿನ್ನ ಲೆಪಿತ ಕೀರೀಟವನ್ನು ಮೆರವಣಿಗೆ ಮೂಲಕ ಮಾಧವಾನಂದ ಆಶ್ರಮದಿಂದ ಸಕಲ ಮಂಗಳವಾದ್ಯಗಳೊಂದಿಗೆ ಚನ್ನಮ್ಮ ಸರ್ಕಲ, ಗಾಂಧಿ ವೃತ್ತ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ, ಜವಳಿ ಬಜಾರ, ಮಾರ್ಗವಾಗಿ ಮಾಧವಾನಂದ ಆಶ್ರಮ ತಲುಪಿತು. 

ಇಂದಿನ ಕಾರ್ಯಕ್ರಮದಲ್ಲಿ ಬಾಬು ಜಾಡರ, ಬಸಮ್ಮ ತಾಯಿ ಕುಂದರಗಿ ಚನ್ನಗಿರಿ ಪೂಜಾರಿ ಮಾತನಾಡಿದರು. ಮುಖಂಡರಾದ ದುಂಡಪ್ಪ ಜಾಧವ, ಅರವಿಂದ ಮಾಲಬಸುರಿ , ಕಲ್ಲಪ್ಪ ಚಿಂಚಲಿ,ಗೌಡಪ್ಪಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಗಂಗಾಧರ ಮಗದುಮ್,ಸಂಜು ಶಿರೋಳ, ಷಣ್ಮುಖ ಕದ್ದಿಮನಿ, ಗುರ​‍್ಪ ಪಂಕಿ, ಮಹಾಲಿಂಗಪ್ಪ ಹೊಸೂರ್, ಯಮನಪ್ಪ ಗಾಡೀಕಾರ , ಶ್ರೀಶೈಲ ಪಟ್ಟಣಶೆಟ್ಟಿ, ಗೀರೀಶ ಜಾಧವ, ಶಿವು ಜಮಖಂಡಿ, ಚಂದ್ರ​‍್ಪ ದೋಣಿ, ಮಹಾಂತೇಶ ಮಗದುಮ್, ಗುರುಸಿದ್ದಪ್ಪ ಅಂಬಿ, ಡಾ ರಾಚಪ್ಪ ಚುಮ್ಮಡ ನಾಗಪ್ಪ ದೋಣಿ, ಬಿ ಎಸ್ ಮಟಗಾರ, ಪ್ರಕಾಶ ಗೋಕಾವಿ, ಗುರುಪಾದ ಉರಭಿನ್ನವರ, ಸಿದ್ದರಾಮ ಜಗದಾಳ,ಶ್ರೀಮತಿ ಮೈತ್ರಾದೇವಿ ಕದ್ದಿಮನಿ, ಸುಹಾಸಿನಿ ಕದ್ದಿಮನಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು  ಡಾ ಮಹಾದೇವ ಕದ್ದಿಮನಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ