ರಾಣೆಬೆನ್ನೂರ

ನೂತನ ಮಾರುತಿ ದೇವಸ್ಥಾನ ಕಟ್ಟಡದ ಜೀಣೋದ್ಧಾರಕ್ಕೆ 1 ಲಕ್ಷ ರೂ. ದೇಣಿಗೆ ..,,,...,,,,,,.,...........

ನೂತನ ಮಾರುತಿ ದೇವಸ್ಥಾನ ಕಟ್ಟಡದ ಜೀಣೋದ್ಧಾರಕ್ಕೆ 1 ಲಕ್ಷ ರೂ. ದೇಣಿಗೆ  ..,,,...,,,,,,.,...........

ಲೋಕದರ್ಶನ ವರದಿ 

ರಾಣಿಬೆನ್ನೂರ 25:  ಲಂಕೆಯಲ್ಲಿ ಬಂಧಿಯಾಗಿದ್ದ ಸೀತಾ ಮಾತೆಯ ಭವ ಹರಣ ಮಾಡಿದ ಕೀರ್ತಿ ಹನುಮನಿಗೆ ಸಲ್ಲುತ್ತದೆ. ಅದೇ ರೀತಿ ಸರ್ವಜನರ ಭವರೋಗ ನಿವಾರಣೆ ಮಾಡುವ ಶಕ್ತಿ ಆಂಜನೇಯನಿಗಿದೆ. ಅಲ್ಲದೆ ದೇವಾನು ದೇವತೆಗಳನ್ನು ಕಾಡಿದ ಶನೇಶ್ಚರನು ಮಾರುತಿಯನ್ನು ಕಾಡಲು ಆಗಲಿಲ್ಲ. ಆದಕಾರಣ ಅಂತಹ ಶಕ್ತಿಯುಳ್ಳ ಹನುಮಂತ ದೇವರ ಆರಾಧನೆ ಮಾಡಲು ಸುಂದರವಾದ ಮಂದಿರದ ಅವಶ್ಯಕತೆ ಇದೆ ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.  

   ಇಲ್ಲಿನ ವಾಗೀಶನಗರದ  ಮಾರುತಿ ದೇವಸ್ಥಾನ ನೂತನ ಕಟ್ಟಡದ ಜೀಣೋದ್ಧಾರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿ ಮಾತನಾಡಿದ ಅವರು, ಅಂತಹ ಪುಣ್ಯಮಯ ಕಾರ್ಯಕ್ಕೆ ನಮ್ಮ ಕುಟುಂದ ಅಳಿಲು ಸೇವೆ ಇದು ಎಂದರು. 

   ಈ ಸಂದರ್ಭದಲ್ಲಿ ರುದ್ರಗೌಡ ಪಾಟೀಲ, ದೇವಸ್ಥಾನ ಕಮೀಟಿ ಅಧ್ಯಕ್ಷ ಗಣೇಶ ಸೇಲರ, ಅರ್ಚಕ ಶಿದ್ದಲಿಂಗಯ್ಯ ಹಿರೇಮಠ, ಬಸವರಾಜ ಬೆನ್ನೂರ, ಪರಸಪ್ಪ ಕೋಲಕಾರ, ಮಲ್ಲಿಕಾರ್ಜುನ ಬಾದಾಮಿ, ನಾಗರಾಜ ಚಿಮ್ಮಲಗಿ, ನಾಮದೇವ ಮುದೇನೂರ, ಬಸಪ್ಪ, ಸಿದ್ಧನಾಥ, ಶಾಚಿತಯ್ಯ ಅಕ್ಕಿಮಠ, ಮಂಜುನಾಥ ಕೋಳೂರ, ರಾಘವೇಂದ್ರ, ನಾಗರಾಜ ಗಾಳಿ, ಮಾಳಪ್ಪ ಎಳಮೇಲಿ, ಶೇಖಪ್ಪ ಮೆಣಸಿನಕಾಯಿ, ಯುವರಾಜ ಬಾರಾಟಕ್ಕೆ, ಶಿವಕುಮಾರ ಹಿರೇಬಿದರಿ, ಶಿವನಗೌಡ ಪಾಟೀಲ ಇದ್ದರು. 


ಸುದ್ದಿ ಓದಿ