ಧಾರವಾಡ - ಹುಬ್ಬಳ್ಳಿ

“ಶಾಶ್ವತ್ ಭಾರತ ಸೇತು ಪ್ರದರ್ಶನ”; ಪರಿಸರ ಸಂರಕ್ಷಣೆ ಅಗತ್ಯ : ಪ್ರೊ. ಅರವಿಂದ ಮೂಲಿಮನಿ

“ಶಾಶ್ವತ್ ಭಾರತ ಸೇತು ಪ್ರದರ್ಶನ”; ಪರಿಸರ ಸಂರಕ್ಷಣೆ ಅಗತ್ಯ : ಪ್ರೊ. ಅರವಿಂದ ಮೂಲಿಮನಿ

            ಧಾರವಾಡ 28:  ಕವಿವಿ ಉನ್ನತ ಭಾರತ ಅಭಿಯಾನ ಕೋಶ (ಪ್ರಾದೇಶಿಕ ಕೇಂದ್ರ) ಹಾಗೂ ದಿ ಇಕೋ ಫ್ಯಾಕ್ಟರಿ ಫೌಂಡೇಶನ್ ಧಾರವಾಡ ಸಹಯೋಗದಲ್ಲಿ ಕವಿವಿಯ ಸೆನೆಟ್ ಹಾಲಿನಲ್ಲಿ ದಿನಾಂಕ 22 ಜನೆವರಿ 2026 ರಿಂದ 24 ಜನೆವರಿ 2026 ರವರೆಗೆ ಮೂರು ದಿನಗಳ ಕಾಲ ಪರಿಸರ ಸ್ನೇಹಿ “ಶಾಶ್ವತ್ ಭಾರತ ಸೇತು ಪ್ರದರ್ಶನ” ಆಯೋಜಿಸಲಾಗಿತ್ತು. ದಿನ ಬಳಕೆಯಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಮರು ಬಳಕೆ ಮಾಡಿ ತಯಾರಿಸಲಾದ ಹಲವಾರು ವಸ್ತುಗಳನ್ನು ನೂರಾರು ಜನರು ವಿಕ್ಷೀಸಿದರು.

            ಬತ್ತದ ಹುಲ್ಲು ಇತರೆ ವಸ್ತುಗಳಿಂದ ತಯಾರಿಸಿದ ಅಲಂಕಾರ ಸಾಮಾನುಗಳು, ಪಾತ್ರಗಳು, ಬೊಗಾಣಿ, ಪೆನ್ನು, ಹಾಳೆ, ವೇಸ್ಟ ದ್ರಮ್ ಬಳಸಿ ತಯಾಸಿಸಲಾದ ಟೇಬಲ್ಗಳು ಪ್ರದರ್ಶನದಲ್ಲಿ ನೋಡುಗರ ಕಣ್ಮನ ಸೆಳೆದವು. ಜೊತೆಗೆ ನಿತ್ಯ ಪರಿಸರದ ಮೇಲೆ ಜಾಗತೀಕ ತಾಪಮಾನ, ಹವಾಮಾನ ವೈಪರಿತ್ಯಕ್ಕೆ ವಿವಿಧ ಕ್ಷೇತ್ರಗಳಿಂದ ಕಾರ್ಬನ್ ಹೊರಸೂಸುವಿಕೆ ಚಿತ್ರ ಸಹಿತ ವಿವರಣೆಗಳು ಇದ್ದವು.

             ಪ್ರದರ್ಶನ ಉದ್ಘಾಟಿಸಿ, ಮಾತನಾಡಿದ ಪ್ರೊ. ಅರವಿಂದ ಮೂಲಿಮನಿ, ಪರಿಸರ ಸಂರಕ್ಷಣೆಗೆ ಜನಜಾಗೃತಿ ಅತ್ಯಂತ ಅಗತ್ಯ, ಮನುಷ್ಯ ಪ್ರಗತಿ ಹೆಸರಿನಲ್ಲಿ ಪರಿಸರವನ್ನು ಹಾಳಮಾಡುತ್ತಿದ್ದಾನೆ. ಇದು ತಾಯಿಯನ್ನು ಮರೆತ ಮಗುವಿನ ವರ್ತನೆಯಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಓಝೇನ್ ಪದರಕ್ಕೂ ಹಾಣಿಯಾಗುತ್ತಿದೆ. ಗಾಳಿ, ಆಹಾರ ಹಾಗೂ ಮಾನವ ದೇಹದಲ್ಲಿನ ರಕ್ತವೂ ಕೂಡ ವಿಷಪೂರಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪರಿಸರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಅತಿಥಿ, ಕವಿವಿಯ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಗೊರವರ್ ಹೇಳಿದರು.

             ದಿ ಇಕೋ ಫ್ಯಾಕ್ಟರಿ ಫೌಂಡೇಶನ್ ಸಹ ಮುಖ್ಯಸ್ಥ ಬಸವರಾಜ ಹೊಸಮನಿ ಮಾತನಾಡಿ, ಕಚ್ಚಾ ವಸ್ತುಗಳ ಮರುಬಳಕೆ ಇಂದಿನ ಅಗತ್ಯ ಮತ್ತು ಪರಿಸರ ನಾಶ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉನ್ನತ ಭಾರತ ಅಭಿಯಾನ ಕವಿವಿ ಸಂಯೋಜಕ ಡಾ. ಚೇತನ ಜೆ. ಡಿ. ಅವರು, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ನಾವೆಲ್ಲರೂ ಬದುಕಲು ಕಲಿಯಬೇಕಾಗಿದೆ ಹಾಗೂ ಮೂರು ದಿನಗಳ ಪ್ರದರ್ಶನ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

           ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಸಂಗೀತಾ ಮಾನೆ, ಪತ್ರಿಕೋದ್ಯಮ ವಿಭಾಗದ ಪ್ರೊ. ಜೆ. ಎಂ. ಚಂದುನವರ, ದಿ ಇಕೋ ಫ್ಯಾಕ್ಟರಿ ಫೌಂಡೇಶನ್ ಸಹ ಮುಖ್ಯಸ್ಥ ನವೀನ ಮಿರಾಶಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ. ಕಿರಣ ಬನ್ನಿಗೋಳ, ಜೈವಿಕ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ.  ಪ್ರವೀಣಕುಮಾರ ಎಸ್‌. ಕೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ