ಲೇಖನಗಳು

"ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಗುರುಸಾರ್ವಭೌಮರು"

"ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಗುರುಸಾರ್ವಭೌಮರು"

ಕಲಿಯುಗದ ಕಾಮಧೇನು, ಕಲ್ಪವೃಕ್ಷವೆಂದೇ ಜಗತ್ಪ್ರಸಿದ್ಧರಾದ ಮಂತ್ರಾಲಯದ ಪ್ರಭುಗಳು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕ ಪಡೆದು 19 ಫೆಬ್ರುವರಿ 2026ಕ್ಕೆ  405 ವರ್ಷಗಳು ಸಂದಿವೆ. ಇಂದಿಗೂ ಅವರ ಕೀರ್ತಿ ಅಜರಾಮರವಾಗಿದ್ದು, "ದೇವರು ಎಂದರೆ ತಿರುಪತಿ ತಿಮ್ಮಪ್ಪ, ಗುರುಗಳು ಎಂದರೆ ಮಂತ್ರಾಲಯದ ರಾಘಪ್ಪ" ಎಂಬುದು ಕೋಟಿ ಭಕ್ತರ ಅಚಲ ನಂಬಿಕೆಯಾಗಿದೆ.1. ಅವತಾರಗಳ ಪರಂಪರೆಪುರಾಣಗಳ ಪ್ರಕಾರ, ಭಕ್ತ ಪ್ರಹ್ಲಾದನೇ ಕಲಿಯುಗದಲ್ಲಿ ಮಧ್ವ ಮತದ ಪ್ರಸಾರಕ್ಕಾಗಿ ಮಧ್ವಾಚಾರ್ಯರು ಜಯತೀರ್ಥರು, ವ್ಯಾಸರಾಯರು  ವಾದಿರಾಜರು ನಂತರ ಮಧ್ವ ಭಕ್ತರ ಉದ್ಧಾರಕ್ಕಾಗಿ ರಾಘವೇಂದ್ರ ಸ್ವಾಮಿಗಳಾಗಿ ಅವತರಿಸಿದ್ದಾರೆ. ಅವರ ಪ್ರಮುಖ ನಾಲ್ಕು ಅವತಾರಗಳು ಹೀಗಿವೆ: ಶಂಕುಕರ್ಣ: ಬ್ರಹ್ಮದೇವನ ಸೇವೆ ಮಾಡುತ್ತಿದ್ದ ಇವರು ದೈವೇಚ್ಛೆಯಂತೆ ಭೂಮಿಯಲ್ಲಿ ಜನಿಸಿದರು.

ಭಕ್ತ ಪ್ರಹ್ಲಾದ: ಕೃತಯುಗದಲ್ಲಿ ಹಿರಣ್ಯಕಶಿಪುವಿನ ಮಗನಾಗಿ ಜನಿಸಿ, ನರಸಿಂಹ ದೇವರ ಪರಮ ಭಕ್ತರಾದವರು.ಬಾಹ್ಲೀಕ ರಾಜ: ದ್ವಾಪರ ಯುಗದಲ್ಲಿ ಪಾಂಡವರ ಪರವಾಗಿ ನಿಂತು ಧರ್ಮನಿಷ್ಠೆಯಿಂದ ಆಳ್ವಿಕೆ ನಡೆಸಿದ ರಾಜ. ವ್ಯಾಸರಾಜರು: ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿ ಮಧ್ವ ಸಿದ್ಧಾಂತವನ್ನು ಉತ್ತುಂಗಕ್ಕೆ ಏರಿಸಿದ ಮಹಾನ್ ಯತಿಗಳು.2. ಜನನ ಮತ್ತು ಪವಿತ್ರ ವಂಶಾವಳಿರಾಯರ ವಂಶವು ’ಗೌತಮ ಗೋತ್ರ’ದ ’ಷಷ್ಠಿಕ ವಂಶ’ಕ್ಕೆ ಸೇರಿದ್ದು, ವಿದ್ವತ್ತು ಮತ್ತು ಸಂಗೀತಕ್ಕೆ (ವೀಣೆ) ಹೆಸರುವಾಸಿಯಾಗಿತ್ತು. ಇದನ್ನು ’ವೀಣಾ ವಂಶ’ ಎಂದೇ ಕರೆಯಲಾಗುತ್ತಿತ್ತು.ಜನನ:  ವೆಂಕಟನಾಥರು (ರಾಯರ ಪೂರ್ವಾಶ್ರಮದ ಹೆಸರು) ಕ್ರಿ.ಶ. 1595 ರಲ್ಲಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಮೃಗಶಿರ ನಕ್ಷತ್ರದಲ್ಲಿ ಜನಿಸಿದರು.ಮುತ್ತಜ್ಜ: ಕೃಷ್ಣಭಟ್ಟರು (ಕೃಷ್ಣದೇವರಾಯನಿಗೆ ವೀಣಾ ಪಾಠ ಹೇಳಿಕೊಟ್ಟ ಗುರುಗಳು).ಅಜ್ಜ: ಕನಕಾಚಲ ಭಟ್ಟರು.

ತಂದೆ-ತಾಯಿ: ತಿಮ್ಮಣ್ಣ ಭಟ್ಟರು ಮತ್ತು ಗೋಪಮ್ಮ (ಗೋಪಿಕಾಂಬೆ). ತಿರುಪತಿ ವೆಂಕಟೇಶ್ವರನ ಅನುಗ್ರಹದಿಂದ ಜನಿಸಿದ ಕಾರಣ ಇವರಿಗೆ ’ವೆಂಕಟನಾಥ’ ಎಂದು ನಾಮಕರಣ ಮಾಡಲಾಯಿತು. ಇವರಿಗೆ ಗುರುರಾಜ ಎಂಬ ಅಣ್ಣ ಮತ್ತು ವೆಂಕಟಾಂಬೆ ಎಂಬ ಅಕ್ಕ ಇದ್ದರು.3. ಪೂರ್ವಾಶ್ರಮದ ಕಷ್ಟಗಳು ಮತ್ತು ಪಾಂಡಿತ್ಯವೆಂಕಟನಾಥರ ಬಾಲ್ಯವು ಕಡು ಬಡತನದಲ್ಲಿ ಕಳೆಯಿತು. ತಂದೆಯ ನಿಧನದ ನಂತರ ಅಣ್ಣನ ಆಶ್ರಯದಲ್ಲಿ ಬೆಳೆದರು. ಬೆಳೆಯುವ ಸಿರಿಯನ್ನು ಮೊಳೆಕೆಯಲ್ಲಿ ಕಾಣು ಎನ್ನುವಂತೆ ಬಾಲ್ಯದಲ್ಲಿ ಯೇ ಸತಿ ಸಹಗಮ ಪದ್ಧತಿ, ವಿದವಾ ಸ್ತ್ರೀಯರು ಪಡುತ್ತಿರುವ ಕಷ್ಟಗಳನ್ನು ವಿರೋಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ನಂತರ ಇವರ ವಿದ್ಯಾಭ್ಯಾಸದ ದಾಹ ಹೆಚ್ಚುತ್ತಾ ಹೊರಟಿರುವಾಗ ತಾಯಿಯ ಒತ್ತಾಯದ ಮೇರೆಗೆ ಸರಸ್ವತಿ ಬಾಯಿಯವರೊಂದಿಗೆ ವಿವಾಹವಾದ ನಂತರವೂ ದಾರಿದ್ರ್ಯವು ಬೆಂಬಿಡಲಿಲ್ಲ.ತೀವ್ರ ಬಡತನ: ಒಂದು ಹೊತ್ತಿನ ಊಟಕ್ಕೂ ಸಂಕಷ್ಟವಿದ್ದರೂ ಅವರು ಯಾರ ಮುಂದೆಯೂ ಕೈಚಾಚದೆ ಶ್ರೀಹರಿಯ ಧ್ಯಾನ ಮಾಡುತ್ತಿದ್ದರು.

ಗಡ್ಡೆ-ಗೆಣಸುಗಳನ್ನೇ ಹರಿಗೆ ಅರ​‍್ಿಸಿ ಸಾತ್ವಿಕ ಜೀವನ ನಡೆಸುತ್ತಿದ್ದರು.ಅಪಮಾನ ಮತ್ತು ಪವಾಡ: ಒಮ್ಮೆ ಸಮಾರಂಭವೊಂದರಲ್ಲಿ ಬಡವನೆಂಬ ಕಾರಣಕ್ಕೆ ಅವರಿಗೆ ಗಂಧ ತೆಯುವ ಕೆಲಸ ನೀಡಲಾಯಿತು. ಭಕ್ತಿಯಿಂದ ’ಅಗ್ನಿ ಸ್ತೋತ್ರ’ ಪಠಿಸುತ್ತಾ ಅವರು ತೇದ ಗಂಧವನ್ನು ಲೇಪಿಸಿಕೊಂಡವರ ಮೈ ಉರಿಯಲು ಪ್ರಾರಂಭಿಸಿತು. ತಪ್ಪು ಅರಿತ ಜನರು ಕ್ಷಮೆ ಕೇಳಿದಾಗ, ವೆಂಕಟನಾಥರು ವಿನಯದಿಂದ ಶ್ರೀಮೂಲರಾಮರನ್ನು ಪ್ರಾರ್ಥಿಸಿ ವರುಣಸ್ತೋತ್ರ’ ಪಠಿಸಿ ಗಂಧ ನೀಡಿದರು. ಇದರಿಂದ ಉರಿ ಶಮನವಾಗಿ ಎಲ್ಲರೂ ಅವರನ್ನು ಸನ್ಮಾನಿಸಿದರು.ಅಕ್ಷಯ ಪಾತ್ರೆ: ಮನೆಯಲ್ಲಿ ಧಾನ್ಯವಿಲ್ಲದಿದ್ದರೂ ಅತಿಥಿಗಳು ಬಂದಾಗ ವೆಂಕಟನಾಥರ ಪ್ರಾರ್ಥನೆಯಿಂದ ಆಹಾರದ ಕೊರತೆಯಾಗದಂತೆ ಪವಾಡಗಳು ನಡೆಯುತ್ತಿದ್ದವು.4. ಪೂರ್ವಾಶ್ರಮದ ಸಾಹಿತ್ಯ ಕೃತಿಗಳುಸನ್ಯಾಸ ಸ್ವೀಕರಿಸುವ ಮೊದಲೇ ಅವರು ಮಹಾನ್ ವಿದ್ವಾಂಸರಾಗಿದ್ದು, ಅನೇಕ ಪ್ರಮುಖ ಗ್ರಂಥಗಳನ್ನು ರಚಿಸಿದರು:ಪರಿಮಳ: ಬ್ರಹ್ಮಸೂತ್ರದ ಮೇಲಿನ ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ವ್ಯಾಖ್ಯಾನ.

ತರ್ಕತಾಂಡವ ವ್ಯಾಖ್ಯಾನ: ನ್ಯಾಯ ಶಾಸ್ತ್ರದ ಮೇಲಿನ ಪಾಂಡಿತ್ಯಪೂರ್ಣ ಕೃತಿ.ಋಗ್ವೇದ ವಿವೃತಿ: ಋಗ್ವೇದದ ಮಂತ್ರಗಳಿಗೆ ನೀಡಿದ ಆಳವಾದ ವಿವರಣೆ.5. ಸನ್ಯಾಸ ದೀಕ್ಷೆ ಮತ್ತು ಪಟ್ಟಾಭಿಷೇಕಪರಮ ಗುರುಗಳಾದ ವಿಜಯೇಂದ್ರ ತೀರ್ಥರು ಬಾಲ್ಯದಲ್ಲೇ ವೆಂಕಟನಾಥರ ವಿದ್ವತ್ತನ್ನು ಕಂಡು, ಇವರು ಮುಂದೊಂದು ದಿನ ಪೀಠವನ್ನು ಅಲಂಕರಿಸಿ ಮಧ್ವ ಶಾಸ್ತ್ರವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದರು.ದೈವೇಚ್ಛೆ: ಗುರುಗಳಾದ ಸುಧೀಂದ್ರ ತೀರ್ಥರು ಸನ್ಯಾಸ ಸ್ವೀಕರಿಸಲು ಕೇಳಿದಾಗ, ಪತ್ನಿ-ಮಗನ ಮೇಲಿನ ಮಮತೆಯಿಂದ ವೆಂಕಟನಾಥರು ನಿರಾಕರಿಸಿ ಮಠದಿಂದ ದೂರ ಹೋದರು. ಆದರೆ ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು. ವಿದ್ಯಾ ದೇವತೆಯಾದ ಸರಸ್ವತಿಯು ಕನಸಿನಲ್ಲಿ ಬಂದು, "ನಾನು ಬಡತನದಿಂದ ಬಳಲಿರುವೆ, ನೀನು ಪೀಠವನ್ನು ಅಲಂಕರಿಸಿ ನನ್ನನ್ನು ಶ್ರೀಮಂತಗೊಳಿಸು" (ಜ್ಞಾನದ ಪ್ರಸಾರ ಮಾಡು) ಎಂದು ಸೂಚಿಸಿದ ನಂತರ ವೆಂಕಟನಾಥರು ಸನ್ಯಾಸಕ್ಕೆ ಸಮ್ಮತಿಸಿದರು.

ಪಟ್ಟಾಭಿಷೇಕ: ಕ್ರಿ.ಶ. 1621 ರಲ್ಲಿ ತಂಜಾವೂರಿನಲ್ಲಿ ಸನ್ಯಾಸ ದೀಕ್ಷೆ ಪಡೆದು ’ಶ್ರೀ ರಾಘವೇಂದ್ರ ತೀರ್ಥ’ ಎಂದು ನಾಮಕರಣಗೊಂಡರು.ಪತ್ನಿಯ ಮೋಕ್ಷ: ಪತಿಯ ದರ್ಶನವಿಲ್ಲದೆ ಇರಲಾರದ ಸರಸ್ವತಿ ಬಾಯಿಯವರು ಪ್ರಾಣತ್ಯಾಗ ಮಾಡಿ ಪ್ರೇತ ರೂಪದಲ್ಲಿ ಪತಿಯೇ ದರ್ಶನಕ್ಕೆ ಬಂದಾಗ, ಕರುಣಾಮಯಿ ರಾಯರು ತಮ್ಮ ಕಮಂಡಲದ ತೀರ್ಥ ಪ್ರೋಕ್ಷಿಸಿ ಅವರಿಗೆ ಮುಕ್ತಿ ನೀಡಿದರು.6. ಲೋಕವಿಖ್ಯಾತ ಪವಾಡಗಳುರಾಯರ ಜೀವನದಲ್ಲಿ ಭಕ್ತರಿಗಾಗಿ ನಡೆದ ಪವಾಡಗಳು ಅಸಂಖ್ಯಾತ:ಒಣ ಕಟ್ಟಿಗೆ ಚಿಗುರಿಸಿದ್ದು: ಚಿತ್ರದುರ್ಗದಲ್ಲಿ ಕುಹಕಿಗಳ ಪರೀಕ್ಷೆಯ ಸಂದರ್ಭದಲ್ಲಿ ಒಣಗಿದ ಒಣಕೆ ಕಟ್ಟಿಗೆಯನ್ನು ಚಿಗುರಿಸಿ ಹಸಿರಾಗಿಸಿದರು.ನವಾಬನ ಪರೀಕ್ಷೆ: ಅದೋನಿ ನವಾಬನು ತಂದಿದ್ದ ಮಾಂಸದ ತಟ್ಟೆಯನ್ನು ಮಂತ್ರಾಕ್ಷತೆ ಹಾಕಿ ಹೂವು-ಹಣ್ಣುಗಳನ್ನಾಗಿ ಪರಿವರ್ತಿಸಿದರು.

ಇದರಿಂದ ಪ್ರಭಾವಿತನಾದ ನವಾಬ ಮಂತ್ರಾಲಯ ಗ್ರಾಮವನ್ನು ದಾನವಾಗಿ ನೀಡಿದನು.ಸತ್ತ ಬಾಲಕನನ್ನು ಬದುಕಿಸಿದ್ದು: ಮಠದ ಅಡುಗೆಯ ಮಾವಿನ ಹಣ್ಣಿನ ಸೀಕರಣಿಯಲ್ಲಿ ಕಡಾಯಿಗೆ ಬಿದ್ದು ಮೃತಪಟ್ಟಿದ್ದ ಬಾಲಕನಿಗೆ ತಮ್ಮ ತಪೋಶಕ್ತಿಯಿಂದ ಮರುಜೀವ ನೀಡಿದರು.ಸರ್ ಥಾಮಸ್ ಮನ್ರೋ: ಬೃಂದಾವನ ಪ್ರವೇಶಿಸಿದ 150 ವರ್ಷಗಳ ನಂತರ ಬ್ರಿಟಿಷ್ ಅಧಿಕಾರಿ ಮನ್ರೋ ಜೊತೆ ಇಂಗ್ಲಿಷ್ನಲ್ಲಿ ಸಂವಹನ ನಡೆಸಿ ಬೃಂದಾವನದಿಂದಲೇ ದರ್ಶನ ನೀಡಿದರು.ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಮುಖ ಕೃತಿಗಳು ಸಂಕ್ಷಿಪ್ತವಾಗಿ:ಪರಿಮಳ (ಗೀತಾರ್ಥ ಸಂಗ್ರಹ): ಭಗವದ್ಗೀತೆಯ ಮೇಲಿನ ಅತ್ಯಂತ ಪ್ರಸಿದ್ಧ ವ್ಯಾಖ್ಯಾನ.ತಂತ್ರದೀಪಿಕಾ: ಬ್ರಹ್ಮಸೂತ್ರಗಳ ಸುಲಭ ವಿವರಣೆ.ನ್ಯಾಯಮುಕ್ತಾವಳಿ: ಬ್ರಹ್ಮಸೂತ್ರಗಳ ಸಾರಾಂಶ.ಖಂಡಾರ್ಥಗಳು: ಹತ್ತು ಪ್ರಮುಖ ಉಪನಿಷತ್ತುಗಳಿಗೆ ಬರೆದ ಸರಳ ವ್ಯಾಖ್ಯಾನಗಳು.ಋಗ್ವೇದ ವಿವೃತಿ: ಋಗ್ವೇದದ ಮಂತ್ರಗಳಿಗೆ ಅರ್ಥ ವಿವರಣೆ.ರಾಮಚರಿತ್ರೆ ಮತ್ತು ಕೃಷ್ಣಚರಿತ್ರೆ: ರಾಮ-ಕೃಷ್ಣರ ಕಥೆಯ ಸಂಕ್ಷಿಪ್ತ ರೂಪ.ವಿಶೇಷತೆ: ಇವರು ಕಠಿಣವಾದ ವೇದಾಂತ ವಿಷಯಗಳನ್ನು ಸರಳವಾಗಿ ಬರೆದಿದ್ದರಿಂದ ಇವರನ್ನು ’ಪರಿಮಳಾಚಾರ್ಯ’ ಎಂದು ಕರೆಯುತ್ತಾರೆ. ಇವರು ಒಟ್ಟು 48ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

"ದೀರ ಶ್ರೀ ವೇಣು ಗೋಪಾಲ" ಅಂಕಿತ ನಾಮದಿಂದ ಕನ್ನಡದಲ್ಲಿ "ಇಂದು ಎನಗೆ ಗೋವಿಂದ" ಎಂಬ ಗೀತೆಯನ್ನು ಸಹ ರಚಿಸಿದ್ದಾರೆ ಉಪಸಂಹಾರ"ನಂಬಿದವರಿಗೆ ಇಷ್ಟಾರ್ಥ ಸಿದ್ಧಿಸುವ ಕಲ್ಪವೃಕ್ಷ"ನಾಗಿ ಮಂತ್ರಾಲಯದ ಪವಿತ್ರ ಭೂಮಿಯಲ್ಲಿ ಇಂದಿಗೂ ಸಶರೀರವಾಗಿ, ಅದೃಶ್ಯ ರೂಪದಲ್ಲಿ ನೆಲೆಸಿರುವ ಗುರು ರಾಘವೇಂದ್ರ ಸ್ವಾಮಿಗಳು ಕೋಟ್ಯಂತರ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ಅವರ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ  19 ಫೆಬ್ರುವರಿ 2026 ರಿಂದ 24 ಫೆಬ್ರವರಿ 2026 ವರೆಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಮತ್ತು ವರ್ಧಂತಿ ಮಹೋತ್ಸವದ ಪ್ರಯುಕ್ತ ಸಪ್ತರಾತ್ರೋತ್ಸವವನ್ನು ಆಚರಿಸುತ್ತಿದ್ದಾರೆ ಅದರ ಪ್ರಯುಕ್ತವಾಗಿ  ಗುರು ರಾಘವೇಂದ್ರ ಸ್ವಾಮಿಗಳ ಪಾದಾರ ವೃಂದದಲ್ಲಿ ಈ ಪುಟ್ಟ ಲೇಖನವನ್ನು ಸಮರ​‍್ಿಸುತ್ತಿದ್ದೇನೆ. ಕೃಷ್ಣಾರ​‍್ಣಮಸ್ತುಶ್ರೀ ರಾಘವೇಂದ್ರಾಯ ನಮಃಶ್ರೀ ಕೃಷ್ಣ ಕುಲಕರ್ಣಿ  ಹವ್ಯಾಸಿ ಬರಹಗಾರರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಂದಾಳ 


ಸುದ್ದಿ ಓದಿ