"ಸಮಸ್ಯೆ ಪರಿಹರಿಸಲು ನಾವು ಬೇಕು-ಮತಗಳನ್ನು ಮಾತ್ರ ಮೋದಿಗೆ ಹಾಕುತ್ತೀರಾ" : ಎಚ್ ಡಿ ಕುಮಾರಸ್ವಾಮಿ
ರಾಯಚೂರು: 'ಸಮಸ್ಯೆ ಕೇಳಲು ನಾವು ಬೇಕು ಮತಗಳನ್ನು ಮಾತ್ರ ಮೋದಿಗೆ ಹಾಕುತ್ತಿರಾ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವೈಟಿಪಿಎಸ್ ಗುತ್ತಿಗೆ ಕೆಲಸ ಕಳೆದುಕೊಂಡ ನೌಕರರ ವಿರುದ್ಧ ಕಿಡಿಕಾರಿದ್ದಾರೆ. ವೈಟಿಪಿಎಸ್ ಗುತ್ತಿಗೆ ಕೆಲಸ ಕಳೆದುಕೊಂಡ ಸಿಬ್ಬಂದಿಯನ್ನು ಮುಖ್ಯಮಂತ್ರಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರೇಗುಡ್ಡದತ್ತ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಅವರಿದ್ದ ಬಸ್ ಗೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗೆ ಕುಮಾರಸ್ವಾಮಿ ಹಿಗ್ಗಾಮುಗ್ಗಾ ಝಾಡಿಸಿದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯ ಹೈಡ್ರಾಮ ನಡೆಯಿತು.ರಾಯಚೂರಿನ ಅತಿಥಿ ಗೃಹದಲ್ಲಿ ಸಭೆ ನಡೆಸಿ, ಸಕರ್ಿಟ್ ಹೌಸ್ನಿಂದ ಕರೇಗುಡ್ಡದತ್ತ ಬಸ್ ನಲ್ಲಿ ತೆರಳುವ ಮಾರ್ಗ ಮಧ್ಯೆ ವೈಟಿಪಿಎಸ್ ಗುತ್ತಿಗೆ ಕಾಮರ್ಿಕರು ಮುಖ್ಯಮಂತ್ರಿ ತೆರಳುತ್ತಿದ್ದ ಬಸ್ ಗೆ ಮುತ್ತಿಗೆ ಹಾಕಿ ಕೆಲಸ ಕೊಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದರು. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತೆ ಉದ್ಯೋಗ ನೀಡುವಂತೆ ವೈಟಿಪಿಎಸ್ ಗುತ್ತಿಗೆ ನೌಕರರು ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ಇದರಿಂದ ಕೋಪಗೊಂಡ ಮುಖ್ಯಮಂತ್ರಿ ಬಸ್ಸಿನಲ್ಲಿಯೇ ಕುಳಿತು ಪ್ರತಿಭಟನಾಕಾರರ ವಿರುದ್ದ ಗುಡುಗಿದರು. 'ಸಮಸ್ಯೆ ಕೇಳಲು ನಾವು ಬೇಕು..ಮತಗಳನ್ನು ಮಾತ್ರ ಮೋದಿಗೆ ಹಾಕುತ್ತಿರಾ ಎಂದು ಪ್ರಶ್ನಿಸಿದರು. ' ಸಾಲದ್ದಕ್ಕೆ ಬಸ್ ಗೆ ಅಡ್ಡಬಂದರೆ ಲಾಠಿ ಚಾರ್ಜ ಮಾಡಿಸಬೇಕಾಗುತ್ತದೆ, ನಿಮಗೆ ಮಾನ ಮಯರ್ಾದೆ ಇದೆಯೇ ಎಂದು ಮತ್ತಷ್ಟು ಆಕ್ರೋಶ ಭರಿತರಾಗಿ ರೇಗಿದರು. ಮುಖ್ಯಮಂತ್ರಿ ಅವರು ರೋಷಾವೇಷ ಕಂಡ ಗುತ್ತಿಗೆ ನೌಕರರು ಘೋಷಣೆಗಳನ್ನು ಕೂಗುತ್ತಾ ಬಸ್ ತೆರಳಲು ಅಡ್ಡಿಪಡಿಸಿದರು.ಪ್ರತಿಭಟನಾಕಾರರನ್ನು ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ತದನಂತರ ಮಾನ್ವಿಯ ಕಲ್ಲೂರು ಗ್ರಾಮದಲ್ಲಿ ಮುಖ್ಯಮಂತ್ರಿಗೆ ಯುವತಿಯರು ಹಾಗೂ ಮಹಿಳೆಯರು ಪೂರ್ಣ ಕುಂಬ ಸ್ವಾಗತ ಕೋರಿದರು. ಮಾರ್ಗಮಧ್ಯದಲ್ಲೇ ಮುಖ್ಯಮಂತ್ರಿ ಜನರ ಅಹವಾಲು ಸ್ವೀಕರಿಸಿದರು. ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಲ್ಲದೇ, ಕ್ಯಾನ್ಸರ್ ಪೀಡಿತ ಮಹಿಳೆಗೆ 2 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.