ಏತ ನೀರಾವರಿ ಯೋಜನೆಗೆ ಬಜೆಟ್ದಲ್ಲಿ ಅನುದಾನಕ್ಕೆ ಮೀಸಲು: ದುರ್ಯೋಧನ ಐಹೊಳೆ
ಚಿಕ್ಕೋಡಿ 05: ರಾಯಬಾಗ ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾದ ಕರಗಾಂವ ಏತ ನೀರಾವರಿ ಯೋಜನೆಗೆ ಈ ಬಜೆಟ್ದಲ್ಲಿ ಅನುದಾನ ಮೀಸಲಿಡಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಒತ್ತಾಯಿಸಿದರು.
ಚಿಕ್ಕೋಡಿ ತಾಲೂಕಿನ ಮಜಲಟ್ಟಿ-ಖಜಗೌಡನಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರಗಾಂವ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತು ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಲಾಗಿರುತ್ತದೆ. ಆದರೆ ಈಗೀನ ಕಾಂಗ್ರೆಸ್ ಸರ್ಕಾರ ಯೋಜನೆಯ ಕಾಮಗಾರಿ ಆರಂಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಯಬಾಗ ವಿಧಾನ ಸಭೆ ಕ್ಷೇತ್ರದ ಚಿಕ್ಕೋಡಿ ತಾಲೂಕಿನ ಮಡ್ಡಿಪ್ರದೇಶ ವ್ಯಾಪ್ತಿಗೆ ಬರುವ ನಾಗರಮುನ್ನೋಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರ ಮತ್ತು ಕರೋಶಿ ಜಿ.ಪಂ ವ್ಯಾಪ್ತಿಗೆ ಬರುವ ಹಳ್ಳಿಯ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕಾಮಗಾರಿಗೆ ಚಾಲನೆ ಕೊಟ್ಟು ಒಂದು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಅನುದಾನ ಕೊಡುತ್ತಿಲ್ಲ, ಈಗಲಾದರೂ ಬಜೆಟ್ದಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.
ತಾಲೂಕಿನ ಖಜಗೌಡನಟ್ಟಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ 13 ಲಕ್ಷ ರೂ ಅನುದಾನ ಮಂಜೂರಾಗಿದೆ. ಅಧಿಕಾರಿಗಳು ಮತ್ತು ಶಿಕ್ಷಕರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಕ್ತ ಗಮನ ಹರಿಸಬೇಕು ಎಂದರು.
ಗ್ರಾಮದ ಆಯುರ್ವೇದ ಚಿಕಿತ್ಸಾಲಯ ಕಟ್ಟಡ ಕಾಮಗಾರಿಗೆ 10 ಲಕ್ಷ ರೂ ಹಾಗೂ ಗ್ರಾಮದ ವಸತಿ ನಿಲಯ ಕಟ್ಟಡ ಕಾಮಗಾರಿಗೆ 14 ಲಕ್ಷ ರೂ ಹೀಗೆ 37 ಲಕ್ಷ ರೂ ಅನುದಾನ ಮಂಜೂರಾಗಿದೆ. ಎಲ್ಲ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ನಿರ್ಮಾಣವಾಗಲು ಗ್ರಾಮಸ್ಥರು ಮುಂದೆ ನಿಂತು ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ದುರೀಣ ವಿಜಯ ಕಠಿವಾಲೆ, ಸದಾಶಿವ ಘೋರೆ್ಡ, ಪಾಪು ಚೌಗಲೆ, ವಿಠ್ಠಲ ಬಾಡಕರ, ಸುಭಾಷ ಕರೋಲೆ, ರಾಜು ನಾಯಿಕ, ಬಸವರಾಜ ರಾಜಗೌಡರ, ಡಾ, ರೋಹಿಣಿ ಕಿಣಗೆ ಮುಂತಾದವರು ಇದ್ದರು.