ರಾಷ್ಟ್ರೀಯ

೨೦೦ ಹೆಚ್ಚುವರಿ ರೈಲು; ನಿನ್ನೆ ಸಂಜೆವರೆಗೆ ೨.೩೭ಲಕ್ಷ ಟಿಕೆಟ್ ಗಳು ಬುಕ್

೨೦೦ ಹೆಚ್ಚುವರಿ ರೈಲು; ನಿನ್ನೆ ಸಂಜೆವರೆಗೆ  ೨.೩೭ಲಕ್ಷ ಟಿಕೆಟ್ ಗಳು ಬುಕ್

ನವದೆಹಲಿ, ಮೇ ೨೨,  ಭಾರತೀಯ  ರೈಲ್ವೆ   ಜೂನ್ ೧ ರಿಂದ  ಕಾರ್ಯಾಚರಣೆ  ಆರಂಭಿಸಲಿರುವ  ೨೦೦ ಹೆಚ್ಚುವರಿ ವಿಶೇಷ ರೈಲುಗಳಿಗೆ ನಿನ್ನೆ  ಸಂಜೆಯವರೆಗೆ   ೨.೩೭ ಲಕ್ಷ  ಟಿಕೆಟ್ ಗಳು  ಬುಕ್ ಆಗಿವೆ  ಎಂದು   ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ ಈ ರೈಲುಗಳ ಬುಕಿಂಗ್  ಪ್ರಕ್ರಿಯೆ    ಗುರುವಾರ  ಬೆಳಿಗ್ಗೆ ೧೦ ಗಂಟೆಗೆ ಐಆರ್ಸಿಟಿಸಿ ಮೂಲಕ  ಆರಂಭಗೊಂಡಿತ್ತು.  ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಅಥವಾ ಮೊಬೈಲ್ ಆ?ಯಪ್ ಮೂಲಕ ಆನ್ಲೈನ್ ನಲ್ಲಿ ಮಾತ್ರ ಟಿಕೆಟ್  ಕಾಯ್ದಿರಿಸಬಹುದಾಗಿದೆ.ರೈಲ್ವೆ ನಿಲ್ದಾಣದ ರಿಸರ್ವ್ ಕೌಂಟರ್, ಬುಕಿಂಗ್ ಏಜೆಂಟರ ಮೂಲಕ ಬುಕಿಂಗ್ ಅನುಮತಿಸಲಾಗುವುದಿಲ್ಲ. ಈ ವಿಶೇಷ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವ ಅವಧಿ ೩೦ ದಿನಗಳು ಎನ್ನಲಾಗಿದೆ.

ಸುದ್ದಿ ಓದಿ