ಮನರಂಜನೆ

ಪಾನ್‌ ಮಸಾಲ ಬ್ರಾಂಡ್‌ ಗೆ ಅಮಿತಾಬ್‌ ಬಚ್ಚನ್‌ ಲೀಗಲ್‌ ನೋಟೀಸ್‌ ...!

ಪಾನ್‌  ಮಸಾಲ  ಬ್ರಾಂಡ್‌ ಗೆ   ಅಮಿತಾಬ್‌ ಬಚ್ಚನ್‌   ಲೀಗಲ್‌ ನೋಟೀಸ್‌ ...!

ಮುಂಬೈ, ನ 21  -  ಬಾಲಿವುಡ್ ಮೆಗಾ ಸ್ಟಾರ್  ಅಮಿತಾಬ್ ಬಚ್ಚನ್   ಪಾನ್ ಮಸಾಲಾ  ಬ್ರಾಂಡ್‌ಗೆ  ಲೀಗಲ್ ನೋಟಿಸ್  ಕಳುಹಿಸಿದ್ದಾರೆ.   ಕಳೆದ ತಿಂಗಳು,    ಪಾನ್ ಮಸಾಲಾ ಬ್ರ್ಯಾಂಡ್ ನೊಂದಿಗಿನ  ಒಪ್ಪಂದವನ್ನು  ರದ್ದುಪಡಿಸಿಕೊಂಡು,  ಅದಕ್ಕಾಗಿ ಪಡೆದುಕೊಂಡಿದ್ದ  ಹಣವನ್ನು ಹಿಂದಿರುಗಿಸಿದ್ದೇನೆ ಎಂದು  ಅಮಿತಾಬ್‌ ಬಚ್ಚನ್‌   ಹೇಳಿದ್ದರು.  ಆದರೂ,     ಈಗಲೂ   ತಾವು ಪ್ರಚಾರ  ಮಾಡುತ್ತಿರುವ ರೀತಿ    ಜಾಹೀರಾತು   ಪ್ರಸಾರವಾಗುತ್ತಿರುವ   ಕಾರಣ   ಅಮಿತಾಬ್‌,      ಲೀಗಲ್ ನೋಟಿಸ್ ಕಳುಹಿಸಿದ್ದಾರೆ.   ಈ   ಜಾಹೀರಾತುಗಳ  ಪ್ರಸಾರ   ರದ್ದುಗೊಳಿಸುವಂತೆ    'ಕಮಲಾ ಪಸಂದ್'  ಪಾನ್ ಮಸಾಲಾ ಬ್ರಾಂಡ್‌ಗೆ   ಬಿಗ್‌ ಬಿ   ಕಚೇರಿ  ಲೀಗಲ್ ನೋಟಿಸ್ ರವಾನಿಸಿದೆ.    ಇನ್ನು ಮುಂದೆ   ಪಾನ್‌ ಮಸಾಲ   ಬ್ರಾಂಡ್‌    ಜಾಹಿರಾತುಗಳೊಂದಿಗೆ    ಅಮಿತಾಬ್ ಬಚ್ಚನ್‌   ಯಾವುದೇ   ಸಂಬಂಧ ಹೊಂದಿಲ್ಲ ಎಂದು  ಅಕ್ಟೋಬರ್‌ನಲ್ಲಿ,  ಅಮಿತಾಭ್ ಬಚ್ಚನ್ ಅವರ  ಕಚೇರಿಯು   ಒಂದು  ಪೋಸ್ಟ್ ಮಾಡಿತ್ತು.


ಅಮಿತಾಬ್‌,  'ಪಾನ್  ಮಸಾಲಾ ಬ್ರ್ಯಾಂಡ್ ಜಾಹೀರಾತು   ಪ್ರಸಾರ ಮಾಡಿದ  ಕೆಲವು ದಿನಗಳ  ನಂತರ    ಅದರಿಂದ ಹಿಂದೆಸರಿದಿದ್ದಾರೆ.  ಏಕೆಂದರೆ ಒಪ್ಪಂದ  ಮಾಡಿಕೊಂಡಾಗ,   ಅದು ಬಾಡಿಗೆ   ಜಾಹೀರಾತು ಅಡಿಯಲ್ಲಿ ಬರುತ್ತದೆಯೇ  ಎಂದು ತಿಳಿದಿರಲಿಲ್ಲ,    ಈ ಬ್ರ್ಯಾಂಡ್‌ನೊಂದಿಗಿನ ಒಪ್ಪಂದವನ್ನು ರದ್ದುಪಡಿಸಿಕೊಂಡು,   ಪ್ರಚಾರಕ್ಕೆ ತೆಗೆದುಕೊಂಡ ಹಣವನ್ನೂ   ವಾಪಸ್  ನೀಡಿದ್ದಾರೆ ಎಂದು  ಪೋಸ್ಟ್‌ನಲ್ಲಿ ಹೇಳಲಾಗಿದೆ.   ಈ  ಪಾನ್ ಮಸಾಲಾ  ಬ್ರಾಂಡ್  ಜಾಹೀರಾತಿನಲ್ಲಿ  ಕಾಣಿಸಿಕೊಂಡ ಪರಿಣಾಮ    79 ವರ್ಷದ  ಅಮಿತಾಬ್ ಬಚ್ಚನ್  ಹಲವಾರು  ಹಿನ್ನಡೆ   ಎದುರಿಸಿದ್ದಾರೆ. ಅನೇಕ  ಅಭಿಮಾನಿಗಳು  ಜಾಹಿರಾತಿಗೆ   ವಿರೋಧ ವ್ಯಕ್ತಪಡಿಸಿ, ಅಮಿತಾಬ್‌  ಇದಕ್ಕೆ  ಹೇಗೆ ಒಪ್ಪಿಗೆ ಸೂಚಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸೆಪ್ಟೆಂಬರ್  2021 ರಲ್ಲಿ,  ತಂಬಾಕು  ನಿರ್ಮೂಲನೆಗಾಗಿ   ರಾಷ್ಟ್ರೀಯ ಸಂಸ್ಥೆ (ನೋಟ್),    ಕೂಡ     ಪಾನ್ ಮಸಾಲಾ ಬ್ರಾಂಡ್‌ಗಳ  ಪ್ರಚಾರ   ಜಾಹಿರಾತುಗಳ  ಭಾಗವಾಗದಂತೆ   ಅಮಿತಾಬ್‌  ಬಚ್ಚನ್‌   ಅವರಿಗೆ ಮನವಿ ಮಾಡಿತ್ತು.  ಪಾನ್  ಮಸಾಲಾ ಜಾಹೀರಾತುಗಳಿಂದ   ಹಿಂದೆ ಸರಿದು ಹಿಂದೆ  ಸರಿದು ತಂಬಾಕು ವಿರೋಧಿ ಆಂದೋಲನವನ್ನು ಬೆಂಬಲಿಸುವಂತೆ ನೋಟ್‌  ಅಧ್ಯಕ್ಷ ಡಾ.ಶೇಖರ್ ಸಾಲ್ಕರ್  ಬಹಿರಂಗಪತ್ರದಲ್ಲಿ ಕೋರಿದ್ದರು.

ಸುದ್ದಿ ಓದಿ