ಶಕುಂತಲಾ ಶೇಟ್ಗೆ ಸನ್ಮಾನ
ಲೋಕದರ್ಶನ ವರದಿ
ಮುಂಡಗೋಡ 18: ಪಟ್ಟಣದ ನಿವೃತ್ತ ನೌಕರರ ಸಭಾಭವನದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಶಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಸನ್ಮಾನ ಸಮಾರಂಭದಲ್ಲಿ ನಿವೃತ್ತ ಅಬಕಾರಿ ರಕ್ಷಕ ದಿ.ವಿಠ್ಠಲ ಶೇಟ್(ವೆರ್ಣೇಕರ) ಅವರ ಪತ್ನಿ ಶಕುಂತಲಾ ಶೇಟ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲೊಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ಪ್ರಾಂಶುಪಾಲ ಫಾ.ಜಾನ್ಸನ್ ಪಿಂಟೊ, ಎಸ್.ಕೆ.ಬೋರಕರ, ಎಚ್.ಎನ್.ತಪೇಲಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.