ಮುಂದಗೋಡ

‘ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದೆ’

‘ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದೆ’

ಮುಂಡಗೋಡ: ಇಂದಿನ ಯುವ ಪೀಳಿಗೆ ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಂಡು ತಾವು ಆಧಾರವಾಗಬೇಕಾದ ಕುಟುಂಬಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ವಿಷಾದ ವ್ಯಕ್ತಪಡಿಸಿದರು. 

ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಜರುಗಿದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಇಳಕಲ್‌ನ ಡಾ.ಮಹಾಂತ ಶಿವಯೋಗಿಗಳು ನಿಮ್ಮ ದುಶ್ಚಟ ನನ್ನ ಜೋಳಿಗೆಗೆ ಹಾಕಿ ಎಂದು ಜನರಿಗೆ ಹೇಳಿದಾಗ ಗುಟಕಾ, ಸಿಗರೇಟ್ ಪ್ಯಾಕ್‌ಗಳನ್ನು ಅವರ ಜೋಳಿಗೆಗೆ ಹಾಕಿಬಿಡುತ್ತಿದ್ದರು. ನಂತರ ಎಂದೂ ಚಟ ಮಾಡುತ್ತಿರಲಿಲ್ಲ. ಈ ರೀತಿಯಾಗಿ ದುರ್ವ್ಯಸನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮನಪರಿವರ್ತಿಸಿ ಜನರ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಪಡೆದು ವಿಶಿಷ್ಟ ಜಾಗೃತಿ ಮೂಡಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು. ಈ ವೇಳೆ ಸಿಬ್ಬಂದಿ ರಾಘವೇಂದ್ರ ಕರೂರ, ಶ್ರೀಕಾಂತ ಹೊಸಮನಿ, ಸೋಮೇಶ್ವರ ಕುರ್ಡೇಕರ, ಕೃಷಿ ಇಲಾಖೆಯ ಎಸ್‌.ಎನ್‌.ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ