'ಯೋಗೇಶ್ ಖಾನಗೌಡ ಟ್ರೋಫಿ' ಕ್ರಿಕೆಟ್ : ಹಂದಿಗುಂದ ಗ್ರಾಮದಲ್ಲಿ ದಶಕದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಅದ್ದೂರಿ ಚಾಲನೆ
ಮಹಾಲಿಂಗಪುರ : ಸಮೀಪದ ಹಂದಿಗುಂದ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಹತ್ತನೇಯ ವರ್ಷದ ಅಂತರ್ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಜನವರಿ 02 ರವಿವಾರ ಗ್ರಾಮದ ಪಂಚಾಯಿತಿ ಕ್ರಿಡಾಂಗಣದಲ್ಲಿ ಆರಂಭಗೊಳ್ಳಲಿದೆ.
ಈ ವರ್ಷ ನಡೆಯುವ ಪಂದ್ಯಾವಳಿಯ ನಗದು ಬಹುಮಾನಗಳು ಪ್ರಥಮ 50ಸಾವಿರ, ದ್ವಿತೀಯ 25ಸಾವಿರ, ತೃತಿಯ 10ಸಾವಿರ ಹಾಗೂ ಇನ್ನಿತರ ವೈಯಕ್ತಿಕ ಬಹುಮಾನಗಳು, ಪಾರಿತೋಷಕಗಳು ಹಾಗೂ ಭವ್ಯ ವೇದಿಕೆ ಖಾನಗೌಡ ಪರಿವಾರ ಹಾಗೂ ಗ್ರಾಮದ ಕ್ರಿಡಾ ಪ್ರೋತ್ಸಾಹಕರು ನೀಡಿ ಪಂದ್ಯಾವಳಿಗೆ ಸಹಕರಿಸಿರುವುದರಿಂದ ಗೌರವಪೂರ್ವಕವಾಗಿ ' ಖಾನಗೌಡ ಟ್ರೋಫಿ' ಎಂದು ಹೆಸರಿಸಲಾಗಿದ್ದು ಪರಿವಾರದ ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹಿರಿಯ ಕ್ರಿಕೆಟ್ ಸಂಯೋಜಕ ಷಣ್ಮುಖ ಸುತಾರ ತಿಳಿಸುತ್ತಾರೆ.
ಫೆಬ್ರವರಿ 2ರಂದು ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್, ಬೆಂಗಳೂರು ಸಣ್ಣ ಕಾರಣಗಳ ನ್ಯಾಯಾಲಯದ ನ್ಯಾಯಮೂರ್ತಿ ಅಲ್ಲಪ್ಪ ಬಡಿಗೇರ, ಬಿಜೆಪಿ ಕುಡಚಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಕೊಣ್ಣೂರ ಶಿಕ್ಷಣ ಸಂಸ್ಥೆಯ ಬಸವರಾಜ ಕೊಣ್ಣೂರ ಹಾಗೂ ಅನೇಕ ಇಲಾಖೆಯ ಅಧಿಕಾರಿಗಳು ಹಾಗೂ ಊರಿನ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಆರಂಭದ ಕಾರ್ಯಕ್ರಮಲ್ಲಿ ಪ್ರಗತಿಪರ ರೈತರಾದ ಶಿವಪ್ಪ ಮಿರ್ಜಿ ಮೈದಾನ ಪೂಜೆ ನೆರವೇರಿಸಿದರೆ, ಬಿಜೆಪಿ ಕುಡಚಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖಾನಗೌಡ ಅವರು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಹಿರಿಯ ಕ್ರಿಕೆಟಿಗರಾದ ಪ್ರಕಾಶ ಕರಲಟ್ಟಿ, ಶ್ರೀಕಾಂತ ಮಾಗಿ, ಪತ್ರಕರ್ತರಾದ ಶಿವಲಿಂಗ ಸಿದ್ನಾಳ, ಮೀರಾ ತಟಗಾರ ಭಾಗವಹಿಸುವರು.
ಹೆಚ್ಚಿನ ಮಾಹಿತಿಗಾಗಿ 7353124582, 6364596698, 9741398545 ಈ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.