ಬೈಲಹೊಂಗಲ

‘ಪಜಾಪಂ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು’

‘ಪಜಾಪಂ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು’

ಬೈಲಹೊಂಗಲ 02: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ ಕುಂದು-ಕೊರತೆ ಹಾಗೂ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದೆಂದು ಶಾಸಕ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಜಂಟಿಯಾಗಿ ಹೇಳಿದರು. 

ಪಟ್ಟಣದ ತಹಶೀಲ್ದಾರ ಸಭಾಭವನದಲ್ಲಿ ಮಂಗಳವಾರ ತಾಲೂಕಾಡಳಿತ, ತಾ.ಪಂ., ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗದವರ ಹಿತರಕ್ಷಣಾ ಮತ್ತು ಯೋಗಕ್ಷೇಮ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 

ಎಸ್ಸಿ, ಎಸ್ಟಿ ಸಮಾಜದ ಮುಖಂಡರು ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗದವರ ಕುಂದು ಕೊರತೆ ಸಭೆಗಳು ಕಾಟಾಚಾರದ ಸಭೆಗಳಾಗಿ ಮಾರ​‍್ಪಟಟಿವೆ. ಯಾವುದೇ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ಸ್ಮಶಾನ, ಭೂಮಿ, ವಸತಿ ಈ ಮೂರು ಪ್ರಮುಖ ಸಮಸ್ಯೆಗಳಾಗಿದ್ದು, ಇವುಗಳ ನಿವಾರಣೆಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಕೆಲ ಕಡೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು. 

ಪರಿಶಿಷ್ಟ ಜಾತಿ ಹಾಗೂ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು. ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾಲೋನಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಸರಕಾರದಿಂದ ಬರುವ ಅನುದಾನ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲವೆಂದು ಆರೋಪಿಸಿದರು. ತಾಲೂಕಿನ ಉಪನೋಂದಣಿ ಅಧಿಕಾರಿಗಳ ಕಛೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಜರುಗಿಸಬೇಕು. 

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಿದ ಬೋರ್ ವೆಲ್‌ಗಳಿಗೆ ಸುಮಾರು ಹತ್ತು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದರು. ಹೀಗೆ ಅನೇಕ ಸಮಸ್ಯೆಗಳ ಕುರಿತು ಸುರಿಮಳೆಗೈದರು. 

ಮೂಲ ಸೌಕರ್ಯ ಒದಗಿಸಲು ಆಗ್ರಹ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಅನುಕೂಲಕ್ಕಾಗಿ ಸ್ಮಶಾನ ಭೂಮಿ ವ್ಯವಸ್ಥೆ ಕಲ್ಪಿಸುವುದಾಗಬೇಕು. ಸರಿಯಾದ ರಸ್ತೆ ಸಂಪರ್ಕ ಇಲ್ಲ. ಮೂಲ ಸೌಕರ್ಯಗಳಿಗಾಗಿ ಹಲವು ಬಾರಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ಮುಖಂಡರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು, ಬರುವ ಸಭೆಯ ಒಳಗಾಗಿ ಸ್ಮಶಾನ ಭೂಮಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. 

ಎಸ್‌ಸಿಪಿ, ಟಿಎ ಸ್‌ಪಿ ಅನುದಾನ ಬಳಕೆಯಾಗಲಿ : ಭೂ ಒಡೆತನ ಯೋಜನೆಯಡಿ ಭೂಮಿಗಳಿಲ್ಲದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಭೂಮಿ ಮಂಜೂರು ಮಾಡಬೇಕು. ಜಮೀನುಗಳ ಅಕ್ರಮ ಸಕ್ರಮಗೊಳಿಸುವ ಪ್ರಕ್ರಿಯೆಗಳಲ್ಲಿ ಅರ್ಹರ ದಾಖಲೆಗಳನ್ನು ಪರೀಶೀಲಿಸಿ ಅಕ್ರಮ ಸಕ್ರಮಗೊಳಿಸಬೇಕು ಎಂದು ಗುಡೆನ್ನವರ ಮನವಿ ಮಾಡಿಕೊಂಡರು. ಎಸ್‌.ಸಿ.ಪಿ-ಟಿ.ಎಸ್‌.ಪಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವ ಮುಂಚೆ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಅದೇ ರೀತಿಯಲ್ಲಿ ಎಸ್‌.ಸಿ.ಪಿ-ಟಿ.ಎಸ್‌.ಪಿ ಅನುದಾನ ಸಮರ​‍್ಕ ಬಳಕೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. 

ತಹಶೀಲ್ದಾರ ಹನುಮಂತ ಶೀರಹಟ್ಟಿ, ತಾ.ಪಂ.ಇಓ ಸುಭಾಸ ಸಂಪಗಾಂವಿ, ಸಿಪಿಐಗಳಾದ ಪಿ.ವ್ಹಿ.ಸಾಲಿಮಠ, ರಾಘವೇಂದ್ರ ಹವಾಲ್ದಾರ, ಮುಖಂಡರಾದ ಜಿ.ವಾಯ್‌.ಭರಮಣ್ಣವರ, ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ರುದ್ರ​‍್ಪ ನಿಂಗನ್ನವರ, ರಮೇಶ ರಾಯಪ್ಪಗೋಳ, ಶಿವಯೋಗಿ ಹುಲ್ಲೇನ್ನವರ, ಸಂಜೀವ ಮುರಗೋಡ, ಪುಂಡಲೀಕ ಭಜಂತ್ರಿ, ರುದ್ರ​‍್ಪ ಮುಂದಿನಮನಿ, ಮಂಜುನಾಥ ಶಿಡ್ಲವ್ವಗೋಳ, ಮನೋಜ ಕೇಳಗೇರಿ, ನಾಗಪ್ಪ ಭರಮಣ್ಣವರ, ಸದಾನಂದ ಕೋಟಗಾರ ಸೇರಿದಂತೆ ಎಸ್ಸಿ ಮತ್ತು ಎಸ್‌ಟಿ ಸಮಾಜದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ