‘ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು’
ಶಿಗ್ಗಾವಿ 09: ವರ್ಷದಲ್ಲಿ ಮೂರು ಭಾರಿ ಮಹಿಳೆಯರು ಮತ್ತು 4 ಭಾರಿ ಪುರುಷರು ರಕ್ತದಾನ ಮಾಡುವುದರಿಂದ ಹೃದಯಾಘಾತ, ಬೊಜ್ಜಿನಂತಹ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಹಾವೇರಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.
ತಾಲೂಕಿನ ಕಬನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತಸಿಂಗ್ ಯುವ ಸೇನೆ ಹಾಗೂ ಗ್ರಾಮಸ್ಥರು, ಜಿಲ್ಲಾ ಆಸ್ಪತ್ರೆ ಹಾವೇರಿ ರಕ್ತ ನಿಧಿ ಕೇಂದ್ರ ಹಾಗೂ ಸಾರ್ವಜಕ ಆಸ್ಪತ್ರೆ ಶಿಗ್ಗಾವಿ ಇವರ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು ಎಲ್ಲರಿಗೂ ಇಂದು ರಕ್ತದ ಅವಶ್ಯಕತೆವಿರುವ ಕಾರಣ ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಇನ್ನೋಬ್ಬರ ಮರಣವನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಿ.ಟಿ. ಇನಾಮತಿ ಮಾತನಾಡಿ ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಯುವಕರು ದುಶ್ಚಟಕ್ಕೆ ಬಲಿಯಾಗದ ರೀತಿಯಲ್ಲಿ ಯುವಕರು ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರು ಅಶೋಕ ಓಲೇಕಾರ, ಮಂಜುನಾಥ, ಹರೀಶ, ಬಸವರಾಜ, ಚೇತನ, ಚೇತನ.ಬಿ, ಕೆ.ಬಿ.ಇನಾಮತಿ, ಎಸ್.ಎಸ್.ಮುತ್ತಗಿ, ವಿಜಾಪೂರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಬಸವರಾಜ ಕಮತದ, ಪುಪ್ಷಾವತಿ, ಸಿದ್ದು ಹಿರಗಣ್ಣವರ, ಸೌಭಾಗ್ಯ ಕಬನೂರ ಭಗತಸಿಂಗ ಯುವಸೇನೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು 45 ಜನ ಜೀವದಾನಿಗಳಾದರು.