ಚಿಕ್ಕೋಡಿ

‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಠಿಣ ಪರಿಶ್ರಮದಿಂದ ಓದಿ ಉತ್ತೀರ್ಣರಾಗಿ’

‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಠಿಣ ಪರಿಶ್ರಮದಿಂದ ಓದಿ ಉತ್ತೀರ್ಣರಾಗಿ’

ಚಿಕ್ಕೋಡಿ 25: ಕಾನೂನು ವಿದ್ಯಾರ್ಥಿಗಳು ಪದವಿಯನ್ನು ಪಡೆದು ವೃತ್ತಿಯಲ್ಲಿ ಪಾಲ್ಗೊಳ್ಳುವಲ್ಲಿ ಗುರುವಿನ ಮಾರ್ಗದರ್ಶನದಂತೆ ನಡೆಯಬೇಕು.  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಠಿಣ ಪರಿಶ್ರಮದಿಂದ ಓದಿ ಉತ್ತೀರ್ಣರಾಗಿ ಸಮಾಜದಲ್ಲಿ ಮುಂದೆ ಬರಬೇಕೆಂದು ಚಿಕ್ಕೋಡಿ  7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ   ಸಾರ್ವಜನಿಕ ಅಭಿಯೋಜಕ ವಾಯ್‌.ಜಿ.ತುಂಗಳ ಹೇಳಿದರು. 

ಇಲ್ಲಿನ  ಕೆ.ಎಲ್‌.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು,  ಸಾಧಕರಾಗಲು ಪರಿಶ್ರಮ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದರು. 

ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಮ್‌.ಆರ್‌.ಸಗರೆ  ಮಾತನಾಡಿ, ಇಂದಿನ  ಕಾರ್ಯಕ್ರಮ 2 ಸಂಗತಿಗಳಿಂದ ಕೂಡಿದ್ದು ಒಂದು ಬೀಳ್ಕೊಡುಗೆ ಇನ್ನೊಂದು ಪ್ರಶಸ್ತಿ ಪುರಸ್ಕಾರ.  ಕಾನೂನು ಪದವಿಗೆ ಬಹಳ ಮಹತ್ವವಿದೆ  ವಕೀಲರಿಗಿರುವ ಪ್ರಾಧ್ಯಾನ್ಯತೆ ಬೇರೆ ಯಾರಿಗೂ ಇಲ್ಲ ಎಂದು ತಿಳಿಸಿದರು.  ಸಮಾಜದಲ್ಲಿ ವ್ಯವಸ್ಥಿತರಾಗಿರಬೇಕು, ಜಾಗೃತರಾಗಿರಬೇಕೆಂದರು.  

ಶಿವಾನಂದ  ಚೊನ್ನದ, ಎಸ್‌.ಜಿ.ಬೊಳಾಜದಾರ, ಎಲ್‌.ಎ.ಸರದಾರ ಉಪಸ್ಥಿತರಿದ್ದರು. 

ಮಹಾವಿದ್ಯಾಲಯದ ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಸೊಲಾಪುರೆ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ವೈಶಾಲಿ ಬಿಳಗಿ   ಪ್ರಸ್ತುತ ಪಡಿಸಿದರು. ದೀಪಾಲಿ ಪಾಟೀಲ, ವೈಶಾಲಿ ಬಿಳಗಿ ಪಿ.ಎಮ್‌.ಕಮತೆ ನಡೆಸಿಕೊಟ್ಟರು, ಅಮಿತ ಬಾಗಿ ವಂದಿಸಿದರು. ವೈಶಾಲಿ ನಿಕಮ ಮತ್ತು ಪೂಜಾ ಪಾಟೀಲ ನಿರೂಪಿಸಿದರು. 


ಸುದ್ದಿ ಓದಿ