ಬೆಳಗಾವಿ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೇವಾ ಸಂಕಲ್ಪ ಅಭಿಯಾನ: ಸುಭಾಷ ಪಾಟೀಲ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೇವಾ ಸಂಕಲ್ಪ ಅಭಿಯಾನ: ಸುಭಾಷ ಪಾಟೀಲ

            ಬೆಳಗಾವಿ 02: ನಗರದ ಧರ್ಮನಾಥ ಭವನದ ಹತ್ತಿರವಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಸೇವಾ ಸಂಕಲ್ಪ ಅಭಿಯಾನ ಕುರಿತು ಮಾಹಿತಿ ನೀಡಿ ಮಾತನಾಡಿ ಜನಸೇವೆ ಮತ್ತು ಸುಶಾಸನದಲ್ಲಿ ಸಾರ್ಥಕ, ಪರಿವರ್ತನಾತ್ಮಕ 25 ವರ್ಷಗಳ ಸುದೀರ್ಘ, ನಿಷ್ಕಳಂಕ, ಸಮರ​‍್ಿತ ಹಾಗೂ ಸಾರ್ಥಕ ಕಾಯಕ ಪೂರ್ಣಗೊಳಿಸುತ್ತಿರುವ  ಪ್ರಧಾನಮಂತ್ರಿ ಪ್ರಧಾನಿ ನರೇಂದ್ರ ಮೋದೀಜೀ ರವರ ಜನ್ಮದಿನದ ಪ್ರಯುಕ್ತ ಬಿಜೆಪಿ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ತಾಲೂಕುಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಮಂಡಲ ಅಧ್ಯಕ್ಷರುಗಳಿಗೆ ಸೂಚಿಸಿ ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

          ಈ ಸಂದರ್ಭದಲ್ಲಿ ಮಾಜಿ ಶಾಸಕರಾದ  ಮಹಾಂತೇಶ ದೊಡಗೌಡರ ಮಾತನಾಡಿ ಆರೋಪ ರಹಿತವಾಗಿ ಕಳೆದ 25 ವರ್ಷಗಳಿಂದ ಮುಖ್ಯ ಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಭಾರತ ದೇಶವನ್ನು ಜಗತ್ತಿನಲ್ಲಿ ಮೊನ್ನೆಲೆಗೆ ತಂಡ ಕೀರ್ತಿ ಪ್ರಧಾನಿ ಮೋದೀಜೀ ಹುಟ್ಟುಹಬ್ಬದ ಪ್ರಯುಕ್ತ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.     ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕರಾದ, ಸಂದೀಪ ದೇಶಪಾಂಡೆ, ಸಂತೋಷ ಹಡಪದ,  ಮಹಾಂತೇಶ ಚಿನ್ನಪ್ಪಗೌಡರ,  ಯಲ್ಲೇಶ ಕೋಲಕಾರ, ಜಗದೀಶ್ ಬೂದಿಹಾಳ, ಮಹೇಶ ಮೋಹಿತೆ, ಮುರುಘೇಂದ್ರಗೌಡ ಪಾಟೀಲ, ಪ್ರಮೋದ ನುಗ್ಗಾನಟ್ಟಿ ಸೇರಿದಂತೆ ಮಂಡಲ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ