'ಹಿಂಸೆ ನೀಡದೆ ಅಹಿಂಸೆಯಿಂದ ಬದುಕಿ ದೇವರ ಕೃಪೆಗೆ ಪಾತ್ರರಾಗಬೇಕು'
ಲೋಕದರ್ಶನ ವರದಿ
ಶಿಗ್ಗಾವಿ 24: ಸತ್ಯ, ಧರ್ಮ, ನ್ಯಾಯದ ಪರವಾಗಿದ್ದವರು ಎಲ್ಲೆ ಇದ್ದರೂ ಅವರನ್ನು ಪರಮಾತ್ಮ ಕಾಯುತ್ತಾನೆ. ಯಾವುದೇ ಕೆಲಸದಲ್ಲಾಗಲಿ ಪ್ರಾಮಾಣಿಕವಾಗಿರುವುದನ್ನು ರೂಢಿಸಿಕೊಳ್ಳಿ, ಯಾರುಯಾರಿಗೂ ಹಿಂಸೆ ನೀಡದೆ ಅಹಿಂಸೆಯಿಂದ ಬದುಕಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹಿರೇಮಣಕಟ್ಟಿ ಮಠದ ವಿಶ್ವಾರಾದ್ಯ ಶಿವಾಚಾರ್ಯರು ಆಶೀರ್ವಚನ ನುಡಿದರು.
ತಾಲೂಕಿನಕುನ್ನೂರಿನ ಹಿರೇಮಠ ಬಂಧುಗಳಿಂದ ಪ್ರತಿವರ್ಷ ಪ್ರತಿಷ್ಟಾಪಿಸಲ್ಪಡುವ 12ನೇ ವರ್ಷದ ಗಣಪತಿ ವಿಸರ್ಜನೆಯ ಕಾರ್ಯಕ್ರಮದ ಅಂಗವಾಗಿ ವೇ.ಮೂ ಸೋಮಯ್ಯ ಹಿರೇಮಠರವರ ಅಧ್ಯಕ್ಷತೆಯಲ್ಲಿ ನಡೆದಧರ್ಮ ಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ನಾವೆಲ್ಲ ಸೇವಿಸುವಂತಹ ಆಹಾರ ಪದ್ಧತಿಕ್ರಮ ಬದಲಾಗಿದೆ, ಯಂತ್ರೋಪಕಾರಣಗಳ ಯುಗ ಆರಂಭವಾಗಿದ್ದು ಯುವಕರಲ್ಲಿ ಸಣ್ಣ ವಯಸ್ಸಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಉತ್ತಮ ಆರೋಗ್ಯಕ್ಕಿಂತ ದೊಡ್ಡ ಸಂಪತ್ತಿಲ್ಲ, ದೇಸಿ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು, ಗೋವುಗಳನ್ನ ರಕ್ಷಣೆ ಮಾಡಿ ಅವಗಳ ಹಾಲು ಹೈನು ಉಂಡು ಆರೋಗ್ಯವಂತರಾಗಿರಿ ಎಂದರು.
ಗ್ರಾ.ಪಂ.ಅಧ್ಯಕ್ಷ ಮಹೇಶ ಚಿಕ್ಕವೀರಮಠ, ಗಣ್ಯರಾದ ಲಾವನಗೌಡ್ರ ಪಾಟೀಲ, ನೀರಲಗಿಯ ಎಂ.ಎಸ್. ಪಾಟೀಲ, ಸೇರಿದಂತೆ ಹಲವರು ಮಾತನಾಡಿದರು.
ಮಡ್ಲಿ ಗ್ರಾ.ಪಂ ಸದಸ್ಯ ಬಸನಗೌಡ್ರ. ಪಾಟೀಲ, ಸುರೇಶ ಬೆಂಡಿಗೇರಿ, ಶಿದ್ದಲಿಂಗಯ್ಯ ಹಿರೇಮಠ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗಂಗಪ್ಪ ಹುಲ್ಲೂರ, ಶಿವರುದ್ರಯ್ಯ ಹಿರೇಮಠ, ಮಹಾದೇವಪ್ಪ ಮಾಳೋಜನವರ, ಎಂ.ಎಸ್.ಹಿರೇಮಠ,ಗ್ರಾ.ಪಂ.ಮಾಜಿಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಸದಸ್ಯ ಡಿ.ಬಿ.ಬೋಮ್ಮನಹಳ್ಳಿ, ಮಾಜಿ ಸದಸ್ಯರಾದ ವರ್ಧಮಾನ ಶೆಟ್ಟೆಪ್ಪನವರ, ರುದ್ರಪ್ಪ ಕಾಳಿ, ಶಿವಪುತ್ರಯ್ಯ ಪೂಜಾರ, ಶಿವರುದ್ರಪ್ಪ ಅಕ್ಕಿ, ರಮೇಶ ಪತ್ತಾರ, ಸೋಮಣ್ಣಾ ಮುದಕಪ್ಪನವರ, ಚಮ್ಮನಸಾಬ ಮತ್ತೇಖಾನ, ಯಮನಪ್ಪ ನವಲೂರ, ಮಹಾದೇವ ಬಸರಿಕಟ್ಟಿ ಉಪಸ್ಥಿತರಿದ್ದರು.
ಬಸವರಾಜ ಶಿಗ್ಗಾವಿಅವರ ಕಲಾ ಬಳಗದಿಂದ ಜಾನಪದ ಗೀತೆಗಳನ್ನು ಹಾಡಿದರು, ಕಾರ್ಯಕ್ರಮ ನಿರ್ವಹಣೆಯನ್ನು ಜಾನಪದ ವಿವಿ ಸಹ ಪ್ರಾದ್ಯಾಪಕ ಶರೀಫ ಮಾಕಪ್ಪನವರ ಮಾಡಿದರೆ ಪ್ರಾಸ್ತಾವಿಕವಾಗಿ ಪತ್ರಕರ್ತ ಬಿ.ಎಸ್.ಹಿರೇಮಠ ನೇರವೆರಿಸಿದರು.