‘ಮಾನವನ ದೀರ್ಘಾಯುಷ್ಯ ಬದುಕಿಗೆ ನಿಸರ್ಗ ಯೋಗ ಚಿಕಿತ್ಸೆ ಅಗತ್ಯ’
ರಾಣೆಬೆನ್ನೂರು 03: ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ, ಯೋಗದಿಂದಲೇ ತಮ್ಮ ನಿತ್ಯದ ಜೀವನ ಬದುಕು ಸಾರ್ಥಕ ಮಾಡಿಕೊಳ್ಳುತ್ತಾ ಬಂದವರಾಗಿದ್ದಾರೆ . ದೀರ್ಘಾಯುಷ್ಯ ಜೀವನ ಬದುಕಿಗೆ ನಿಸರ್ಗ ಯೋಗ ಚಿಕಿತ್ಸೆ ಇಂದಿನ ಅಗತ್ಯವಿದೆ ಎಂದು ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ. ಕೆ. ಮಾಲತಿಜಿ ಹೇಳಿದರು. ಅವರು ಗುರುವಾರ ಇಲ್ಲಿನ ಲಯನ್ಸ್ ಶಾಲಾ ಭವನದಲ್ಲಿ ಬಸವ ಪತಂಜಲಿ ಯೋಗ ಸಮಿತಿ, ಲಯನ್ಸ್, ರೋಟರಿ, ಇನ್ನರ್ ವ್ಹಿಲ್, ಜೆಸಿಐ, ಕಾ ಕಿ ಜನಸೇವಾ ಸಂಸ್ಥೆ, ಸ್ವಾಕರವೇ,ಜಿಲ್ಲಾ ಪತಂಜಲಿ ಯೋಗ ಸಮಿತಿ, ಗಾಯತ್ರಿ ಕೋಮಲಾಚಾರ್ ಯೋಗ ಕೇಂದ್ರ ಆಯೋಜಿಸಿದ್ದ 15 ದಿವಸಗಳ ಕಾಲದ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಧ್ಯಾನ ಪ್ರಾಣಾಯಾಮ ಬಹು ಅಗತ್ಯ, ಯಾಂತ್ರಿಕ ಬದುಕು, ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತಲಿದೆ.
ಇಂತಹ ಸಂದರ್ಭದಲ್ಲಿ ಇತಿಹಾಸದ ಋಷಿಮುನಿಗಳು ಹಾಕಿ ಕೊಟ್ಟಿರುವ ಪರಂಪರಾಗತ ಯೋಗವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಯೋಗ ಸಾಧಕ ಶ್ರೀ ವೀರೇಶ ಗುರೂಜಿ ಅವರು, ಸ್ವಾಸ್ಥ ಸಮಾಜ ನಿರ್ಮಾಣದ ಹೊಣೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ. ಆರೋಗ್ಯವಿದ್ದರೆ ಎಲ್ಲವೂ ಸರಿ. ಆರೋಗ್ಯ ಕೆಟ್ಟರೆ ಎಷ್ಟೇ ಗಳಿಸಿದರು ಎಲ್ಲವೂ ವ್ಯರ್ಥ. ಸ್ವಾಸ್ಥ ಸಮಾಜ ನಿರ್ಮಿಸುವ ಗುರಿಯನ್ನು ಹೊಂದಿರುವ ತಮ್ಮ ಸಂಸ್ಥೆ ನಾಡಿನಾ ಧ್ಯಾ0ತ, ಸಂಚರಿಸಿ, ಎಲ್ಲ ಸಂಘಟನೆಗಳ ಸಹಯೋಗದಲ್ಲಿ ನಿಸರ್ಗ ಚಿಕಿತಾ ಶಿಬಿರಗಳನ್ನು ಆಯೋಜಿಸುತ್ತಿರುವದಾಗಿ ಹೇಳಿದರು. ಎಂಜಿಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಡಾ ಎಂ.ಎಂ.ಅನಂತರೆಡ್ಡಿ, ಇನ್ನರ್ ವ್ಹಿಲ್ ಅಧ್ಯಕ್ಷ ಸುಜಾತಾ ಮೀಣಜಿಗಿ,ಕಾಮಧೇನು ಗೋಶಾಲಾ ಅಧ್ಯಕ್ಷ ಡಾ: ಸಂಜಯ್ ನಾಯಕ್, ಲಯನ್ಸ್ ಅಧ್ಯಕ್ಷ ಮಹೇಶ್ಅಡಿವೆಪ್ಪನವರ್,ಜೆಸಿಐ ಅಧ್ಯಕ್ಷ ವೆಂಕಟೇಶ ಕಾಕಿ, ಕಾಕಿ ಜನ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಪತಂಜಲಿ ಅಧ್ಯಕ್ಷ ರವೀಂದ್ರ ಬಿಜಾಪುರ್, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮೆ,ಯೋಗ ಕೇಂದ್ರದ ಅಧ್ಯಕ್ಷ ಕೆ.ಸಿ. ಕೋಮಲಾಚಾರ್, ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಇಂದಿನಿಂದ ಆರಂಭಗೊಂಡಿರುವ ನಿಸರ್ಗ ಯೋಗ ಚಿಕಿತ್ಸಾ ಶಿಬಿರವು, 15 ದಿವಸಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಶಿಬಿರಾ ರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಶಶಿಕಲಾ ಬಡಿಗೇರ್ ಪ್ರಾರ್ಥಿಸಿದರು. ಶಿವಾನಂದ ಸಂಗಾಪುರ ಸ್ವಾಗತಿಸಿದರು. ಪ್ರಭುಲಿಂಗಪ್ಪ ಹಲಗೇರಿ ಪರಿಚಯಿಸಿದರು. ಆರ್ ವಿ.ಸುರಗೊಂಡ ನಿರೂಪಿಸಿ, ವಂದಿಸಿದರು.