ಚಿಕ್ಕೋಡಿ

‘194ಟಿ ಹಿಂಪಡೆದರೇ ಸಹಕಾರ ಸಂಘಗಳ ಇನ್ನಷ್ಟು ಪ್ರಗತಿ ಸಾಧ್ಯ’

‘194ಟಿ ಹಿಂಪಡೆದರೇ ಸಹಕಾರ ಸಂಘಗಳ ಇನ್ನಷ್ಟು ಪ್ರಗತಿ ಸಾಧ್ಯ’

ಮಾಂಜರಿ 20: ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಹಾಗೂ ಅವರ ಆರ್ಥಿಕತೆ ಸಬಲತೆಗಾಗಿ ಸಹಕಾರಿ ಸಂಘದಲ್ಲಿ ಸ್ಥಾಪಿಸಿರುವ ಸಂಸ್ಥೆಗಳಿಗೆ ಸಹಕಾರಿ ಕಾಯ್ದೆಯಲ್ಲಿಯ ಕಾಯ್ದೆ 194ಎನ್ ಅನ್ನು ಹಿಂಪಡೆದರೇ ಸಹಕಾರ ಸಂಘಗಳು ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಂಕಲಿಯ ಡಾ. ಪ್ರಭಾಕರ ಕೋರೆ ಕೋ ಅಪ್ ಕ್ರೆಡಿಟ್ ಸೊಸೈಟಿಯ  ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಅಭಿಪ್ರಾಯ ಪಟ್ಟಿದ್ದಾರೆ. 

ಅವರು ಇಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರಿಯ 29 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ಪ್ರತಿಯೊಂದು ಸಂಘ-ಸಂಸ್ಥೆಗಳು ನಿರ್ಧಿಷ್ಟ ವ್ಯಕ್ತಿಯ ಬ್ರಾಂಡ್ ಮೇಲೆ ಅಭಿವೃದ್ಧಿ ಹೊಂದುತ್ತವೆ. ಆದರೇ ಜೈ ಹನುಮಾನ ಸಹಕಾರಿಯು ಸದಸ್ಯರ ಆತ್ಮವಿಸ್ವಾಸದ ಬ್ರಾಂಡಿನೊಂದಿಗೆ ಪ್ರಗತಿ ಹೊಂದುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಎಂದರು.  

ಮೊದಲಿಗೆ ಹನುಮಾನ ದೇವರ ಭಾವಚಿತ್ರದ ಪೂಜೆಯೊಂದಿಗೆ ಗಣ್ಯರು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಣ್ಯರ ಸತ್ಕಾರ ಮತ್ತು ಸ್ವಾಗತ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಗ್ರಾಮದ 4 ಜನ ಯುವಕರು ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದು, ಅವರನ್ನೂ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.  

ಇಂಗಳಿ ಗ್ರಾಮದಲ್ಲಿಯೇ ​‍್ರ​‍್ರಥಮ ಬಾರಿಗೆ ಎಂಬಿಬಿಎಸ್ ಎಂಡಿ ಆದ ಇನ್ನೋರ್ವ ಸತ್ಕಾರ ಮೂರ್ತಿ ಡಾ. ಸೋಮೇಶ ಚೌಗುಲೆ ಮಾತನಾಡುತ್ತ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತ ಅವರನ್ನು ಹೆಚ್ಚೆಚ್ಚು ಓದಿಸಬೇಕು. ಮತ್ತು ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಬಗ್ಗೆ ಏನಾದರೂ ಪ್ರಶ್ನೆಗಳು ಇದ್ದಲ್ಲಿ ಅವರಿಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತೇನೆ ಎಂದರು.  

ಇನ್ನೋರ್ವ ಅತಿಥಿ ಡಾ. ಸುಧೀರ ಭೋಲೆ ಮಾತನಾಡಿ, ಸಹಕಾರಿಯ ಪ್ರಗತಿಗೆ ಶುಭ ಕೋರಿದರು. ಸಂಘದ ಅಧ್ಯಕ್ಷ ಶ್ರೀಪತಿ ಜಾಧವ ಮಾತನಾಡಿ, ಈ ವರ್ಷ ಭಯಂಕರ ಬರಗಾಲ ಪರಿಸ್ಥಿತಿ ಎದುರಾಗಿದ್ದು, ನಮ್ಮ ಸಂಘದ ಸದಸ್ಯರಿಗೆ ಶೇ. 30 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.  

ಸಂಘದ ಮುಖ್ಯ ವ್ಯವಸ್ಥಾಪಕ ಜಿ.ಬಿ. ಪಾಟೀಲ ಅವಹಾಲು ಓದುತ್ತ, ಸಂಘ ಒಟ್ಟು 59 ಲಕ್ಷ 17 ಸಾವಿರ ನಿವ್ಹಳ ಲಾಭ ಗಳಿಸಿದೆ ಎಂದರು. ಸಂಚಾಲಕ ಶಂಕರ ಪವಾರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಪ್ಪಾಸಾಬ ಜತ್ರಾಟೆ, ಸಂಚಾಲಕರಾದ ಶಂಕರ ಪವಾರ, ಮೋಹನ ಬಾಮನೆ, ಅರುಣ ಪಾಟೋಳೆ, ಸುಕಮಾರ ಶಿಂಧೆ, ಬಾಳಾಸಾಬ ಅವಟಿ, ಕಲ್ಲಪ್ಪಾ ಕಾಂಬಳೆ, ಸತೀಶ ಬನೆ, ಪುಷ್ಪಾ ಚೌಗುಲೆ, ಮಾಲುತಾಯಿ ಧಾಬಡೆ, ಶಿರಗುಪ್ಪಿ ಶಾಖೆಯ ಅಧ್ಯಕ್ಷ ಪ್ರಕಾಶ ಜಾಧವ, ಉಪಾಧ್ಯಕ್ಷ ದಾದಗೌಡಾ ಪಾಟೀಲ, ಹೊಸ ಇಂಗಳಿ ಶಾಖೆಯ ಅಧ್ಯಕ್ಷ ರಾಜಾರಾಮ ಮಾನೆ, ಉಪಾಧ್ಯಕ್ಷ  ಗುಂಡು ಜತ್ರಾಟೆ, ಅಥಣಿ ಶಾಖೆಯ ಅಧ್ಯಕ್ಷ ವಿಷ್ಠು ಚವ್ಹಾನ, ಉಪಾಧ್ಯಕ್ಷ ಸಿದ್ಧಾರ್ಥ ಅವಳೆಕರ ಸೇರಿದಂತೆ ಎಲ್ಲ ಶಾಖೆಗಳ ಸಂಚಾಲಕರು, ಸಿಬ್ಬಂದಿ ವರ್ಗದವರು, ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  

ಕಲ್ಲಪ್ಪಾ ಕಾಂಬಳೆ ಸ್ವಾಗತಿಸಿದರು. ಮೋಹನ ಬಾಮನೆ ವಂದಿಸಿದರು. 


ಸುದ್ದಿ ಓದಿ