ಚಿಕ್ಕೋಡಿ

‘ಶಿಕ್ಷಕರು ಮೌಲ್ಯವರ್ಧಿತ ಶೈಕ್ಷಣಿಕ ಕೌಶಲ್ಯಗಳನ್ನುವಿದ್ಯಾರ್ಥಿಗಳಿಗೆ ಕಲಿಸಲಿ’

‘ಶಿಕ್ಷಕರು ಮೌಲ್ಯವರ್ಧಿತ ಶೈಕ್ಷಣಿಕ ಕೌಶಲ್ಯಗಳನ್ನುವಿದ್ಯಾರ್ಥಿಗಳಿಗೆ ಕಲಿಸಲಿ’

ಚಿಕ್ಕೋಡಿ 19: ಸಾಮಾಜಿಕ ಮಾಧ್ಯಮಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ಸತ್ಯದ ಅನ್ವೇಷಣೆಗಾಗಿ ಸ್ವತಂತ್ರ ಚಿಂತನೆಗೆ ಹೆಚ್ಚು ಮಹತ್ವ ಕೊಡಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಬೆಳಗಾವಿ ಉಪನ್ಯಾಸಕ ಎನ್‌.ಆರ್‌.ಪಾಟೀಲ ಹೇಳಿದರು. 

ಇಲ್ಲಿನ ಚೌಸನ್ ಶಿಕ್ಷಣ ಮಾಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ನಿಂದ ಪ್ರಾಬಲ್ಯ ಹೊಂದಿರುವ ಈ ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರ ಪಾತ್ರ ಬಗ್ಗೆ  ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.  

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳು ಮತ್ತು ಇಂಟರ್ನೆಟ್ ಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡಗಳಿಗೆ ಸಿಲುಕದಂತೆ ಶಿಕ್ಷಕರಾದವರು ಮೌಲ್ಯವರ್ಧಿತ ಶೈಕ್ಷಣಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಸಾಮಾಜಿಕ ಮಾಧ್ಯಮಗಳು ಹಾಗೂ ಇಂಟರ್ನೆಟ್ ಗಳಲ್ಲಿ ಬರುವ ಸುಳ್ಳು ಸುದ್ದಿಯ ಬಗ್ಗೆ ಜಾಗೃತಿ ವಹಿಸಲು ಮಕ್ಕಳಿಗೆ ತಿಳಿಸಬೇಕೆಂದರು. ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನದ ಸೃಜನಾತ್ಮಕ ಬಳಕೆ ಬಗ್ಗೆ ತಿಳಿಸಿಕೊಡಬೇಕು ಅಂತರ್ಜಾಲದ ಸರಿಯಾದ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಇತ್ತೀಚಿಗೆ ಅಂತರ್ಜಾಲದ ಅತಿಯಾದ ಬಳಕೆಯಿಂದ ಮಾನವೀಯ ಸಂಬಂಧಗಳು ಹಾಳಾಗುತ್ತಿವೆ ಈ ಬಗ್ಗೆ ಶಿಕ್ಷಕರು ಗಮನ ನೀಡಬೇಕು ಎಂದರು. 

ಇನ್ನೋರ್ವ ಅತಿಥಿ ಉಪನ್ಯಾಸಕ ಸಿ.ಆರ್‌.ಜೋಶಿ ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು ಕೆಲವು ಅದನ್ನು ಮನರಂಜನೆಗಾಗಿ ಉಪಯೋಗಿಸಿದರೆ ಇನ್ನು ಕೆಲವರು ಜ್ಞಾನವನ್ನು ಪಡೆಯಲಿಕ್ಕೆ ಉಪಯೋಗಿಸುತ್ತಾರೆ. ಉತ್ತಮ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಮಾಜಿಕ ಮಾಧ್ಯಮಗಳು ಸಹಕಾರಿಯಾಗಿವೆ ಎಂದರು. ಇವುಗಳ ಸರಿಯಾದ ಬಳಕೆಯಿಂದ ಭಾಷಾ ಸುಧಾರಣೆ ಸಂಸ್ಕೃತಿಕ ತಿಳುವಳಿಕೆ ಹೊಂದಲು ಸಹಾಯಕರವಾಗಿದೆ ತಂತ್ರಜ್ಞಾನವಿಲ್ಲದೆ ನಾವು ನಮ್ಮ ಜೀವನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸರಿಯಾದ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು. 

ಉಪನ್ಯಾಸಕ ಡಾ. ಕನಕಾಚಲ ಕನಕಗಿರಿ ಕಾರ್ಯಗಾರದ ಮುಖ್ಯ ಉದ್ದೇಶಗಳು ಅದರ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು  

ಪ್ರಾಧ್ಯಾಪಕರಾದ ಡಾ. ಎನ್‌.ಎಸ್ ಸಿಂಧೆ ಸ್ವಾಗತ ಹಾಗೂ ಅತಿಥಿಗಳ ಪರಿಚಯಿಸಿದರು. 

ಪ್ರಶಿಕ್ಷಣಾರ್ಥಿರಾಧಿಕಾ ಜಾಧವ್ ಪ್ರಾರ್ಥನ ಗೀತೆ ಹಾಡಿದರು. ಶಿಲ್ಪಾ ಪಾಟೀಲ್ ಮತ್ತು ಐಶ್ವರ್ಯ ನಾವಿ ನಿರೂಪಿಸಿದರು. 


ಸುದ್ದಿ ಓದಿ