ಸೆ.12ರಂದು ಪಾಲಬಾವಿಯಲ್ಲಿ ಜ್ಞಾನಯಜ್ಞ ಸಪ್ತಾಹ
ಪಾಲಬಾವಿ 09: ಗ್ರಾಮದ ಗಿರಿಮಲ್ಲೇಶ್ವರ ಜ್ಞಾನಯೋಗಾಶ್ರಮದಲ್ಲಿ ಸೆ.12ರಂದು ಬೆಳಗ್ಗೆ 9 ಗಂಟೆಗೆ ಜ್ಞಾನಯಜ್ಞ ಸಪ್ತಾಹ ಹಾಗೂ ‘ವಿಮಲಬ್ರಹ್ಮ ನಿರೂಪಣೆ’ ದಾಸಬೋಧ ಗ್ರಂಥ ಪಾರಾಯಣದ ಮಹಾಮಂಗಲೋತ್ಸವ ನಡೆಯಲಿದೆ. ಸುಕ್ಷೇತ್ರ ಇಂಚಿಗೇರಿಯ ಸಂಪ್ರದಾಯದ ಸದ್ಗುರು ಪ್ರದೀಪಕುಮಾರ ಘಂಟಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಕಳೆದ ಆ.13ರಿಂದ ಸಮರ್ಥ ಸದ್ಗುರು ರಾಮದಾಸರು ರಚಿಸಿರುವ ‘ದಾಸಬೋಧ’ ಗ್ರಂಥದ ಪಾರಾಯಣ, ಶ್ರವಣ ಹಾಗೂ ಮನನ ಕಾರ್ಯಕ್ರಮ ನಡೆಯುತ್ತಿದ್ದು, ಸೆ.12ರಂದು ಸಂಪನ್ನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾಮಂಗಲದ ಬಳಿಕ ಅನ್ನಸಂತರೆ್ಣ ನಡೆಯಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ತೇಗೂರ ಹಾಗೂ ಗ್ರಾಪಂ ಮಾಜಿ ಸದಸ್ಯ ಶ್ರೀಶೈಲ ಗೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.