ರಾಣೆಬೆನ್ನೂರ

‘ಹನುಮಾಪುರ ವೀರಯೋಧನ ಭವ್ಯ ಸ್ವಾಗತ : ದೇಶಾಭಿಮಾನದ ಕಿಚ್ಚು ಹೆಚ್ಚಾಗಿದೆ’

‘ಹನುಮಾಪುರ ವೀರಯೋಧನ ಭವ್ಯ ಸ್ವಾಗತ : ದೇಶಾಭಿಮಾನದ ಕಿಚ್ಚು ಹೆಚ್ಚಾಗಿದೆ’

ರಾಣೆಬೆನ್ನೂರು 13:  ಪ್ರಸ್ತುತ ಯುವಕರಲ್ಲಿ ಟದೇಶಾಭಿಮಾನದ ಕಿಚ್ಚು ಹೆಚ್ಚಾಗಿದ್ದರೂ ಸಹ, ಅಗ್ನಿಪಥ್ ಯೋಜನೆಯಿಂದ ಭಾರತಾಂಬೆಯ ಸೇವೆ ಮಾಡಲು ಅವಕಾಶವಿಲ್ಲದಂತಾಗಿದ್ದು ಯುವಕರ ಪಾಲಿಗೆ ದುರ್ದೈವದ ಸಂಗತಿಯಾಗಿದೆ ಎಂದು ರಾಜ ರೈತ ಸಂಘದ ಯುವ ಮುಖಂಡ ರವೀಂದ್ರ ಗೌಡ ಪಾಟೀಲ್ ವಿಷಾದಿಸಿದ್ದಾರೆ. ಅವರು ಇತ್ತೀಚಿಗೆ ನಗರಕ್ಕಾಗಮಿಸಿದ ಹನುಮಾಪುರ ಗ್ರಾಮದ ವೀರಯೋಧ ಮಂಜುನಾಥ ನಿಂಗಪ್ಪ ಇಟಿಗಿ ಅವರ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶಾಭಿಮಾನ, ದೇಶಭಕ್ತಿ ಭಾರತೀಯರಲ್ಲಿ ಹೆಚ್ಚಾಗುತ್ತಿದೆ. ಭಾರತೀಯ ಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳುತ್ತಿರುವ ವೀರ ಯೋಧರಿಗೆ ಅಗ್ನಿಪತ್ ನಲ್ಲಿ ಅವಕಾಶ ಸಿಗದಂತಾಗಿದೆ. ಇತ್ತೀಚಿಗೆ ಜಾರಿಗೆ ತಂದ ಅಗ್ನಿಪತ್ ಯೋಜನೆಯಿಂದ ಭಾರತಾಂಬೆಯ ಸುಧೀರ್ಘ ಸೇವೆ ಮಾಡಬೇಕೆಂಬ ಅಭಿಮಾನ ಆಸೆ ಇಟ್ಟುಕೊಂಡಿರುವ ಭಾರತಾಂಬೆಯ ಮಡಿಲ ಮಕ್ಕಳಿಗೆ ಆ ಅವಕಾಶ ಕೈ ತಪ್ಪಿರುವುದು ದೇಶಾಭಿಮಾನವುಳ್ಳ, ಯುವಕರ ಪಾಲಿಗೆ ದುರ್ದೈವದ  ಸಂಗತಿ ಎಂದು ಪಾಟೀಲ್ ವಿಷಾದಿಸಿದರು.  

ದೇಶ ಸೇವೆ ಮಾಡಿ ಬಂದೆ ಮಂಜುನಾಥ್ ಅವರು, ಇನ್ನು ಮುಂದೆ ಈ ದೇಶಕ್ಕೆ ಅನ್ನ ನೀಡುವ ರೈತನ ಬದುಕು ಹಸನಾಗಲು ರೈತ ಪರ ಸೇವೆ ಮಾಡಲು ಸನ್ನದ್ಧ ರಾಗಬೇಕಾಗಿದೆ ಎಂದ ಅವರು, ಸಮಾದಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಹೆಮ್ಮೆಯ ಪುತ್ರರಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು. ಪಿಕೆಕೆ ಇನಿಶಿಯೇಟಿವ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಮಾತನಾಡಿ ಭಾರತೀಯ ಯೋಧರರು ದೇಶ ಕಾಯುತ್ತಿರುವುದರಿಂದ ನಾವಿಲ್ಲಿ ಯಾವುದೇ ಚಿಂತೆ ಇಲ್ಲದೆ ನಿದ್ದೆ ಮಾಡಿದ್ದೇವೆ ಅಲ್ಲದೆ ನೆಮ್ಮದಿಯಾಗಿ ಜೀವನ ಸಾಗಿಸಿದ್ದೇವೆ. ಇನ್ನು ಮುಂದೆ ದೇಶದ ಸೈನಿಕರ  ಸೇವೆಗೆ ಸಂಘ, ಸಂಸ್ಥೆಗಳು ನಾಗರಿಕರು ಅವರ ಬದುಕಿನ ನೆಮ್ಮದಿಗೆ ನಾವು ಕಾರ್ಯ ಪ್ರವತ್ತರಾಗಬೇಕಾಗಿದೆ ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ವೀರಯೋಧ ಮಂಜುನಾಥ ಇಟಗಿ ಅವರನ್ನು ಆಟೋ ಚಾಲಕ ಮಾಲಕರು, ರೈತಪರ ಸಂಘಟನೆಗಳು ವಿವಿಧ ಸಂಘ ಸಂಸ್ಥೆಗಳು, ನಗರದ ರೈಲ್ವೆ ಸ್ಟೇಷನ್ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸ್ವಗ್ರಾಮ ಹನುಮಾಪುರಕ್ಕೆ ಬೀಳ್ಕೊಟ್ಟರು.  

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಚಂದ್ರ​‍್ಪ ಬೇಡರ, ಗುರಣ್ಣ ಕಂಬಳಿ, ಕುಮಾರ್ ಪುರಾಣಿಕ ಮಠ, ಮಹಾಂತೇಶ್ ಮೆಡ್ಲೇರಿ, ರಮೇಶ್ ಗೋಣಗೇರಿ, ಕರಬಸಪ್ಪ ಕೂಲೆರ್, ಚಿತ್ರ​‍್ಪ  ಕೊರ​‍್ಪನವರ್, ಮಾಲತೇಶ ಕೊರಚರ, ಮಲ್ಲಪ್ಪ ಕರಿವಾಳದವರ, ಚಂದ್ರ​‍್ಪ ವೈಟಿ ಹೊನ್ನತ್ತಿ, ಚಂದ್ರು ಓಲೆಕಾರ್, ರಾಜು ಮಾದಮ್ಮನವರ್ ಸೇರಿದಂತೆ ನೂರಾರು ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು 


ಸುದ್ದಿ ಓದಿ