ಬೆಳಗಾವಿ

ಆ.20ರಂದು ನೇಸರಗಿ ಗ್ರಾಮಕ್ಕೆ ಡಾ. ಅಲ್ಲಮಪ್ರಭು ಶ್ರೀಗಳಿಂದ ಬಸವ ನಡಿಗೆ

ಆ.20ರಂದು ನೇಸರಗಿ ಗ್ರಾಮಕ್ಕೆ ಡಾ. ಅಲ್ಲಮಪ್ರಭು ಶ್ರೀಗಳಿಂದ ಬಸವ ನಡಿಗೆ


ನೇಸರಗಿ 17 : ಪವಿತ್ರ ಶ್ರಾವಣ ಮಾಸದ ಅಂಗವಾಗಿ ಬೆಳಗಾವಿ-ನಾಗನೂರು   ರುದ್ರಾಕ್ಷಿಮಠದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆಗಸ್ಟ್‌ 20ರಂದು ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ  ‘ಪೂಜ್ಯರೊಂದಿಗೆ ಬಸವ ನಡಿಗೆ’  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ನೇಸರಗಿಯ   ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಮೂರ್ತಿಗೆ ಮಾಲಾರೆ​‍್ಣ ಮಾಡುವ ಮೂಲಕ ಬಸವ ನಡಿಗೆಗೆ ಚಾಲನೆ ನೀಡಲಾಗುವುದು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆಗಳೊಂದಿಗೆ ಬಸವ ನಡಿಗೆ ನಡೆಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ಆಗಮಿಸಲಾಗುವುದು. ನಂತರ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ನೇಸರಗಿ-ಮಲ್ಲಾಪುರ ಕೆ.ಎನ್‌. ಗಾಳೇಶ್ವರ ಮಠದ   ಚಿದಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸೇರಿದಂತೆ ಬಸವಣ್ಣನ ಅಭಿಮಾನಿಗಳು, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಶರಣರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು   ಬಸವ ಅಭಿಮಾನಿಗಳು ತಿಳಿಸಿದ್ದಾರೆ. 


ಸುದ್ದಿ ಓದಿ