ದುಂಡಶಿಯಲ್ಲಿ ಎ.ಸಿ.ಯವರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ ಗ್ರಾಮಸ್ಥರು
ಲೋಕದರ್ಶನ ವರದಿ
ಶಿಗ್ಗಾವಿ : ತಾಲೂಕಿನ ದುಂಡಶಿ ಹೊಬಳೀಯಲ್ಲಿ ರೈತರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಗುವ ತೊಂದರೆಗಳ ಬಗ್ಗೆ ಸವಣೂರ ಉಪ ವಿಬಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ನೀಡಿದರು.
ತಾಲೂಕಿನ ದುಂಡಶಿ ಹೊಬಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜರುಗಿದ ಸಮಯದಲ್ಲಿ ಎ.ಸಿ.ಯವರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ದುಂಡಶಿ ರೈತ ಸಂಪರ್ಕ ಕೇಂದ್ರ ಹೆಸರಿಗೆ ಸೀಮಿತವಾಗಿದೆ ಆದರೆ ಇದುವರೆಗೂ ಯಾವುದೇ ಸೌಲಭ್ಯಗಳು ದೊರೆತಿಲ್ಲ ದೊರೆತರು ಬೆರಳಣಿಕೆಯ ರೈತರಿಗೆ ಅಂದರೆ ಅವರಿಗೆ ಬೇಕಾದ ರೈತರಿಗೆ ದೊರಕಿದೆ ಹೆಚ್ಚಿನ ಮಾಹಿತಿ ಕೇಳಲು ಹೋದರೆ ಅಧಿಕಾರಿಗಳು ಅಸಮಂಜಸ ಉತ್ತರ ನೀಡುತ್ತಾರೆ. ತೋಟಗಾರಿಕೆ ಇಲಾಖೆಯ ಘಟಕ ಸ್ಥಾಪಿಸಬೇಕು, ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿದೆ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಬೇಕು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದಾಗ ಅದಕ್ಕೆ ಸರಿಯಾದ ಕ್ರಮವಾಗಲಿ ಅಥವಾ ಪರಿಹಾರವಾಗಲಿ ನೀಡಿಲ್ಲ, ವಿದ್ಯುತ್ತ ಸರಬರಾಜು ಕೇಂದ್ರ ಪಕ್ಕದ ತಾಲೂಕಿನಲ್ಲಿ 3 ಪಿಎಸ್ 24 ಗಂಟೆಗಳ ಕಾಲ ಇದ್ದರೆ ನಮ್ಮಲ್ಲಿ ದಿನಕ್ಕೆ 7 ತಾಸು ಮಾತ್ರ ವಿಧ್ಯುತ್ತ ಇದು ಯಾವ ನ್ಯಾಯ ? ದುಂಡಶಿ ಸರಕಾರಿ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ ವ್ಯವಸ್ಥೆ ಇಲ್ಲ ಸಿಬ್ಬಂದಿ ಕೊರತೆಯಿದೆ, ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ನೆಮ್ಮದಿ ಕೇಂದ್ರದಲ್ಲಿ ಯಾವುಗಲೂ ಬರಿ ಸರ್ವರ ಸಮಸ್ಯೆ ಹೇಳುತ್ತಾರೆ, ದುಂಡಶಿಯಲ್ಲಿ ಗ್ರಾಮ ಪಂಚಾಯತಿ ಕಾರ್ಯನಿರ್ವಹಿಸಿದರೂ ಸಹಿತ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಖೇದಕರ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಹರಿಹಾಯ್ದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಶಿವಾನಂದ ರಾಣೆ, ಇಓ ಪ್ರಶಾಂತ ತುರಕಾಣಿ, ರೈತ ಸಂಘದ ಮುತ್ತಣ್ಣ ಗುಡಗೇರಿ, ಶಂಕರಗೌಡ್ರ ಪಾಟೀಲ, ಈರಣ್ಣಾ ಸಮಗೊಂಡ ಸಂದೇಶ ದರಣೆಪ್ಪನವರ, ಆನಂದ ಕೆಳಗಿನಮನಿ, ಸಿದ್ದಾರ್ಥ ಪುಟ್ಟಣ್ಣವರ, ಸಂತೋಷ ಹುಣಶ್ಯಾಳ, ಬಸವರಾಜ ಅರಟಾಳ, ರಾಜಣ್ಣ, ಗೀರೀಶ ಕೋಳುರ, ರಾಕೇಶ ಗುಡಗೇರಿ, ವಿನಾಯಕ ಕಳಕನಗೌಡ್ರ, ಕುಮಾರ ಅರಠಾಳ, ವಿನಾಯಕ ಅರಠಾಳ, ಸೇರಿದಂತೆ ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತರಿದ್ದರು.