ದಿ. 2ರಂದು "ವುಮೆನ್ ಮೀಡಿಯಾ ಕ್ಲಬ್" ಉದ್ಘಾಟನಾ ಕಾರ್ಯಕ್ರಮ
ಲೋಕದರ್ಶನ ವರದಿ
ವಿಜಯಪುರ 31: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ "ವುಮೆನ್ ಮೀಡಿಯಾ ಕ್ಲಬ್" ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಏಪ್ರಿಲ್ ದಿ. 2ರಂದು ಬೆಳಿಗ್ಗೆ 11:00 ಗಂಟೆಗೆ ವಿಭಾಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಬೆಳಗಾವಿಯ ಪ್ರಜಾವಾಣಿ ಹಿರಿಯ ವರದಿಗಾರ ಸಂತೋಷ್ ಚಿನಗುಂಡಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಡಾ.ಸಂದೀಪ್ ಭಾಗವಹಿಸಲಿದ್ದು, ವಿದ್ಯಾಶ್ರೀ ಎಂ. (ಕಾರ್ಯದರ್ಶಿ), ಅಮೃತಾ ಜಿ. (ಖಜಾಂಚಿ), ಶ್ವೇತಾ ಎಸ್. (ಉಪಾಧ್ಯಕ್ಷೆ) ಹಾಗೂ ಅತಿಥಿ ಉಪನ್ಯಾಸಕರು, ಬೋಧಕ ಬೋದಕೇತರ ಸಿಬ್ಬಂದಿವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ ಎಂದು ಮೀಡಿಯಾ ಕ್ಲಬ್ ಅಧ್ಯಕ್ಷೆ ಜ್ಯೋತಿ ಎಸ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.