"ನಾಟ್ಯ ರಾಣಿ ಶಾಂತಲೆ ಕಾದಂಬರಿ
ಬಳ್ಳಾರಿ 04: ನಗರದಲ್ಲಿ ಕರ್ನಾಟಕ ಸರ್ಕಾರ. ಕನ್ನಡ ಸಂಸ್ಕೃತಿ ಇಲಾಖೆ. ಬಳ್ಳಾರಿ ಆಯೋಜಿಸಿದ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆಅತ್ಯಂತ ವಿಜೃಂಭಣೆಯಿಂದ ಜರುಗಿತು. ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆ ವಿಶೇಷ ಉಪನ್ಯಾಸ ವೆಂಕಟೇಶ್ ಬಡಿಗೇರ್. ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕೃತರು ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಪ್ರಾಧ್ಯಾಪಕರು ಅಕ್ಷಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಹೊಸಪೇಟೆ ಅವರು ಮಾತನಾಡಿ ಜಕಣಾಚಾರಿ ದೇವಶಿಲ್ಪಿ ಐತಿಹಾಸಿಕ ಪುರುಷ ವಿಶ್ವಕರ್ಮರ ಆಸ್ಮಿತೆಯ ಸಂಕೇತವಾಗಿದ್ದಾನೆ. ಶಾಸನಗಳಲ್ಲಿ ಹಾಗೂ ಸಾಹಿತ್ಯದಲ್ಲಿ ಜಕ್ಕಣ್ಣ ಜಕಣಾಚಾರಿ ಜಕಣಾಚಾರ್ಯ ಜಂಕಣ ಎಂದು ಉಲ್ಲೇಖವಾಗಿರುವುದು ಕಂಡುಬರುತ್ತದೆ.
ಬಳ್ಳಿಗಾವಿ. ಶಿಲ್ಪಿಗಳ ಸ್ವರ್ಗ ಅದರ ಮುಖ್ಯಸ್ಥನಾಗಿ ಜಕಣಾಚಾರಿ ಕಂಗೊಳಿಸುತ್ತಾನೆ. ವೇಸರ ಶೈಲಿ ಜೀವ ತುಂಬಿದ ಶಿಲ್ಪಿಗಳು. ದಾಸೋಜ ಮಗ ಚಾವಣ ಗದುಗಿನ ನಾಗೋಜ ಇವರ ನೆನಪು ಅಜರಾಮರವಾಗಿದೆ..ಡಾ. ಶೆಟ್ಟರ್ ಜಕ್ಕಣ್ಣ ಉಲ್ಲೇಖ ಮಾಡುತ್ತಾರೆ ಸಾಲುತೊರೆ ಜಕ್ಕಣ್ಣ ಉಲ್ಲೇಖ. ಮಾಡ್ತಾರೆ ಮರುಳಾರಾಧ್ಯ ವಿಜಯ ಚರಿತೆ ಯಲಿ ಜಕಣಾಚಾರಿ ಸಮಕಾಲೀನ ಅಂಶ ತಿಳಿದು ಬರುತ್ತದೆ.ಸಿ.ಕೆ. ನಾಗರಾಜರಾಯ ಪಟ್ಟ ಮಹಾದೇವಿ ಶಾಂತಲಾದೇವಿ ಕಾದಂಬರಿ ಯಲಿ ಹೊಯ್ಸಳ. ಕಲ್ಯಾಣ ಚಾಲುಕ್ಯರ ಆಸ್ಥಾನದಲ್ಲಿ ಜಕಣಾಚಾರ್ಯ ಖ್ಯಾತಿ ಮತ್ತು ಪ್ರಸಿದ್ಧಿ ಅಂಶವನ್ನು ಬೇಲೂರು ಹಳೇಬೀಡು, ಚನ್ನಕೇಶವ ದೇವಾಲಯ ಸಾಂಸ್ಕೃತಿಕ ಜಗತ್ತಿನ ಮೂಲಪುರುಷನಾಗಿ ಕಂಗೊಳಿಸುತ್ತಾನೆ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಸಾ.ಶಿ. ಮುರಳಯ್ಯ "ನಾಟ್ಯ ರಾಣಿ ಶಾಂತಲೆ ಕಾದಂಬರಿ ಜಕಣಚಾರ್ಯ ಮಹತ್ವ ವಿಚಾರಗಳನ್ನು ತಿಳಿಸುತ್ತದೆ. ಮೂರ್ತಿಯನ್ನು ಸೃಷ್ಟಿಸಿದ ವಿಶ್ವಕರ್ಮ ಮೂರ್ತಿ ಪೂಜೆ ಮಾಡಲು ಅರ್ಹನಾಗಿದ್ದಾನೆ. ಮಾನ್ಯ ಸಹಾಯಕ ಆಯುಕ್ತರು ಬಳ್ಳಾರಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀ ನಾಗರಾಜ್ ಅವರು ಕೂಡ ಈ ಸಂದರ್ಭದಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಬಳ್ಳಾರಿ ನಗರದ ಕಾಳಮ್ಮ ಬೀದಿಯ ಕಾಳಿಕಾ ಕಮಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಅರ್ಥಪೂರ್ಣವಾಗಿತ್ತು ಮಾನ್ಯ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಬಿ ನಾಗರಾಜ್ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಉದ್ಘಾಟನೆ ಕೆ ಈ. ಚಿದಾನಂದಪ್ಪ ಅಧ್ಯಕ್ಷರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ. ಬಳ್ಳಾರಿ. ಸಭೆಯಲ್ಲಿದ್ದ ಎಲ್ಲ ಗಣ್ಯಮಾನ್ಯರು ಉದ್ಘಾಟನೆ ಯೊಂದಿಗೆ ಕಿರು ಮಾಹಿತಿಯನ್ನು ಹಂಚಿಕೊಂಡರು ಅವರು ಮಾತನಾಡಿ ವಿಶ್ವಕರ್ಮರು ಎಲ್ಲ ಕ್ಷೇತ್ರಗಳಲ್ಲಿ ನಂಬರ್ ಒನ್ ಆಗಬೇಕಾಗಿತ್ತು, ಆದರೆ ಅವರಿಗೆ ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಬದಲಾಗಬೇಕಾಗಿದೆ ಎಂದು ಕಿವಿಮಾತು ಹೇಳಿದರುವಿಶೇಷ ಆಹ್ವಾನಿತರು ಚಂದ್ರಕಾಂತ್ ಸೋನಾರ್ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆ ಬಳ್ಳಾರಿ ಭಾಗವಹಿಸಿಭಕ್ತಿ ಸಂಗೀತ. ವಿರೇಶ ಬಳ್ಳಾರಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜನಾಂಗದ ಸರ್ವ ಪದಾಧಿಕಾರಿಗಳು ಮತ್ತು ವಿಶ್ವಕರ್ಮ ಮಹಿಳಾ ಮಂಡಳಿ ಎಲ್ಲಾ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.