"ಸಂತ ಶಿಶುನಾಳ ಶರೀಫ ಶಿವಯೋಗಿ" ಯಶಸ್ವಿ ಪ್ರಯೋಗ
ಬೆಳಗಾವಿ ೧೩- ಇದೇ ದಿನಾಂಕ 9 ರವಿವಾರದಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ, ಶ್ರೀ ಪಂಚಲಿಂಗೇಶ್ವರ ಎಸ್. ಟಿ. ನಾಟ್ಯ ಸಂಘ (ರೀ ) ಲಿಂಗಾಪುರ ಎಸ್. ಕೆ. ಇವರಿಂದ ಮಲ್ಲಿಕಾರ್ಜುನ ಸಿಂದಗಿ ವಿರಚಿತ "ಸಂತ ಶಿಶುನಾಳ ಶರೀಫ ಶಿವಯೋಗಿ" ನಾಟಕವು ಎರಡು ಯಶಸ್ವಿ ಪ್ರಯೋಗ ಪ್ರದರ್ಶನಗೊಂಡಿತು. ಭಾವೈಕ್ಯ ಮೂಡಿಸುವ ಎರಡು ಧರ್ಮಗಳನ್ನು ಒಂದುಗೂಡಿಸುವ ಕಥೆಯನ್ನು ಹೊಂದಿರುವ ಈ ನಾಟಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕಾರಂಜಿ ಮಠದ ಪ. ಪೂ. ಗುರುಸಿದ್ಧ ಮಹಾಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ, ಬಿ. ಎ.ಪಾಟೀಲ ಮುಂತಾದ ಗಣ್ಯರು ನಾಟಕದ ಆರಂಭ ಕಾರ್ಯಕ್ರಮದಲ್ಲಿ ಪಾಲ್ಲೂ0 ಡಿದ್ದರು. ನಾಟಕವನ್ನು ವೀಕ್ಷಿಸಿ ಮನದುಂಬಿ ಪ್ರಶಂಸಿದರು ಇದೇ ಸಂದರ್ಭದಲ್ಲಿ ಶರೀಫ ಪಾತ್ರಧಾರಿ ಪ್ರವೀಣ ಬಾಗಲಕೋಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ವೀರೇಶ ಚಳಗೇರಿ, ಹನುಮಂತಪ್ಪ ಬಾಗಲಕೋಟ ಉಪಸ್ಥಿತರಿದ್ದರು.