ಸಿಂಧಗಿ

ರಾಷ್ಟ್ರೀಯ ಭೂಮಾಪನ ದಿನಾಚರಣೆ

ರಾಷ್ಟ್ರೀಯ ಭೂಮಾಪನ ದಿನಾಚರಣೆ

ಸಿಂದಗಿ; ಇಡೀ ಜಗತ್ತಿನ ಆಸ್ತಿಗಳನ್ನು ಅಳತೆಗೋಲಿನಿಂದ ಪ್ರಾರಂಭಿಸಿದ ದಿನವಿದು ಅದಕ್ಕೆ ರಾಷ್ಟ್ರಾಧ್ಯಂತ ಇಂದು ಎಲ್ಲ ಭೂಮಾಪಕರು ಏ.10 ಭೂಮಾಪನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕ ಜಿ.ಬಿ.ವಗ್ಗನ್ನವರ ಅಭಿಪ್ರಾಯ ವ್ಯಕ್ತ ಪಡಿಸಿದರು.

      ಪಟ್ಟಣದ ಭೂದಾಖಲೆಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ ನಿಮಿತ್ಯ ಅಳತೆ ಮಾಪನ ಯಂತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.

    ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದ ಅಧೀಕ್ಷಕ ಎಸ್.ಆರ್.ಅಗಸಬಾಳ ಮಾತನಾಡಿ, 1989 ಏ 10 ರಂದು ವಿಲಿಯಂ ಲ್ಯಾಮಟನ್ ಅವರು ನಿದರ್ಿಷ್ಠವಾದ ಅಳತೆ ಮಾಡುವುದನ್ನು ಕಂಡು ಹಿಡಿದಿದ್ದು ಅಂತಹ ವಿಜ್ಞಾನಿಯನ್ನು ನಾವೆಲ್ಲರು ಸ್ಮರಿಸಲೇ ಬೇಕು ಏಕೆಂದರೆ ಬ್ರಿಟೀಷರು ಮಾಡಿದ ದಾಖಲೆಗಳನ್ನು ನಾವೆಲ್ಲ ಮುಂದುವರೆಸುತ್ತ ಬರಲಾಗಿತ್ತು ಅದನ್ನು ಅಳತೆಗೋಲಿನಿಂದ ನಿರ್ದಿಷ್ಟವಾದ ಅಳತೆಯನ್ನು ಕಂಡು ಹಿಡಿದು ಸಮನಾದ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ವಿಜ್ಞಾನಿಯನ್ನು ಗುಣಗಾನ ಮಾಡಿದರು.

       ಭೂದಾಖಲೆಗಳ ಸಹಾಯಕ ನಿರ್ದೇಶಕರ ದೇವರ ಹಿಪ್ಪರಗಿ ಕಾರ್ಯಾಲಯದ ಉಪಾಸಕ ವ್ಹಿ.ವೈ.ಹಳ್ಳಿ ಮಾತನಾಡಿ, ಭೂಮಾಪನ ಕಾರ್ಯಾಲಯದ ಈ ದಿನ ಒಂದು ದೊಡ್ಡ ಹಬ್ಬವಾಗಿದೆ ಏಕೆಂದರೆ ಮೊದಲಯ ಭಾರತ ದೇಶದಾಧ್ಯಂತ ಕರಾವಕ್ತಾಗಿ ಬ್ರೀಟಿಷರು 1802 ಸೆಂಟ್ ಸ್ಥಾಮಸ್ ಕ್ಷೇತ್ರದಿಂದ ಲ್ಯಾಂಪಟನ್ ಎನ್ನುವ ಭೂಮಾಪನ ವಿಜ್ಞಾನಿ ಮದ್ರಾಸ್ನಿಂದ ಭೂಮಾಪನ ಸರ್ವೇ  ಕಾರ್ಯ ಪ್ರಾರಂಭಿಸಲಾಗಿತ್ತು ಅದನ್ನು 1856ರಲ್ಲಿ 29002 ಎತ್ತರದ ಅಳತೆ ಮಾಡಿ ಮೌಂಟ್ ಏವರೆಷ್ಟ ಸವರ್ೆಕಾರ್ಯ ಪ್ರಾರಂಭಿಸಿ ಅದಕ್ಕೆ ಮೌಂಟ್ ಏವೆರೆಷ್ಟ ಎಂದು ಹೆಸರಿಡಲಾಯಿತು. ಹೀಗೆ ಭೂದಾಖಲೆಗಳ ಸವರ್ೇ ಕಾರ್ಯ ವಿರುವುದರಿಂದಲೇ ಭೂದಾಖಲೆಗಳ ಸಂರಕ್ಷಣೆಯಾಗಿವೆ ಅದಕ್ಕೆ ಅವರನ್ನು ಇಡೀ ಜಗತ್ತಿನಾದ್ಯಂತ ಏ 10 ಭೂ ಮಾಪನ ಹಬ್ಬವಾಗಿ ಅಚರಿಸಲಾಗುತ್ತಿದೆ ಎಂದು ತಿಳಿಸಿದರು.    

ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದ ಉಪಾಸಕ ಎಸ್.ಎಂ.ಬಳೂಂಡಗಿ, ಭೂಮಾಪಕರಾದ ಜಿ.ಎನ್.ಪಾಟೀಲ, ಎಸ್.ಎಸ್.ಹಂಚನಾಳ, ಭಗವಂತ ಗಾಣಗೇರ, ಗಿರೀಶ ಬಿರಾದಾರ, ಎಸ್.ಎಸ್.ತೆಗ್ಗಿಹಳ್ಳಿ, ಪರವಾನಿಗೆ ಭೂಮಾಪಕರಾದ ಶಂಕರಲಿಂಗೇಗೌಡ, ಎಸ್.ಎಲ್. ಹದ್ಲೂರ, ಎಚ್.ವ್ಹಿ.ನಟರಾಜ, ಕುಮಾರ ಚವ್ಹಾಣ, ಲಕ್ಷ್ಮೀ ಪಾಟೀಲ, ರಾಜೇಶ್ವರಿ ಬಿರಾದಾರ, ಉಷಾ ಚಿನಿವಾಲ ಸೇರಿದಂತೆ ಅನೇಕರಿದ್ದರು.    


ಸುದ್ದಿ ಓದಿ