ಗ್ರಾಮಗಳ ಉದ್ದಾರ ಎನ್‌ಎಸ್‌ಎಸ್ ಶಿಬಿರದ ಉದ್ದೇಶ : ನ್ಯಾಯಾಧೀಶೆ ಫೈರೋಜಾ
ಶಿಗ್ಗಾವಿ 11 : ಗ್ರಾಮಗಳ ಉದ್ದಾರ ಎನ್ ಎಸ್ ಎಸ್ ಶಿಬಿರದ ಉದ್ದೇಶವಾಗಿದೆ ಆದರೆ ಕಾನೂನಿನ ಉದ್ದೇಶ ಬೇರೆಯೇ ಆಗಿದೆ ಅದೇನೆಂದರೆ ಕಷ್ಠದಲ್ಲಿದ್ದವರಿಗೂ ಸಹ ಕಾನೂನು ಸರಿಯಾದ ನ್ಯಾಯ ದೊರಕಿಸಿ ಕೊಡಬೇಕು ಎಂದು ಹಿರಿಯ ನ್ಯಾಯಾಧೀಶೆ ಫೈರೋಜಾ ಉಕ್ಕಲಿ ಹೇಳಿದರು.
ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವತಂತ್ರ ಪ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ 3ನೇ ದಿನದ "ಕಾನೂನು ಅರಿವು ನೆರವು" "ಅಂತಾರಾಷ್ಟ್ರೀಯ ಸೇವಾದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಶಿಬಿರಾರ್ಥಿಗಳು ಯಾವುದೇ ಕೆಲಸ ಮಾಡಬೇಕಾದರೆ ಅರಿವು, ಮತ್ತು ಜಾಗೃತಿಯಿಂದ ಇರಬೇಕು, ಧಾರಾವಾಹಿಗಳಿಂದ ದೂರವಿದ್ದು ಕಾನೂನಿನ ದಾರಿಯಲ್ಲಿ ನಡೆಯಬೇಕೆಂದು ಕರೆ ನೀಡಿದರು.
ನ್ಯಾಯವಾದಿ ವಿ ಸಿ ಪಾಟೀಲ್ ಮಾತನಾಡಿ ಮಹಿಳೆಯರಿಗೆ ಆಗುವ ಎಲ್ಲಾ ಶೋಷಣೆಗಳನ್ನು ತೊಲಗಿಸಬೇಕು ಎಂಬುದೇ ಕಾನೂನಿನ ಕರ್ತವ್ಯ ಮತ್ತು ಹೆಣ್ಣು ಮಕ್ಕಳಿಗೂ ಆಸ್ತಿ ಹಂಚಿಕೆಯಾಗಬೇಕು ಅಲ್ಲದೇ ಅನಿಷ್ಟ ಪದ್ಧತಿಯಾದ ವರದಕ್ಷಿಣೆ ಕೊಡುವುದು ಮತ್ತು ಪಡೆಯುವುದು ಎರಡೂ ಕಾನೂನು ಬಾಹಿರವಾಗಿದ್ದು, ಹೆಣ್ಣು ಭ್ರೂಣ ಹತ್ಯೆಗಳು ಮಾಡುವುದು ಕಾನೂನಿನ ಮುಂದೆ ಅಪರಾಧ ಎಂದರು.
ನ್ಯಾಯವಾದಿ ಬಿ ಜಿ ರಾಗಿ ಮಾತನಾಡಿ ಕಾನೂನಿನ ದಾರಿಯಲ್ಲಿ ಕೆಲಸ ಆಗಬೇಕು ಎಂದರೆ ಎಲ್ಲಾ ನಮ್ಮ ವೈಯಕ್ತಿಕ ಮತ್ತು ಸಂಘ ಸಂಸ್ಥೆಗಳ ಪ್ರಮಾಣ ಪತ್ರಗಳು ಸರಿ ಇರಬೇಕು ಅಂದಾಗ ಮಾತ್ರ ಎಲ್ಲ ಕೆಲಸಗಳು ಸುಸೂತ್ರವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಶಿವಪ್ಪ ಚಿನ್ನಪ್ಪನವರ ವಹಿಸಿದ್ದರು, ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಬಿ.ಎಸ್.ಅಂಕಲಕೋಟಿ, ಎನ್.ಎನ್.ಮಲ್ಲಾಡದ, ಎಫ್.ಬಿ.ಗಂಜೀಗಟ್ಟಿ, ಆರ್.ಯು.ಕುಬಸದ, ಎಫ್.ಎಸ್.ಕೋಣನವರ, ಸಿ.ಎಮ್.ಹರಕುಣಿ, ಸಿ.ಎನ್.ಬಡ್ಡಿ, ಪಿ.ಆರ್.ಕಲ್ಯಾಣಿ, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಪ್ರೋ ಎಸ್.ಬಿ.ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.