ಬಳ್ಳಾರಿ

ಸುವರ್ಣ ಬಳ್ಳಾರಿ” ನಾಮಫಲಕ ದುರಸ್ತಿ ಕಾರ್ಯ ಆರಂಭಸಾರ್ವಜನಿಕರ ಆಕ್ರೋಶಕ್ಕೆ ಎಚ್ಚೆತ್ತ ಆಡಳಿತ

ಸುವರ್ಣ ಬಳ್ಳಾರಿ” ನಾಮಫಲಕ ದುರಸ್ತಿ ಕಾರ್ಯ ಆರಂಭಸಾರ್ವಜನಿಕರ ಆಕ್ರೋಶಕ್ಕೆ ಎಚ್ಚೆತ್ತ ಆಡಳಿತ

ಬಳ್ಳಾರಿ 25:  ನಗರದ ದುರ್ಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಮೇಲಿನ “ಸುವರ್ಣ ಬಳ್ಳಾರಿ” ನಾಮಫಲಕ ಹಾನಿಗೊಳಗಾದ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಸಂಬಂಧಪಟ್ಟ ಆಡಳಿತ ದುರಸ್ತಿ ಕಾರ್ಯ ಆರಂಭಿಸಿದೆ.ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯ ಮೇಲಿನ ನಾಮಫಲಕ ತುಂಡಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದವು. “ಸಾರ್ವಜನಿಕ ಆಸ್ತಿ ನಮ್ಮದೇ, ಅದನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಪ್ರಶ್ನಿಸಿದ್ದರು.ಸಾರ್ವಜನಿಕರ ಆಕ್ರೋಶ ಹಾಗೂ ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪವಾದ ಹಿನ್ನೆಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಬಳಿಕ ಹಾನಿಗೊಳಗಾದ ಭಾಗಗಳನ್ನು ತೆರವುಗೊಳಿಸಿ ನಾಮಫಲಕದ ಮರು ಅಳವಡಿಕೆ ಹಾಗೂ ದುರಸ್ತಿ ಕಾರ್ಯ ಆರಂಭಿಸಲಾಯಿತು.ಸ್ಥಳೀಯ ನಿವಾಸಿಗಳ ಪ್ರಕಾರ, ಸಾರ್ವಜನಿಕರ ಒತ್ತಡದ ನಂತರವೇ ಆಡಳಿತ ಚುರುಕುಗೊಂಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿಗಳ ಭದ್ರತೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಇದಲ್ಲದೆ, ನಾಮಫಲಕ ಹಾನಿಗೆ ಕಾರಣರಾದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿ ಪರೀಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.“ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿಸುವುದಷ್ಟೇ ಸಾಲದು, ಅವುಗಳನ್ನು ಸಮರ​‍್ಕವಾಗಿ ಸಂರಕ್ಷಿಸುವ ಜವಾಬ್ದಾರಿಯೂ ಆಡಳಿತದ ಮೇಲಿದೆ” ಎಂಬ ಅಭಿಪ್ರಾಯ ಇದೀಗ ಸಾರ್ವಜನಿಕ ವಲಯದಲ್ಲಿ ಮತ್ತೆ ಕೇಳಿಬರುತ್ತಿದೆ. 


ಸುದ್ದಿ ಓದಿ