"ಪೆನ್ನು ಹಿಡಿಯುವ ಕೈಗಳಿಗೆ ಶಕ್ತಿ ತುಂಬಿದ ಧಾರವಾಡ ಜೈನ ಮಿಲನ್"-ಡಾ. ಅಜಿತ ಪ್ರಸಾದ
ಲೋಕದರ್ಶನ ವರದಿ
ಧಾರವಾಡ 02: ಬಡತನವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ವಿದ್ಯಾರ್ಥಿಯ ಯಶಸ್ಸಿಗೆ ಹಣಕ್ಕಿಂತ ಮುಖ್ಯವಾದುದು ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಉತ್ತಮ ಶಿಕ್ಷಣ. ಸರ್ಕಾರ, ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು, ಉಚಿತ ಪಠ್ಯಪುಸ್ತಕಗಳು, ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಅನೇಕ ರೀತಿಯ ಶಿಕ್ಷಣಕ್ಕೆ ಬೇಕಾಗುವ ಸಹಾಯ ಮಾಡುವದರ ಮೂಲಕ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕಿದೆ ಎಂದು ಧಾರವಾಡದ ಜೆ.ಎಸ್.ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧಾರವಾಡ ಜೈನ ಮಿಲನ ವತಿಯಿಂದ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿದರು. ಶ್ರೀ ಭಗವಾನ್ ಮಹಾವೀರರ “ಜ್ಞಾನ ದಾನವೇ ಶ್ರೇಷ್ಠದಾನ” ಎಂಬ ತತ್ವದಲ್ಲಿ ಇವತ್ತು ಜೈನ ಮಿಲನ್ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವ ಮುಖಾಂತರ ಒಂದು ಶ್ರೇಷ್ಠ ಕಾರ್ಯ ಮಾಡಲಾಗುತ್ತಿದೆ. ಮಕ್ಕಳು ಉತ್ತಮವಾಗಿ ಕಲಿತು ಸಂಸ್ಥೆಯ ಮತ್ತು ತಮ್ಮ ತಂದೆ ತಾಯಂದಿರಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು
ಜೆ.ಎಸ್.ಎಸ್ ಆಡಳಿತಾಧಿಕಾರಿಯಾದ ಅರಿಹಂತ ಪ್ರಸಾದ ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು, ಪೋಷಕರು ಮತ್ತು ಸಮಾಜದ ಸದಸ್ಯರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕು. ಏಕೆಂದರೆ ಒಬ್ಬ ವಿದ್ಯಾರ್ಥಿಯ ಯಶಸ್ಸು ಒಂದು ಕುಟುಂಬದ ಮಾತ್ರವಲ್ಲ, ಇಡೀ ಸಮಾಜದ ಯಶಸ್ಸಾಗಿದೆ. ಎಲ್ಲರೂ ಚೆನ್ನಾಗಿ ಓದಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಈ ಎಂದು ಮಾತು ಹೇಳಿದರು ಈ ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಉಪಾದ್ಯೆ, ಶಾಲೆಯ ಮುಖ್ಯೋಪಾಧ್ಯಾನಿ ಶ್ರೀಮತಿ ಸುಧಾಮಣಿ ರಾವ್, ಡಾ ಜಿನದತ್ತ ಹಡಗಲಿ, ಶ್ರೀಮತಿ ಸುಜಾತ ಹಡಗಲಿ, ಶ್ರೀ ಬ್ರಹ್ಮಪ್ರಕಾಶ, ಶ್ರೀ ಶಾಂತಿನಾಥ್ ರೋಖಡೆ, ಶ್ರೀಮತಿ. ರಾಜೇಶ್ವರಿ ಶೆಟ್ಟಿ, ಶ್ರೀ ಮೋಹನ್ ಕುಮಾರ್ ಗೋಗಿ, ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ಗೈದರು. ಡಾ. ಜಿನ್ನಪ್ಪ ಕುಂದಗೊಳ ಸ್ವಾಗತಿಸಿದರು. ಶ್ರೀ ಮುದಿಗೌಡರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರತ್ನಾಕರ್ ಹೋಳಗಿ ವಂದಿಸಿದರು.