ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಶಾಲೆಗೆ ನೀರಿನ ಶುದ್ಧೀಕರಣ ಘಟಕ ವಿತರಣೆ
ಬಳ್ಳಾರಿ: ಕೆನರಾ ಬ್ಯಾಂಕ್ ಪ್ರಾಯೋಜಿತ ದಕ್ಷಿಣ ಭಾರತದ ಅತೀ ದೊಡ್ಡ ಗ್ರಾಮೀಣ ಬ್ಯಾಂಕ್ ಆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ತನ್ನ ಸೇವಾ ವ್ಯಾಪ್ತಿಯಲ್ಲಿ ಬರುವ 22 ಜಿಲ್ಲೆಗಳ ಗ್ರಾಹಕರಿಗೆ ಅನುಕೂಲವಾಗಲು ಶೀಘ್ರಗತಿಯಲ್ಲಿ ಹಣದ ಸೇವೆಯನ್ನು ಒದಗಿಸಲು ಗ್ರಾಹಕ ಸ್ನೇಹಿಯಾದ ಕ್ಷಣದಲ್ಲಿ ಹಣ ಯೋಜನೆಯನ್ನು ಹೊರತಂದಿದ್ದು ಹಾಗೂ ಇಂದು ನಡೆದ ಕಾರ್ಯಕ್ರಮದಲ್ಲಿ ಎಸ್ ಕೆ ಮೋದಿ ನ್ಯಾಷನಲ್ ಶಾಲೆಯ ಮಕ್ಕಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅನುಕೂಲವಾಗಲು ನೀರಿನ ಶುದ್ದೀಕರಣ ಘಟಕವನ್ನು ವಿತರಿಸಲಾಯಿತು.
ಬಳ್ಳಾರಿಯಲ್ಲಿರುವ ಬ್ಯಾಂಕ್ನ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರವರ್ತಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಹರ್ದೇಪ್ ಸಿಂಗ್ ಅಹುಲುವಾಲಿಯಾ ಅವರು ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ 1001 ನೇ (ಮೈಕ್ರೋ ಎಟಿಎಮ್) ಕ್ಷಣದಲ್ಲಿ ಹಣ ಎಂಬ ಸೇವಾ ಉತ್ಪನ್ನವನ್ನು ಉದ್ಘಾಟಿಸಿದರು. ಅದರ ಜೊತೆಗೆ ಸಾಮಾಜಿಕ ಸೇವಾ ಬದ್ದತೆಯಡಿಯಲ್ಲಿ ಎಸ್ ಕೆ ಮೋದಿ ಶಾಲೆಗೆ, ನೀರಿನ ಶುದ್ದೀಕರಣ ಘಟಕವನ್ನು ವಿತರಿಸಲಾಯಿತು.
ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಹರ್ದೇಪ್ ಸಿಂಗ್ ಅಹುಲುವಾಲಿಯಾ ಅವರು ಮಾತನಾಡುತ್ತಾ ಕನರ್ಾಟಕ ಗ್ರಾಮೀಣ ಬ್ಯಾಂಕು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸದಾ ಮುಂಚೂಣಿಯಲ್ಲಿದ್ದು, ಸಾಮಾಜಿಕ ಸೇವಾ ಬದ್ಧತೆಯಡಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡಿರುವುದನ್ನು ಶ್ಲಾಘಿಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀನಾಥ್ಜೋಶಿ, ಆರ್ವೈಎಮ್ಇಸಿ ಪ್ರಾಂಶುಪಾಲ ಡಾ. ಟಿ ಹನುಮಂತ ರೆಡ್ಡಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಭಾಗ್ಯರೇಖಾ ಭಾನುಮೂರ್ತಿ, ಬಳ್ಳಾರಿ ಪ್ರಾದೇಶಿಕ ವ್ಯವಸ್ಥಾಪಕ ರಮಾನಾಥ ಆಚಾರ್ಯ, ಮುಖ್ಯ ವ್ಯವಸ್ಥಾಪಕ ಅಜಿತನಾಥ, ಹಿರಿಯ ವ್ಯವಸ್ಥಾಪಕ ಕಿರಣ ಎಚ್ ಎನ್, ಅರುಣಾಚಲಂ,ಶಾಖಾ ವ್ಯವಸ್ಥಾಪಕ ನರೇಂದ್ರ, ವ್ಯವಸ್ಥಾಪಕ ಪಿ ದಿನೇಶ್ ರಡ್ಡಿ,ಎಸ್ ಕೆ ಮೋದಿ ಶಾಲೆಯ ಮುಖ್ಯ ಗುರುಗಳಾದ ಸರಸ್ವತಿ ಹಾಗೂ ಉಳಿದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.