ಬೆಳಗಾವಿ

ಸಂಘವು ಪ್ರಗತಿಹೊಂದಲು ಶೇರುದಾರ, ಹೋಡಿಕೆದಾರ ಪಾತ್ರ ಅತಿಮುಖ್ಯವಾಗಿದೆ ರಾಮಪ್ಪ ನೇಮಗೌಡೆರ

ಸಂಘವು ಪ್ರಗತಿಹೊಂದಲು ಶೇರುದಾರ, ಹೋಡಿಕೆದಾರ ಪಾತ್ರ ಅತಿಮುಖ್ಯವಾಗಿದೆ  ರಾಮಪ್ಪ ನೇಮಗೌಡೆರ

ಲೋಕದರ್ಶನ ವರದಿ 


  ಸಂಘವು ಪ್ರಗತಿಹೊಂದಲು ಶೇರುದಾರ, ಹೋಡಿಕೆದಾರ ಪಾತ್ರ ಅತಿಮುಖ್ಯವಾಗಿದೆ  ರಾಮಪ್ಪ ನೇಮಗೌಡೆರ 

ಗುರ್ಲಾಪೂರ, 18 : ಸ್ಥಳಿಯ  ಶ್ರೀ ರೇವಣಸಿದ್ದೇಶ್ವರ ವಿವಿದ  ಉದ್ದೇಶಗಳ ಸೌಹಾರ್ದ ಸಹಕಾರಿಸಂಘ ನಿ ಗುರ್ಲಾಪೂರ ಇದರ ದ್ವಿತೀಯ ಶಾಖೆಯನ್ನು ಮಮದಾಪೂರ ಗ್ರಾಮದಲ್ಲಿ ಟಿ ಡಿ ಗಾಣಿಗೇರ ಕಾಂಪ್ಲೆಕ್ಸನಲ್ಲಿ   ಶ್ರೀ ಚರಮೂರ್ತೀಶ್ವರ ಮಹಾಸ್ವಾಮಿಗಳು ಮಮದಾಪೂರ ಶ್ರೀ ಮ ನಿ ಪ್ರ ಗುರುಸಿದ್ಧ  ಮಹಾಸ್ವಾಮಿಗಳು  ರೇವಣಸಿದ್ದೇಶ್ವರ ವಿರಕ್ತಮಠ ಬೆಂಡವಾಡ ಶ್ರೀ ವೀರಭಧ್ರಯ್ಯ ಸ್ವಾಮಿಗಳು ಮಮದಾಪೂರ ಶ್ರೀಗಳ ಸಾನಿಧ್ಯದಲ್ಲಿ ಭುದವಾರ ದಿ 16 ರಂದು. ಬೆಳಗ್ಗೆ ಮಹಾಲಕ್ಷ್ಮೀ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯೊಂದಿಗೆ ನೆರೆವೆರಿಸಿದರು. 

  ಸಬೆಯ ಅಧ್ಯಕ್ಷತೆಯನ್ನು ಪ್ರಧಾನ ಕಛೆರಿಯ ಅಧ್ಯಕ್ಷರಾದ ರಾಮಪ್ಪ ನೇಮಗೌಡೆರ ವಹಿಸಿದ್ದರು. ಆರಂಬದಲ್ಲಿ ಪ್ರಧಾನ ಕಛೆರಿಯ ಕಾರ್ಯದರ್ಶಿಗಳಾದ ಆನಂದ ಶಿವಾಪೂರ ವೆದಿಕೆ ಮೇಲೆ ಸಾನಿದ್ಯ ವಹಿಸಿದ ಮಹಸ್ವಾಮಿಗಳನ್ನು ಗಣ್ಯಮಾಣ್ಯರೆನ್ನು ಸ್ವಾಗತಿಸಿ ಸಂಘದ ಪ್ರಸ್ಥಾವಿಕವಾಗಿ ನಮ್ಮ ಸಂಘವು ಗುರ್ಲಾಪೂರದಲ್ಲಿ ನಡೆದ ಬಂದ ದಾರಿ ಹಾಗೂ ಶೇರುದಾರರಿಗೆ ಸಿಗುವ ಲಾಭಗಳ ಬಗ್ಗೆ ತಿಳಿಸಿದರು. 

 ನಂತರ ಸಂಘದಲ್ಲಿ ಠೆವು ಮಾಡಿದ ಸದಸ್ಯರಿಗೆ ಸತ್ಕರಿಸಿ ಠೇವು ಪತ್ರಗಳನ್ನು ಶ್ರಿಗಳು ವಿತರಿಸಿದರು. ಸಬೆಯ ಅಧ್ಯಕ್ಷತೆಯನ್ನು ಪ್ರಧಾನ ಕಛೆರಿಯ ಅಧ್ಯಕ್ಷರಾದ ರಾಮಪ್ಪ ನೇಮಗೌಡೆರ ರವರು ಮಮದಾಪೂರ ಹಾಗೂ ಸುತ್ತಮುತ್ತಲಿನ ಜನರಿಗೆ ಅನೂಕೂಲವಾಗಲಿ ಎಂದು ನಿಮ್ಮೂರಿನಲ್ಲಿ ನಾವು ಶಾಖೆಯನ್ನು ಪ್ರಾರಂಭಮಾಡಿದ್ದೇವೆ ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೂಳ್ಳಬೇಕು  ಸಂಘವು ಪ್ರಗತಿಹೊಂದಲು ಶೇರುದಾರ ಹೋಡಿಕೆದಾರ  ಸಿಬ್ಬಂದಿ ಪಾತ್ರ ಅತಿಮುಖ್ಯವಾಗಿದೆ ಎಂದರು. 

ಈ ಸಂದರ್ಬದಲ್ಲಿ ಮಹಾದೇವ ರಂಗಾಪೂರ. ತಿಪ್ಪಣ್ಣ ಗಾಣಿಗೇರ. ಬಸಪ್ಪ ಗಾಣಿಗೇರ ಲಗಮಪ್ಪ ಹಳ್ಳೂರ ಸಿದ್ದಪ್ಪ ಸುಳ್ಳನವರ ವಿಠ್ಠಲ ಜಾದವ  ರೇವಪ್ಪ ಸತ್ತಿಗೇರಿ ಶ್ರೀಶೈಲ ನೇಮಗೌಡರ ಅಶೋಕ ಗಾಣಿಗೇರ ಹಣಮಂತ ಬಂಡಿವಡ್ಡರ  ನೀತಾ ನೇಮಗೌಡರ ಪಾರ್ವತೆವ್ವ ಗಾಣಿಗೇರ. ಹಾಗೂ ಬೆಟಗೇರಿ ಹಾಗೂ ಮಮದಾಪೂರ ಶಾಖೆಯ ಸಲಹಾಸಮಿತಿಯ ಆಡಳಿತ ಮಂಡಳಿ ಅದ್ಯಕ್ಷರು ಹಾಗು ಸದಸ್ಯರು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಗುರು ಹಿರಿಯರು ಸ್ಥಳಿಯ ಸಂಘ ಸಂಸ್ಥೆಯ ಪದಾದಿಕಾರಿಗಳು ಆಗಮಿಸಿದ್ದರು. ಶಾಖಾ ಕಾರ್ಯದರ್ಶಿ ಸಚೀನ ಮೆಳೆನ್ನವರ ನಿರುಪಿಸಿ ವಂದಿಸಿದರು 


ಸುದ್ದಿ ಓದಿ