ಉಚಿತ ಬಿಲ್ವಪತ್ರಿ ಪಂಚಾಮೃತ ವಿತರಣೆ
ಬಳ್ಳಾರಿ 12: ಮಹಾ ಶಿವರಾತ್ರಿಯ ಪ್ರಯುಕ್ತ ದುರ್ಗಮ್ಮ ಗುಡಿ ಆವರಣದಲ್ಲಿ ಆರಾಧ್ಯ ರಂಗ ಬಳಗ ಹಚ್ಚೋಳ್ಳಿ ಮತ್ತು ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಂಘ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಿಲ್ವಪತ್ರಿ ಪಂಚಾಮೃತ ವಿತರಿಸಲಾಯಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ದಿವ್ಯ ಸಾನಿಧ್ಯ ಡಾಕ್ಟರ್ ಪಂಪಾಪತಿ ಶಾಸ್ತ್ರಿಗಳವರು ವಹಿಸಿದ್ದರು. ಮತ್ತು ಈ ಕಾರ್ಯಕ್ರಮದ ಚಾಲನೆಯನ್ನು ನಗರದ ಶಾಸಕರಾದ ಸೋಮಶೇಖರ ರೆಡ್ಡಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಲ್ಲನಗೌಡ, ಜಯಂ ಬಸವರಾಜಸ್ವಾಮಿ, ವೀರ ಶೇಖರ್ ರೆಡ್ಡಿ, ಶ್ರೀನಿವಾಸ್ ಮತ್ಕರ್, ಗೌರಿಶಂಕರ ಸ್ವಾಮಿ, ಬಂಡ್ರಾಳ ಮೃತ್ಯುಂಜಯಸ್ವಾಮಿ, ಅಮರೇಶ್ ಹಚ್ಚೋಳ್ಳಿ, ಹನುಮಂತ ಗುಡಿ ಗಂಟೆ, ರವಿಕುಮಾರ ದಮ್ಮೂರು, ವಿ ಎಸ್ ತಿಪ್ಪೇಸ್ವಾಮಿ ,ಬಸವರಾಜ್ ಬಿಎಂ ಮತ್ತು ರುದ್ರಮುನಿ ಸ್ವಾಮಿ, ವಿಶ್ವನಾಥ್ ಕೊಳಗಲ್, ನಾಗಭೂಷಣ್ ,ರವಿಗೌಡ ಹಚ್ಚೋಳ್ಳಿ, ಕೊಟ್ರೇಶ್, ಮೋರಿಗೆರೆ ,ಜಾಲಿಹಾಳ್ ಶ್ರೀಧರ ಗೌಡ, ಇನ್ನೂ ಅನೇಕ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.