ಸೇವಾ ಭೂಷಣ ಪ್ರಶಸ್ತಿಗೆ ಸುಧಾ ಕುಲಕರ್ಣಿ ಭಾಜನ
ಶಿಗ್ಗಾವಿ : ತಾಲೂಕಿನ ಗೋಟಗೋಡಿ ಜನಪದ ಕಲೆ ವಿಭಾಗದ ವಿದ್ಯಾರ್ಥಿನಿ ಹಾಗೂ ಧಾರವಾಡದ ಬಹುಮುಖ ಪ್ರತಿಭೆ ಸುಧಾ ಕುಲಕರ್ಣಿ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ನೀಡುವ ಸೇವಾ ಭೂಷಣ ಪ್ರಶಸ್ತಿಗೆ ಭಾಜನಾಗಿದ್ದಾರೆ. ಮಾರ್ಚ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಸಾಂಪ್ರದಾಯಿಕ ಶೈಲಿಯ ನೃತ್ಯಗಾರ್ತಿಯಾಗಿರುವ ಸುಧಾ ಕುಲಕರ್ಣಿ ಅವರು ಬಾಲ್ಯದಿಂದಲೇ ಕಥಕ, ಭರತನಾಟ್ಯ, ಮತ್ತು ಜನಪದ ನೃತ್ಯಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕೋಲಾಟ, ಜಡೆ ಕೋಲಾಟ, ದೊಡ್ಡಾಟ ಕುಣಿತ, ಮುಳ್ಳು ಹೆಜ್ಜೆ ಕುಣಿತ,ಗುರ್ಜಿ ನೃತ್ಯ ಹಾಗೂ ಜಾನಪದ ನೃತ್ಯಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಮತ್ತು 11 ವರ್ಷಗಳ ಕಾಲ ಸಾಂಪ್ರದಾಯಿಕ ಶೈಲಿಯ ನೃತ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.