ಮದಲಗಟ್ಟಿ ಗ್ರಾಮದಲ್ಲಿ ಯಶಸ್ವಿಯಾದ ಜಾನಪದ ಸಂಗೀತ ಸಂಭ್ರಮ
ಕುಷ್ಟಗಿ 12: ತಾಲೂಕಿನ ಮದಲಗಟ್ಟಿ ಗ್ರಾಮದ ದುಗರ್ಾದೇವಿ ದೇವಸ್ಥಾನದ ಆವಣರದಲ್ಲಿ ಪ್ರೊ ಬಿ. ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಮದಲಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಬೆಂಗಳೂರ ಇವರ ಸಹಯೋಗದಲ್ಲಿ ಜಾನಪದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಯಶಸಿಗೊಳಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವನಗೌಡ ಮಾಲಿ ಪಾಟೀಲ ನೆರವೇರಿಸಿ ಮಾತನಾಡಿ ಜನಪದ ಕಲೆಗಳು ನಮ್ಮ ನಾಡಿನ ಜೀವನಾಡಿಗಳು ಇದ್ದಂತೆ. ನಮ್ಮ ಪೂರ್ವಜರು ಬದುಕಿನ ಸ್ವಾರಸ್ಯವನ್ನು ಜಾನಪದಗಳಲ್ಲಿ ಕಟ್ಟಿಕೊಡುತ್ತಿದ್ದರು. ಅದೇ ರೀತಿ ನಿತ್ಯ ಬದುಕಿನ ಪಾಠದಲ್ಲಿ ಜನಪದಗಳು ಪಾತ್ರವಹಿಸುತ್ತವೆ ಎಂದರು.
ಸದರಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಕಲಾವಿದ ರಾಮಲಿಂಗಪ್ಪ ಹೆಚ್. ಕುಕನೂರು ಜಾನಪದ ಗಾಯನ, ವೆಂಕಟೇಶ ಹೊಸಮನಿ ಹನಮಸಾಗರ ಸುಗಮ ಸಂಗೀತ, ಬಸವ ಕನಕಗಿರಿ ಸಂಪ್ರದಾಯ ಪದಗಳು, ತಬಲಾ ಹೊನ್ನಪ್ಪ ಕುದರಿಮೋತಿ, ಕ್ಯಾಸಿಯೋ ವಿರೇಶ ಕಲ್ಲಗೋನಾಳ, ಹಾಮೋನಿಯಂ ಹುಲಗಪ್ಪ ನಾಗೇಶನಹಳ್ಳಿ ನಿರ್ವಹಿಸಿದರು.
ಕಾರ್ಯಕ್ರಮವನ್ನು ಶಾಖಾಪೂರ ಗ್ರಾಮದ ಮಾನಪ್ಪ ಬಿ. ತಳವಾರ ಗ್ರಾಪಂ ಸದಸ್ಯರು ಕೊರಡಕೇರಾ ಇವರ ಅದೇ ರೀತಿಯಾಗಿ ಶ್ರೀ ಹನಮಂತಪ್ಪ ಶಾಖಾಪೂರ, ಶಿವನಗೌಡ ಮಾಲಿಪಾಟೀಲ, ಸದರಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಬಸನಗೌಡ ಮಾಲಿಪಾಟೀಲ, ಶಂಕ್ರಪ್ಪ ಹುನಗುಂದ ಇತರರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾರಪ್ಪ ಕನಕಗಿರಿ ಗ್ರಾಮಪಂಚಾಯತ ಸದಸ್ಯರು ಇವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನಕಪ್ಪ ವಾಯ್ ತಳವಾರ, ಚನ್ನಬಸವ ಪರಕಿ, ಗುತ್ತಿಗೆದಾರರು, ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್, ಇಂಡಿಯಾ (ಬಿ), ತಾಲೂಕಾ ಅಧ್ಯಕ್ಷ ಗವಿಸಿದ್ದನಗೌಡ ಮಾಲಿಪಾಟೀಲ ಬಿಜಕಲ್ಲ, ರಮೇಶ ಪಾಟೀಲ, ಹನಮಂತಪ್ಪ ಕನಕಗಿರಿ, ಶರಣಪ್ಪ ಪರಕಿ, ಭೀಮನಗೌಡ ಮಾಲಿಪಾಟೀಲ, ನಾಗಪ್ಪ ಐಹೊಳಿ ಗ್ರಾ.ಪಂ. ಸದಸ್ಯರು ಶಾಖಾಪೂರ, ಹನಮಂತಪ್ಪ ಕನಕಗಿರಿ ಎಸ್.ಡಿ.ಎಂ.ಸಿ. ಸದಸ್ಯರು ಮದಲಗಟ್ಟಿ, ಮುದಿಯಪ್ಪ ಕನಕಗಿರಿ ಇತರರು ಭಾಗವಹಿಸಿದ್ದರು.
ಅಧ್ಯಕ್ಷತೆ ಭಾಷಣವನ್ನು ಪೂಜಾರಪ್ಪ ಕನಕಗಿರಿ ಮಾತನಾಡಿದರು. ಜೊತೆಗೆ ಗ್ರಾಮಪಂಚಾಯತ ಸದಸ್ಯರಿಗೆ ಮತ್ತು ಎಸ್.ಡಿ.ಎಮ್.ಸಿ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಪ್ರೋ ಬಿ. ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಮದಲಗಟ್ಟಿ ವತಿಯಿಂದ ಸನ್ಮಾನ್ಯ ಮಾಡಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಆನಂದ ಪರಕಿ ನಿರ್ವಹಿಸಿದರು. ನಿರೂಪಣೆ ಮಂಜುನಾಥ ಹೆಚ್, ಪರಕಿ, ವಂದನಾರ್ಪಣೆ ಮಂಜುನಾಥ ಕೆ. ಕನಕಗಿರಿ ಮಾಡಿದರು