ತಾಳಿಕೋಟಿ

ಶಾಸಕ ನಡಹಳ್ಳಿ ಅಪ್ಪಟ ಜಾತ್ಯಾತೀತ ನಾಯಕ : ಖಾಜಾಹುಸೇನ

ಶಾಸಕ ನಡಹಳ್ಳಿ ಅಪ್ಪಟ ಜಾತ್ಯಾತೀತ ನಾಯಕ : ಖಾಜಾಹುಸೇನ

ತಾಳಿಕೋಟಿ: ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವದರ ಜೊತೆಗೆ ಎಲ್ಲ ಜಾತಿ-ಜನಾಂಗದವರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿರುವ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಒಬ್ಬ ಅಪ್ಪಟ ಜಾತ್ಯಾತೀತ ನಾಯಕ ಎಂದು ಮುಸ್ಲೀಂ ಸಮಾಜದ ಮುಖಂಡ ಖಾಜಾಹುಸೇನ ಡೋಣಿ ಹೇಳಿದರು.

ಬುಧವಾರ ಪಟ್ಟಣದ 6ನೇ ವಾರ್ಡನಲ್ಲಿ ಹಮ್ಮಿಕೊಂಡ ರಸ್ತೆ ಕಾಮಗಾರಿಯ ಭೂಮಿಪೂಜಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ನಡಹಳ್ಳಿ ಅವರು ರಾಜಕೀಯಕ್ಕೆ ಬರುವ ಮೊದಲು ಸಮಾಜ ಸೇವಕನಾಗಿ ಕೆಲಸ ಮಾಡಿ ಜನರ ಮನಸ್ಸು ಗೆದ್ದವರು ಬಡವರ ಕುರಿತು ಅಪಾರ ಕಾಳಜಿ ಹೊಂದಿದ ಅವರು ಹೃದಯ ಶ್ರೀಮಂತಿಕರಯಿರುವ ವ್ಯಕ್ತಿ, ಅವರೆಂದೂ ಜಾತಿ ರಾಜಕಾರಣ ಮಾಡಿಲ್ಲ. ಅವರ ಗೆಲುವಿಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ ಆಗಲಿವೆ ಎಂದರು.

ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ ಶಾಸಕ ನಡಹಳ್ಳಿ ಅವರು ಜನಪರ ಕಾಳಜಿ ಇರುವ ವ್ಯಕ್ತಿ, ನಾನು ಅವರನ್ನು ಸುಮಾರು 15 ವರ್ಷಗಳಿಂದ ನೋಡುತ್ತಿದ್ದೇನೆ. ಅವರಿಗೆ ಸಮಾನವಾದ ವ್ಯಕ್ತಿ ಈ ಕ್ಷೇತ್ರದಲ್ಲಿ ಬೇರೊಬ್ಬರಿಲ್ಲ ಅವರ ಗೆಲವು ಶತಸಿದ್ಧ ಎಂದರು.

ಶಾಸಕ ನಡಹಳ್ಳಿ ಅವರು ನಾನೆಂದೂ ಜಾತಿರಾಜಕಾರಣ ಮಾಡಿದವನಲ್ಲ. ನಾನು ನನ್ನ ಕ್ಷೇತ್ರದ ಎಲ್ಲ ಜಾತಿ ಜನಾಂಗದವರನ್ನು ಜೊತೆಯಾಗಿ ತೆಗೆದುಕೊಂಡು ಹೋಗುತ್ತಿದ್ದೇನೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ದೇಶದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅಲ್ಪಸಂಖ್ಯಾತ ಬಂಧುಗಳು ವದಂತಿಗಳಿಗೆ ಕಿವಿಗೊಡದೆ ಈ ಬಾರಿ ನನಗೆ ಅತಿ ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ನಡಹಳ್ಳಿ ಅವರಿಗೆ ಮುಸ್ಲೀಂ ಮರ್ಕಜ್ ಜಮಾತ್ ಹಾಗೂ ಕೋರ್ತಿ  ಶಾದಿಮಹಲ್ ಕಮೀಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾನದಾರ, ಈದ್ಗಾ ಸಮಿತಿ ಅಧ್ಯಕ್ಷ ಮಾಸೂಮ್ಸಾಬ ಕೆಂಭಾವಿ, ಪುರಸಭೆ ಸದಸ್ಯರಾದ ಜಯಸಿಂಗ್ ಮೂಲಿಮನಿ, ವಾಸುದೇವ ಹೆಬಸೂರ, ಪರಶುರಾಮ ತಂಗಡಗಿ, ಮುದಕಪ್ಪ ಬಡಿಗೇರ, ಮೈನು ಕೋತರ್ಿ, ಸಿಕಂದರ ವಠಾರ, ಆದಮ್ಶಾ ಮಕಾನದಾರ ಇದ್ದರು 

ಸುದ್ದಿ ಓದಿ