ವಕೀಲ ವೃತ್ತಿ ಒಂದು ರಾಯಲ್ ಜಾಬ್:ದೀಪ್ತಿ ಅಂಡಗಿ
ಲೋಕದರ್ಶನ ವರದಿ
ಮುಂಡಗೋಡ:ವಕೀಲ ವೃತ್ತಿ ಒಂದು ರಾಯಲ್ ಜಾಬ್ ಸರ್ಕಾರಿ ಅಲ್ಲದೆ ಐಟಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ ಎಂದು ನ್ಯಾಯವಾದಿ ದೀಪ್ತಿ ಅಂಡಗಿ ಹೇಳಿದರು.
ಗುರುವಾರ ಪಟ್ಟಣದ ಬಂಕಾಪುರ ರಸ್ತೆಯಲ್ಲಿರುವ ರಾಜೇಶ್ವರಿ ಅಂಡಗಿ ಮಾಲೀಕತ್ವದ ಗೆಲಾಕ್ಸಿ ಕಂಪ್ಯೂಟರ್ ನಲ್ಲಿ ಜನಸೇವಾ ಸೊಸೈಟಿ(ರಿ.)ಅಡಿ ಕೌಶಲ್ಯ ಅಭಿವೃದ್ಧಿ ತರಬೇತಿಯಲ್ಲಿ ಕಂಪ್ಯೂಟರ್ ವೃತ್ತಿಪರ ವಿವಿಧ ಕೋರ್ಸ್ಗಳು ತರಬೇತಿ ಪಡೆದ ವಿದ್ಯಾಥರ್ಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಕಾನೂನು ದೊಡ್ಡ ಸಮುದ್ರ. ಗಮನವಿಟ್ಟು ಓದಿದರೆ ಸಿವಿಲ್ ಜಡ್ಜ್ ಕೂಡ ಆಗಬಹುದು. ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಬಾಲ್ಯ ವಿವಾಹ ಅಪರಾಧದಿಂದ ದಂಡ ಸಹಿತ ಶಿಕ್ಷೆಗೆ ಗುರಿಯಾಗಬೇಕಾಗುವುದು. 18 ವರ್ಷದೊಳಗಿನವರು ವಾಹನ ಚಾಲನೆ ಮಾಡಬಾರದು. ಅಪಘಾತ ಸಂಭವಿಸಿದಾಗ ಮಾನವೀಯತೆ ತೋರಬೇಕು. ಜನನ-ಮರಣ ನೋಂದಣಿ ತಪ್ಪದೆ ಮಾಡಿಸಬೇಕು ಎಂದರು.
ತಾ.ಪಂ. ಕ್ಲಸ್ಟರ್ ಸೂಪರ್ವೈಸರ್ ಶ್ಯಾಮಲಾ ನಾಯ್ಕ ಮಾತನಾಡಿ ಪದವಿ ಮುಗಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೀನ್ದಯಾಳ್ ಉಪಾಧ್ಯಾಯ ಯೋಜನೆಯಡಿ ಕಂಪನಿಗಳಲ್ಲಿ ನೌಕರಿ ನೀಡಲಾಗುತ್ತದೆ. ಮೂರು ತಿಂಗಳು ಉಚಿತ ತರಬೇತಿ ನೀಡುತ್ತಾರೆ. ಜ.31ಕ್ಕೆ ಗ್ರಾಮೀಣ ಯುವಕ-ಯುವತಿಯರಿಗೆ ಆಪ್ತ ಸಮಾಲೋಚನೆ ಆಯೋಜಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ ಎಂದರು. ವಿದ್ಯಾರ್ಥಿಗಳಾದ ಸ್ವಾತಿ ಓಂಕಾರ, ಶರಾವತಿ ಪಾಟೀಲ, ಮಹಮ್ಮದ್ ಪೈಜಾನ್, ಅಕ್ಷತಾ ಸವಣೂರ, ಸಂಗೀತಾ ಇಟ್ಲಾಪುರ, ಬಸವರಾಜ ಹಾನಗಲ್, ಗಣೇಶ ಗುಂಡುಪಕರ, ವೀಣಾ ಸುಣಗಾರ, ಪರಶುರಾಮ ಅಂಟಾಳ, ಸನಕೌಸರ ಹುಬ್ಬಳ್ಳಿ, ಗಣೇಶ ಹಜರ್ಿ ಇವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ರಾಜೇಶ್ವರಿ ಅಂಡಗಿ ಪ್ರಾಸ್ತಾವಿಕ ಮಾತನಾಡಿದರು. ವಿವೇಕಾನಂದ ಎಮ್.ಎಚ್. ಅನಿಸಿಕೆ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಶ್ರೀಕಾಂತ ಸಾನು ಉಪಸ್ಥಿತರಿದ್ದರು. ಈಶ್ವರಿ ಪ್ರಾಥರ್ಿಸಿದರು. ಶರಾವತಿ ಪಾಟೀಲ ವಂದಿಸಿದರು