ಮುಂಡರಗಿ

ರಸ್ತೆ ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ಕೊಟ್ರಪ್ಪ ಸಾವು

ರಸ್ತೆ ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ಕೊಟ್ರಪ್ಪ ಸಾವು

ಮುಂಡರಗಿ :ತಾಲೂಕು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೊಟ್ರಪ್ಪ ತಂದೆ ಸೋಮಪ್ಪ ಬಂಡಗಾರ (58) ದಿ.25 ರಂದು ರಾತ್ರಿ 11-30 ಘಂಟೆಯ ಸುಮಾರಿಗೆ  ಗದಗ ಮುಂಡರಗಿ ರಸ್ತೆಯ ಬರದೂರ ಗ್ರಾಮದ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ಮೃತ ಪೊಲೀಸ್  ಹೆಡ್ ಕಾನ್ಸ್ಟೇಬಲ್ ಕೊಟ್ರಪ್ಪ  ಬಂಡಗಾರ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದವರಾಗಿದ್ದು ಅವರು ಮುಂಡರಗಿ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ರಾಗಿ ಕಾರ್ಯ ನಿರ್ವಹಿಸುತ್ತಿದ್ದ ದಿ,25 ರಂದು ಕರ್ತವ್ಯ ಮುಗಿಸಿ ರಾತ್ರಿ 11-30 ಘಂಟಗೆ ಗದಗನಲ್ಲಿರುವ ವಾಸ್ಥವ್ಯದ ಮನೆಗೆ ಹೊಗುತ್ತಿರುವಾಗ ಬರದೂರ ಗ್ರಾಮದ ಹತ್ತಿರ  ಟ್ರಾಕ್ಟ್ರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದರಿಂದ  ತಿರ್ವ ಘಾಯಗೊಂಡಿರುವ  ಪೋಲೀಸ್  ಹೆಡ್ ಕಾನ್ಸ್ಟೇಬಲ್ ಕೊಟ್ರಪ್ಪ  ಬಂಡಗಾರ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. 

ಮೃತನು ಪತ್ನಿ, 2 ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಘಟಣೆಯ ಪ್ರಕರಣವನ್ನು ಮುಂಡರಗಿ ಪೋಲೀಸ್ ಠಾಣೆಯಲ್ಲಿ ಧಾಖಲಾಗಿದೆ ಹಾಗೂ ಘಟಣೆಯ ತನಿಕೆಯನ್ನು ಮಾಡಲಾಗುತ್ತದೆ ಎಂದು ಸಿ.ಪಿ.ಐ. ವೀರಣ್ಣ ಹಳ್ಳಿ ತಿಳಿಸಿದ್ದಾರೆ 

ಸುದ್ದಿ ಓದಿ