ಬಳ್ಳಾರಿ

ಕ್ರೀಡಾ ಮೈದಾನ ಖಾಸಗಿ ಸಂಸ್ಥೆಗೆ ನಾಗರೀಕರ ಬೃಹತ್ ಪ್ರತಿಭಟನೆ

ಕ್ರೀಡಾ ಮೈದಾನ ಖಾಸಗಿ ಸಂಸ್ಥೆಗೆ ನಾಗರೀಕರ ಬೃಹತ್ ಪ್ರತಿಭಟನೆ

ಬಳ್ಳಾರಿ 28:  ನಗರದ ವಿಮ್ಸ್  ಕ್ರೀಡಾ ಮೈದಾನವನ್ನು ಖಾಸಗಿ ಸಂಸ್ಥೆಗೆ ನೀಡಿರುವುದನ್ನು ವಿರೋಧಿಸಿ ಭಾನುವಾರ ಬೆಳಂ, ಬೆಳಗ್ಗೆ ಮಕ್ಕಳು ಯುವಕರು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಗರೀಕರು ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ 6ಗಂಟೆಯಿಂದ 8:30 ತನಕ ಜಮಾವಣೆ ಸೇರಿದ ನಾಗರೀಕರು ಕ್ರೀಡಾ ಮೈದಾನವನ್ನು ಖಾಸಗಿ ಸಂಸ್ಥೆಯ ಬಳಕೆಗೆ ನೀಡಿರುವ ಕ್ರಮ ಖಂಡಿಸಿದರು.ಕಳೆದ 50 ವರ್ಷಗಳ ಹಿಂದಿನಿಂದಲೂ ಕೂಡ ನಾವು ಇಲ್ಲಿ ವಾಯುವಿಹಾರ ಮಾಡಿ ದಿನಚರಿಯನ್ನು ಆರಂಭ ಮಾಡುತ್ತಿದ್ದೇವೆ. ಈಗ ಖಾಸಗಿ ಸಂಸ್ಥೆಗೆ ಹೋಗುವುದರಿಂದ ನಮ್ಮ ವಾಯುವಿಹಾರಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ ಇದನ್ನು ಶುಲ್ಕ ಪಾವತಿಸಿ ಮಾಡಬೇಕೆಂದರೆ ಆಗುವುದಿಲ್ಲ. ಜೊತೆಗೆ ನಮಗೆ ಬೇರೆ ಕಡೆ ಹೋಗಲು ಅನುಕೂಲಗಳಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಸರ್ಕಾರ, ಈ ನಿರ್ಧಾರವನ್ನು ಕೈ ಬಿಡಬೇಕು.ಇಲ್ಲದೇ ಹೋದ ಸಂದರ್ಭದಲ್ಲಿ ಬಳ್ಳಾರಿಯ ಎಲ್ಲ ನಾಗರಿಕರನ್ನು ಜೊತೆಗೂಡಿ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಮಾತನಾಡಿ, ಬಳ್ಳಾರಿ ನಗರ ಅಭಿವೃದ್ಧಿಯನ್ನ ನಾವು ಸ್ವಾಗತಿಸುತ್ತಿದ್ದೇವೆ.ಆದರೆ, ಮಿನಿ ಕ್ರಿಕೆಟ್ ಸ್ಟೇಡಿಯಂ ಮಾಡಲು ಬಳ್ಳಾರಿ ನಗರದಲ್ಲಿ ಕೋಟೆ ಪ್ರದೇಶದಲ್ಲಿರುವ ಬಳ್ಳಾರಿ ಕ್ರಿಕೆಟ್ ಕ್ಲಬ್ 5 ಎಕರೆ ಮೈದಾನ ಇದೆ.ಜೊತೆಗೆ ಬಳ್ಳಾರಿ ಕ್ರೀಡಾಂಗಣ ರೇಡಿಯೋ ಪಾರ್ಕಿನಲ್ಲಿ ಐಟಿಐ ಕಾಲೇಜು ಮೈದಾನ ಸೇರಿದಂತೆ ನಗರದಲ್ಲಿ ಅನೇಕ ಮೈದಾನಗಳನ್ನು ಬಳಸಬಹುದು.ಆದರೆ, ಎಸ್ಪಿ ಸರ್ಕಲ್ ಇಂದ ಕುವೆಂಪುನಗರದ ವರೆಗೆ ವಾಯುವಿಹಾರಕ್ಕೆ ಅನುಕೂಲವಾಗುವ ಜಾಗವನ್ನು ಖಾಸಗಿ ಕಂಪನಿಗೆ ನೀಡುವುದು ಎಷ್ಟರ ಮಟ್ಟಿಗೆ ಸರಿ...?ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಮುಖಂಡ ಹನುಮ ಕಿಶೋರ್ ಮಾತನಾಡಿ, ಈ ಹೋರಾಟವನ್ನು ಸರ್ಕಾರದ ಮಟ್ಟಿಗೆ ಕೊಂಡೊಯ್ಯಲು ನಾವು ಸಿದ್ಧ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.ನಾಗರೀಕ ಕೃಷ್ಣ  ಮಾತನಾಡಿ, ನನಗೆ ಕಳೆದ 18ವರ್ಷಗಳಿಂದ ಸಕ್ಕರೆ ಕಾಯಿಲೆ ಇದೆ. ನಾನು ಇಲ್ಲಿಯವರೆಗೂ ಯಾವುದೇ ರೀತಿಯ ಔಷಧಿಗಳನ್ನು ಬಯಸುವುದಿಲ್ಲ. ಆದರೂ ನನ್ನ ಕಾಯಲೆ ನಿಯಂತ್ರಣದಲ್ಲಿದೆ. ಇದಕ್ಕೆ ಕಾರಣ ಒಂದೇ ಒಂದು ನಾನು ದಿನನಿತ್ಯ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಿರಂತರವಾಗಿ ವಾಯುವಿಹಾರ ವನ್ನು ಇದೆ ಮೈದಾನದಲ್ಲಿ ಮಾಡುತ್ತೇನೆ.ನನ್ನ ಎಲ್ಲಾ ಕಾಯಿಲೆಗಳು ನಿಯಂತ್ರಣದಲ್ಲಿದೆ ಯಾವುದೇ ಕಾರಣಕ್ಕೂ ಈ ಮೈದಾನವನ್ನು ಖಾಸಗೀಕರಣ ಬೇಡ ಎಂದು ಮನವಿ ಮಾಡಿದರು.ಮೇಕಳ ಈಶ್ವರ್ ರೆಡ್ಡಿ ,ಗಾದಿಲಿಂಗಪ್ಪ, ವಕೀಲರಾದ ಜನಾರ್ಧನ್, ನಾಗಭೂಷಣರಾವ್ , ಹಿರಿಯ ನಾಗರಿಕರಾದ ಗಂಗಣ್ಣ, ಪ್ರಭಾಕರ್ ನಾಯ್ಡು, ಗೋಪಾಲ್ ರಾಮು, ಗುರ್ರಂ ಮೋಹನ್,  ಹನುಮಯ್ಯ, ಮುತ್ಯಾಲಪ್ಪ,ಕ್ರೀಸ್ನ ರೆಡ್ಡಿ, ಸುಂಕಲಪ್ಪ,ಸಿದೇಶ್, ವಿಷ್ಣು ಡಾಕ್ಟರ್ ಪ್ರಮೋದ್, ಸೋಮಶೇಖರ್ ಗೌಡ ದೇವದಾಸ್ ಸುರೇಶ್ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಮ್ಸ್   ಸುಪರಿಡೆಂಟರ್ ಡಾ. ಮರಿರಾಜ್ ಅವರು ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಮನವಿ ಪತ್ರವನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ ಖಾಸಗೀಕರಣ ತಪ್ಪಿಸಲು  ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸುದ್ದಿ ಓದಿ