ವಿದ್ಯಾರ್ಥಿಗಳು ದೇಶದ ಅಮೂಲ್ಯ ಸಂಪತ್ತು : ನಡಹಳ್ಳಿ
ತಾಳಿಕೋಟಿ: ವಿದ್ಯಾರ್ಥಿಗಳು ದೇಶದ ಅತ್ಯಮೂಲ್ಯವಾದ ಸಂಪತ್ತಾಗಿದ್ದಾರೆ. ದೇಶದ ಭವಿಷ್ಯ ಅವರ ಕೈಯಲ್ಲಿದೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇದನ್ನು ಅವರೆಂದೂ ಮರೆಯಬಾರದು ಎಂದು ಶಾಸಕ ಹಾಗೂ ಅಧ್ಯಕ್ಷ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ 3ನೇ ವಾರ್ಡ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಲೋಟಸ್ ಫಾರ್ಮಸಿ ಕಾಲೇಜ ಹಾಗೂ ವಿಸಡಮ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಯೆ, ಕರುಣೆ, ಸಹಿಷ್ಣುತೆ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನಮ್ಮ ದೇಶದ ವಿಶೇಷತೆಯಾಗಿದೆ. ಇಲ್ಲಿಗೆ ಬಂದವರೆಲ್ಲರೂ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಭಾರತ ಇಂದು ಜಗತ್ತಿನ 5 ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ ಇಂಥಹ ಕಾಲಘಟ್ಟದಲ್ಲಿ ಜನಿಸಿದ ನಾವೆಲ್ಲರೂ ಅದೃಷ್ಟವಂತರಾಗಿದ್ದೇವೆ ಎಂದ ಅವರು ನಿಮ್ಮ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಈ ರಂಗದಲ್ಲಿ ಮುಂದುವರೆಯಲು ನಿಮಗೆ ಯಾವುದೇ ಅಡೆತಡೆಗಳಿಲ್ಲ. ಬಡತನ ನಿಮ್ಮ ಸಾಧನೆ ತೊಡಕಾಗಬಾರದು. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.
ನಾನೂ ಬಡಕುಟುಂಬದಿಂದಲೇ ಬಂದಿದ್ದೇನೆ ಶ್ರಮ ಪಟ್ಟು ಇಂದು ನಿಮ್ಮ ಮುಂದೆ ಈ ಸ್ಥಿತಿಯಲ್ಲಿ ನಿಂತಿದ್ದೇನೆ ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು.
ಈ ಸಮಯದಲ್ಲಿ ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ ಲೋಟಸ್ ಕಾಲೇಜ ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ, ಕಾರ್ಯದರ್ಶಿ ನೂರುಲ್ ಇಸ್ಲಾಂ, ವಿಸಡಂ ಪಿಯು ಕಾಲೇಜ ವ್ಯವಸ್ಥಾಪಕ ಫಾರೂಖ ಬಳವಾರ, ಪ್ರೊಢೆಸರ್ ಡಾ. ಅಬ್ದುಲ್ ರಹೆಮಾನ, ಶೊಯೇಬ ಅಖ್ತರ್ ಕೋರ್ತಿ , ಕುಮಾರಿ ಅರುಣಾ ದೇವೂರ, ನುಸರತ್ ಮಕಾಂದಾರ, ನರ್ಸಿಂಗ್ ಕಾಲೇಜ ಪ್ರಾಂಶುಪಾಲ ರಮೇಶ ಪವಾರ, ಜಯಶ್ರೀ ಪಾಟೀಲ, ಸಂತೋಷ ವಾಲಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು