ತಾಳಿಕೋಟಿ

ಶರಣರ ಬದುಕಿನ ಆದರ್ಶ ಪಾಲಿಸಿ: ರಾಮಲಿಂಗಯ್ಯ ಶ್ರೀ

ಶರಣರ ಬದುಕಿನ ಆದರ್ಶ ಪಾಲಿಸಿ:  ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ಜಗತ್ತಿಗೆ ಬಂದ ಎಲ್ಲ ಮಹಾತ್ಮರು, ದಾರ್ಶನಿಕರು ಹಾಗೂ ಶರಣ-ಸಂತರು ಮಾನವ ಜನಾಂಗದ ಏಳಿಗೆಗಾಗಿಯೇ ಕೆಲಸ ಮಾಡಿದ್ದಾರೆ. ಅವರ ಬದುಕಿನ ಆದರ್ಶಗಳು ಎಲ್ಲರಿಗೂ ಅನ್ವಯಿಸುತ್ತವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲರು ಮಾಡಬೇಕಾಗಿದೆ ಎಂದು ತಾಲೂಕಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರು, ಚಬನೂರ ಹಿರೇಮಠದ ಪೀಠಾಧಿಪತಿ ಜೋತಿಷ್ಯ ರತ್ನ ಪರಮಪೂಜ್ಯ  ರಾಮಲಿಂಗಯ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ  ಸಾಂಭಪ್ರಭು ಶರಣಮುತ್ತ್ಯಾರವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಂಭಪ್ರಭು ಶರಣಮುತ್ತ್ಯಾರವರು ಮಹಾನ್ ದಾರ್ಶನಿಕರಾಗಿದ್ದರು ಅವರು ಈ ಪುಣ್ಯಭೂಮಿಯಲ್ಲಿ ಆಧ್ಯಾತ್ಮಿಕತೆಯ ಸಂಪತ್ತನ್ನು ಬಿಟ್ಟುಹೋಗಿದ್ದಾರೆ ಅದು ಯಾರು ಕದಿಯದ ಸಂಪತ್ತಾಗಿದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಇದರಿಂದಲೇ ನಮ್ಮ ಜೀವನ ಪಾವನವಾಗುತ್ತದೆ. ಅವರ ಸಂದೇಶ ಎಲ್ಲ ಸಮಾಜದವರಿಗೂ ಅನ್ವಯಿಸುತ್ತವೆ. ಅಂಥಹ ಮಹಾತ್ಮರ ಜೀವನ ಚರಿತ್ರೆಯನ್ನು ಪ್ರತಿದಿನ ನಿಮ್ಮುಂದಿಡುವ ಪ್ರಯತ್ನವನ್ನು ಪ್ರವಚನಕಾರರಾದ ಶ್ರಿ ಪಡೇಕನೂರು ಶ್ರೀಗಳು ಮಾಡುತ್ತಿದ್ದಾರೆ. ಇಲ್ಲಿ ನೀವು ಆಲಿಸಿರುವದನ್ನು ಇಲ್ಲಿಯೇ ಮರೆತು ಹೋಗದೆ ಅದನ್ನು ಜೀವನದುದ್ದಕ್ಕೂ ಪಾಲಿಸಿ ಎಂದು ಕಿವಿಮಾತು ತಿಳಿಸಿದರು.

ಶರಣಮುತ್ತ್ಯಾರವರ ಜಾತ್ರಾಮಹೋತ್ಸವದ ಕಮೀಟಿ ವತಿಯಿಂದ ಜೋತಿಷ್ಯ ರತ್ನ ಪರಮಪೂಜ್ಯ ರಾಮಲಿಂಗಯ್ಯ ಸ್ವಾಮಿಗಳಿಗೆ ಸನ್ಮಾನಿಸಿ.

ವೇದಿಕೆಯಲ್ಲಿ ಪ್ರವಚನಕಾರ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶರಣ ಮುತ್ತ್ಯಾರ ಮಠದ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭೀಮಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೊಲೀಸ ಪಾಟೀಲ, ಸಂಗಮೇಶ ಶರಣರ, ಗವಾಯಿಗಳಾದ ಹನುಮಂತಕುಮಾರ ಬಳಗಾನೂರ, ಬಸನಗೌಡ ಬಿರಾದಾದ (ಚೊಕಾವಿ) ಇದ್ದರು 

ಸುದ್ದಿ ಓದಿ