ಬಳ್ಳಾರಿ

ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ, ಮನವಿ

ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ, ಮನವಿ

ಬಳ್ಳಾರಿ 20: ಉದ್ಯೋಗ ಸೃಷ್ಠಿಸಿ, ಸ್ಥಳೀಯರಿಗೆ ಆದ್ಯತೆ ನೀಡಿ ಉದ್ಯೋಗ ಕೊಡಿ, ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಡಿವೈಎಫ್ಐ ಜಿಲ್ಲಾ  ಸಮಿತಿಯ ನೇತೃತ್ವದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಪ್ರತಿಭಟನೆ ಮಾಡಿ ಮನವಿ ಅಪರ್ಿಸಲಾಯಿತು. 

ಪ್ರತಿಭಟನಾಕಾರರನ್ನು ಎರ್ರಿಸ್ವಾಮಿ ಅವರು ಮಾತನಾಡುತ್ತಾ  ಭಾರತ ದೇಶ ಜಗತ್ತಿನಲ್ಲಿ ಅತೀ ಹೆಚ್ಚಿನ ಮಾನವ ಸಂಪನ್ಮೂಲ ಹೊಂದಿದ ಎರಡನೇ ದೊಡ್ಡ ದೇಶವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು75 ವರ್ಷಗಳಾದರೂ ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಸೇರಿದಂತೆ ಘನತೆಯ ಬದುಕಿಗಾಗಿ ಜನ ಸಾಮಾನ್ಯರು ಪರದಾಡುವುದು ತಪ್ಪಿಲ್ಲ. ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ಬಡವರು ಬಡವರಾಗುತ್ತಲೇ ಇದ್ದು, ಶೇ.1 ರಷ್ಟಿರುವ ಶ್ರೀಮಂತರು ದೇಶದ ಅರ್ಧಕ್ಕಿಂತ ಹೆಚ್ಚು ಸಂಪತ್ತಿನ ಒಡೆಯರಾಗಿದ್ದಾರೆ. ಆದರೆ ಬಡತನದಿಂದ ಜನಸಾಮಾನ್ಯರನ್ನು ರಕ್ಷಿಸಬೇಕಾದ ಆಳುವ ಸರಕಾರಗಳ ನೀತಿಗಳು ಆಹಾರ ವಸ್ತುಗಳು, ಔಷಧಿಗಳು, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿರುವುದರಿಂದ ಜನತೆಗೆ ಜೀವನ ನಡೆಸುವುದೇ ಸವಾಲಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿರುವ ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಜಿ.ಎಸ್ಟಿ, ನೋಟ್ ಬ್ಯಾನ್, ಕೋವಿಡ್ ಅಸಮರ್ಪಕ ನಿರ್ವಹಣೆ,  ತಪ್ಪು ಆಥರ್ಿಕ ನೀತಿಗಳ ಹಾಗೂ ಉದ್ಯೋಗ ವಿರೋಧಿ ನೀತಿಗಳ ಪರಿಣಾಮವಾಗಿ ದೇಶದಲ್ಲಿ ಕೋಟ್ಯಂತರ ಜನರು ಇರುವ ಉದ್ಯೋಗಗಳನ್ನು ಕಳೆದುಕೊಂಡು ಪರದಾಡುವಂತಹ ದಾರುಣ ಸ್ಥಿತಿಯನ್ನು ತಲುಪಿದ್ದಾರೆ.

ದೇಶದ ಅಭಿವೃದ್ಧಿ ಮಂತ್ರ ಸದಾ ಜಪಿಸುವ ಬಿಜೆಪಿ ನೇತೃತ್ವದ ಕೇಂದ್ರ ಸಕರ್ಾರವವು ದೇಶದ ಬಹುದೊಡ್ಡ ಸಮಸ್ಯೆ ನಿರುದ್ಯೋಗ ಸಮಸ್ಯೆ ಇತ್ಯರ್ಥಪಡಿಸುತ್ತಿಲ್ಲ. ಕೇಂದ್ರ ಸಕರ್ಾರದ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ಮತ್ತು ದೇಶದ ಎಲ್ಲಾ ರಾಜ್ಯ ಸಕರ್ಾರಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರಕಾರ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಕೇಂದ್ರ ಸಕರ್ಾರದಡಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಕನರ್ಾಟಕದಲ್ಲಿಯೇ 2.5 ಲಕ್ಷ ಹುದ್ದೆಗಳು ಖಾಲಿ ಇವೆ.2018 ರ ಮಾಹಿತಿಯ ಪ್ರಕಾರ, 30.75 ಲಕ್ಷ ಹುದ್ದೆಗಳು ಖಾಲಿ ಇವೆ ಅದರಲ್ಲಿ ಕೇಂದ್ರ ಸಕರ್ಾರ, ರೈಲ್ವೆ, ಮಂಡಳಿಗಳು ಮತ್ತು ಬ್ಯಾಂಕುಗಳಲ್ಲಿ 7,21,665 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 1,60,688 ಹುದ್ದೆಗಳು, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ - 10,08,005, ಆರೋಗ್ಯ - 4,45,675, ಪೊಲೀಸ್ ಮತ್ತು ರಕ್ಷಣಾ - 1,95,939, ರಾಜ್ಯ ಪೊಲೀಸ್ ಪಡೆಗಳು - 5,38,237, ನ್ಯಾಯಾಂಗ ಇಲಾಖೆಯಲ್ಲಿ 5,525 ಹುದ್ದೆಗಳು ಖಾಲಿ ಇವೆ ಎಂದು ಆಯೋಗ ತಿಳಿಸಿದೆ.ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ: 2018-19 ರ ವರದಿ ಪ್ರಕಾರ ಒಂದು ಸಾವಿರ ಜನರಲ್ಲಿ 37 ಜನ ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದ 51 & ಗ್ರಾಮೀಣ ಭಾಗದಲ್ಲಿ 27 ಜನ ಇದಾರೆ. ಪ್ರತಿ ಸಾವಿರ ಮಹಿಳೆಯರಲ್ಲಿ ಒಟ್ಟಾರೆ 28 ಮಹಿಳೆಯರು ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದಲ್ಲಿ 61 & ಗ್ರಾಮೀಣ ಭಾಗದಲ್ಲಿ 14 ರಷ್ಟು ಜನರಿದ್ದಾರೆ.ಉದ್ಯೋಗ ನಾಶ: ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಅಒಇ) ವರದಿ ಪ್ರಕಾರ ಲಾಕ್ ಡೌನ್ ನಿಂದಾಗಿ 6% ಇದ್ದ ನಿರುದ್ಯೋಗ 20% ರಷ್ಟಾಗಿದೆ. 2020 ಏಪ್ರಿಲ್ ನಲ್ಲಿ ನಿರುದ್ಯೋಗ ದರ 26.3% ಏರಿಕೆಯಾಗಿ 29.8% ತಲುಪಿದೆ. ರಾಷ್ಟ್ರೀಯ ನಿರುದ್ಯೋಗ ಸರಾಸರಿ 23.5% ಇದ್ದಾಗ ರಾಜ್ಯದ ನಿರುದ್ಯೋಗ 29.8%ಕ್ಕೆ ಏರಿಕೆಯಾಗಿದೆ. ಇದು 2019 ರಲ್ಲಿ 0.5 ಇತ್ತು.ಕೌಶಲ್ಯ ಕರ್ನಾಟಕ ಡಾಟ್ ಕಾಮ್ ನಲ್ಲಿ (18-50 ವಯಸ್ಸಿನ) ಒಟ್ಟು 10,71,038 ಜನ ನೋಂದಾಯಿಸಿದ್ದಾರೆ. (ಮಹಿಳೆಯರು-4,36,415 & ಪುರುಷರು6,34,633) ಎಂಬುದಾಗಿ ಸರಕಾರದ ಆರ್ಥಿಕ ಸಮೀಕ್ಷೆ 2020-21 ರ ವರದಿ ಇದೆ. ಇದು ಪ್ರತಿವರ್ಷ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ.ಸ್ಥಳೀಯರಿಗೆ ದೊರೆಯದ ಉದ್ಯೋಗ: ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಸರಕಾರಕ್ಕೆ ಶಿಫರಸ್ಸು ನೀಡಿದ್ದ ಸರೋಜಿನಿ ಮಹಿಷಿ ಶಿಫಾರಸ್ಸುಗಳನ್ನು ಸರಕಾರಗಳು ನಿರ್ಲಕ್ಷಿಸಿರುವ ಪರಿಣಾಮವಾಗಿ, ಪ್ರಸ್ತುತವಿರುವ ಸಾರ್ವಜನಿಕ, ಖಾಸಗಿ ಒಡೆತನದ ಉದ್ಯಮಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರನ್ನು ನೇಮಿಸಿಕೊಳ್ಳುತ್ತಿರುವುದು ವ್ಯಾಪಕವಾಗಿದೆ. ದೇಶವು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿರುವ ಐತಿಹಾಸಿಕ ಹಾಗೂ ಮಹತ್ವದ ಸಂದರ್ಭದಲ್ಲಿ, ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧಮರ್ಾಂಧತೆ ಭಿತ್ತುತ್ತಿರುವುದು ಅಪಾಯಕಾರಿಯಾದುದು. ಉದ್ಯೋಗ ಸೃಷ್ಠಿಯ ಭರಾಟೆಯೊಂದಿಗೆ ಸರಕಾರಗಳು ಕಾರ್ಪೊರೇಟ್ ಕುಳಗಳು ಹಾಗೂ ದೇಶಿ ಹಾಗೂ ವಿದೇಶಿ ಬಂಡವಾಳಿಗರಿಗೆ ಕೈಗಾರಿಕಾ ಸ್ಥಾಪಿಸಲು ಭೂಮಿ ನೀಡುತ್ತಿವೆ. ಆದರೆ ಆ ಕಂಪೆನಿಗಳು ಕೈಗಾರಿಕೆ ಆರಂಭಿಸದೇ ಇರುವುದರಿಂದ ಉದ್ಯೋಗ ಸೃಷ್ಟಿ ಬರೀ ಭಾಷಣದಲ್ಲಿ ಉಳಿಯುತ್ತದೆ. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಯುವಜನ ಸಂಘಟನೆಯು, ಉದ್ಯೋಗ ಸೃಷ್ಠಿಸಿ, ಸ್ಥಳೀಯರಿಗೆ ಉದ್ಯೊಗ ಒದಗಿಸಲು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ. ಉದ್ಯೋಗ ಕೊಡಿ, ಇಲ್ಲವೇ ರೂ. 10,000 ನಿರುದ್ಯೋಗ ಭತ್ಯೆಕೊಡಿ ಎಂದು ಒತ್ತಯಿಸಿದರು.  

ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾ ಅಧ್ಯಕ್ಷರು ಯು. ಎರ್ರಿಸ್ವಾಮಿ, ಉಪಾಧ್ಯಕ್ಷರು ಎಸ್ ಶಂಕರ್ ಗೌಡ,ಬೈಲ ಹನುಮಪ್ಪ, ಹೊನ್ನೂರ್ ಸಾಬ್ಎ, ತಿಪ್ಪೇರುದ್ರ,ಪಿ ಬಿ ನವೀನ್ ಲೋಕೇಶ್, ಎಚ್  ಎರ್ರಿಸ್ವಾಮಿ,ಉ. ಓ ಎರ್ರಿಸ್ವಾಮಿ ರಾಮಾಂಜನಿ, ಯು ಸಿದ್ದಪ್ಪ,ಯು ರಮೇಶ್, ಯು ಎರರ್ಿಸ್ವಾಮಿ, ಕೆ ರಮೇಶ್, ಇನ್ನು  ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ