ತಾಳಿಕೋಟಿ

ನಮ್ಮ ಹಕ್ಕು ಕೇಳುತ್ತಿದ್ದೇವೆ ಭೀಕ್ಷೆ ಅಲ್ಲ: ರಾಮಲಿಂಗಯ್ಯ ಶ್ರೀ

ನಮ್ಮ ಹಕ್ಕು ಕೇಳುತ್ತಿದ್ದೇವೆ ಭೀಕ್ಷೆ ಅಲ್ಲ: ರಾಮಲಿಂಗಯ್ಯ ಶ್ರೀ

ತಾಲೂಕಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ತಾಳಿಕೋಟಿ: ಬೇಡ ಜಂಗಮ ಸಮಾಜ ಇಂದು ಸಂಘಟಿತವಾಗಿದೆ ನಮ್ಮ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವದರಿಂದ ನಾವು ಮೀಸಲಾತಿಯನ್ನು ಕೇಳುತ್ತಿದ್ದೇವೆ. ನಮ್ಮ ಈ ಹೋರಾಟ ಯಾರ ವಿರುದ್ಧವೂ ಅಲ್ಲ ಇದು ಸಂವಿಧಾನದ ಚೌಕಟ್ಟಿನಲ್ಲಿ ನಡೆಯುತ್ತಿರುವ ಹೋರಾಟ ಇದಕ್ಕೆ ಸಮಾಜ ಎಲ್ಲ ರೀತಿಯಲ್ಲೂ ಸಿದ್ಧವಾಗಿರಬೇಕಾಗಿದೆ ಎಂದು ತಾಲೂಕಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಜೋತಿಷ್ಯರತ್ನ ಪರಮಪೂಜ್ಯ  ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.

ಬುಧವಾರ ಪಟ್ಟಣದ ಅಡತ್ ಮರ್ಚಂಟ್ ಸಭಾಭವನದಲ್ಲಿ ಹಮ್ಮಿಕೊಂಡ ತಾಲೂಕ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಳಿಕೋಟಿ ತಾಲೂಕಿನ ನೂತನ ಪದಾಧಿಕಾರಿಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೇಡ ಜಂಗಮ ಸಮಾಜವನ್ನು ತಾಲೂಕಿನಾದ್ಯಂತ ಸಂಘಟಿಸುವಲ್ಲಿ ನನಗೆ ಎಲ್ಲ ಪೂಜ್ಯರು ಸಹಕರಿಸಿದ್ದಾರೆ. ಅವರು ನನಗೆ ಬೆನ್ನೆಲುಬಾಗಿ ನಿಂತಿರುವುದರಿಂದಲೇ ಈ ಕೆಲಸ ಮಾಡಲು ಸಾಧ್ಯವಾಗಿದೆ. ಸಮಾಜದ ಬಾಂಧವರ ಸಹಕಾರ ನಾನೆಂದೂ ಮರೆಯುವದಿಲ್ಲ. ನಮ್ಮ ಸಮಾಜದ ಮಹಿಳೆಯರೂ ನನ್ನ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ನಾವೆಲ್ಲರೂ ಒಂದು ಶಕ್ತಿಯಾಗಿ ಕೆಲಸ ಮಾಡಿದರೆ ನಮಗೆ ನ್ಯಾಯ ಸಿಕ್ಕೇಸಿಗುತ್ತದೆ ಎಂದರು.

ಕುಂಟೋಜಿ ಹಿರೇಮಠದ ಪರಮಪೂಜ್ಯ ಚನ್ನವೀರ ಮಹಾಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಜಂಗಮನಾದವನು ಜಂಗಮ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ನಾವೆಂದೂ ಜಾತಿ ಹೋರಾಟ ಮಾಡಿದವರಲ್ಲ. ಗುರುವಿನ ಸ್ಥಾನದಲ್ಲಿ ಸಮಾಜದ 99 ಉಪಪಂಗಡಗಳ ಒಳಿತನ್ನು ಬಯಸಿದವರು ಆದರೆ ನಮಗೆ ನಮ್ಮ ಸಮಾಜ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಇದಕ್ಕೆ ಸಮಾಜವನ್ನು ಸಂಘಟಿಸಿ ಕೆಲಸ ಮಾಡುತ್ತಿರುವ ರಾಮಲಿಂಗಯ್ಯನವರ ಕಾರ್ಯ ಶ್ಲಾಘನೀಯವಾಗಿದೆ ಅವರ ಈ ಹೋರಾಟ ವ್ಯರ್ಥವಾಗಬಾರದು. ಅವರಿಗೆ ನಮ್ಮೆಲ್ಲರ ಸಹಕಾರ ಇದೆ ಎಂದರು.

ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಶ್ರೀಗಳು ಮಾತನಾಡಿ ರಾಮಲಿಂಗಯ್ಯ ಶ್ರೀಗಳು ಸಮಾಜವನ್ನು ಸಂಘಟಿಸಲು ಹಗಲು-ರಾತ್ರಿಯನ್ನದೆ ಕಷ್ಟಪಡುತ್ತಿದ್ದಾರೆ. ಸಂಘಟನೆ ಎಂಬುದು ಅತಿ ಕಷ್ಟದ ಕೆಲಸವಾಗಿದೆ ಅದಕ್ಕೆ ಸಹನೆ ಬೇಕು. ಬೆಂಗಳೂರಿನ ಫ್ರೀಡಂ ಪಾಕರ್ನಲ್ಲಿ ವಕೀಲರಾದ ಬಿ.ಡಿ. ಹಿರೇಮಠ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರೆ.  ಇಲ್ಲಿ ರಾಮಲಿಂಗಯ್ಯ ಶ್ರೀಗಳು ಅವರನ್ನು ಬಿಂಬಿಸಲು ಸಮಾಜವನ್ನು ಸಂಘಟಿಸುತ್ತಿರುವುದು ಶ್ಲಾಘನೀವಾಗಿದೆ ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲೋಣ ಎಂದರು.

ವಡವಡಗಿಯ ವೀರಸಿದ್ಧಮಹಾಸ್ವಾಮಿಗಳು ರಾಜ್ಯ ಬೇಡ ಜಂಗಮ ಸಂಘದ ಮುಖಂಡ ಸಿದ್ಧರಾಮಯ್ಯ ಹಿರೇಮಠ, ರಾಜ್ಯ ಕಾರ್ಯದಶರ್ಿ ಶಂಕ್ರಯ್ಯ ಹಿರೇಮಠ ಅವರು ಮಾತನಾಡಿದರು.

ಸಾಸನೂರದ ಪೂಜ್ಯ ಮಹಾಂತಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಪಡೇಕನೂರ ದಾಸೋಹ ವಿರಕ್ತ ಮಠದ ಮ.ನಿ.ಪ್ರ ಮಲ್ಲಿಕಾಜರ್ುನ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಾವದಗಿಯ ಪೂಜ್ಯರಾದ ಶ್ರೀ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬೇಡ ಜಂಗಮ ಕ್ಷೇಮಾಭಿವೃದ್ಧಿ ತಾಲೂಕಾ ಸಂಘದ 58 ನೂತನ ಪದಾಧಿಕಾರಿಗಳನ್ನು ಪದಗ್ರಹಣ ನಡೆಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿವಿ ಸಂಗದ ಅಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ, ಬಸಯ್ಯ ಶಾಸ್ತ್ರಿಗಳು ಹಿರೇಮಠ (ಯಾಳವಾರ), ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಸಂಜೀವಕುಮಾರ ಹಿರೇಮಠ, ಎಸ್.ಎಂ.ಬೇನಾಳಮಠ, ಕುಮಾರಸ್ವಾಮಿ ಮಠ, ಈರಯ್ಯ ಮಠ, ಶರಣಯ್ಯ ಹಿರೇಮಠ, ತಾಲೂಕಾ ಮಹಿಳಾ ಘಟಕ ಅಧ್ಯಕ್ಷ ಸುಜಾತಾ ರಾಮಗಿರಿ ಮಠ ಇದ್ದರು 

ಸುದ್ದಿ ಓದಿ